ಶಿಕ್ಷಣ ಹಕ್ಕು ಅಭಿಯಾನ

ದಾವಣಗೆರೆ.ಮಾ.೨೯; ಧ್ವನಿ ಲೀಗಲ್ ಟ್ರಸ್ಟ್ ಕಾನೂನು ನೆರವು ಸಂಸ್ಥೆ ಬೆಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್ ಸಹಯೋಗದೊಂದಿಗೆ, ಶಿಕ್ಷಣ ಹಕ್ಕು ಅಭಿಯಾನ ನಡೆಯುತ್ತಿದ್ದು, ಆರ್ ಟಿ ಇ ಮೂಲಕ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಪ್ರವೇಶ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗಲು ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಹಾನಗರಪಾಲಿಕೆ ಸದಸ್ಯ ಗಡಿ ಗುಡಾಳ್ ಮಂಜುನಾಥ್ ವಿನಂತಿಸಿಕೊಂಡಿದ್ದಾರೆ.