ಶಿಕ್ಷಣ ಸಂಸ್ಥೆ ಹೆಮ್ಮರವಾಗಿ ಬೆಳೆಯಲಿ


ಹುಬ್ಬಳ್ಳಿ,ಜು.23: ಡಾ. ಶರಣಪ್ಪ ಕೊಟಗಿ ಅವರು ಸಂಸ್ಥಾಪಿಸಿದ ಶಿಕ್ಷಣ ಸಂಸ್ಥೆಯಗಳು ಹೆಮ್ಮೆರವಾಗಿ ಬೆಳೆಯಲಿ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ ಎಂದು ಸುಳ್ಳ-ಹೂಲಿ ಶ್ರೀ ಪಂಚಗ್ರಹ ಸಂಸ್ಥಾನ ಹಿರೇಮಠನ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಧಾರವಾಡದ ಸತ್ತೂರಿನ ಶ್ರೀ ಬಸವೇಯ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಲಪ್ಮೆಂಟ್ ಟ್ರಸ್ಟ್, ಶ್ರೀ ಸತ್ಯಸಾಯಿ ಕಾಲೇಜ್ ಆಫ್ ಹೋಮೋಪತಿಕ್ ಮೆಡಿಕಲ್ ಸಾಯಿನ್ಸ್ ಆ್ಯಂಡ್ ಹಾಸ್ಪಿಟಲ್ ಮತ್ತು ಅಶೋಕ ಕಣ್ಣಿನ ಆಸ್ಪತ್ರೆ, ಕಾರಟಗಿ ಸೂಪರ್ ಸ್ಪೆಷಲಟಿ ಆಸ್ಪತ್ರೆ, ಶ್ರೇಯಾ ಆಸ್ಪತ್ರೆ ಹಾಗೂ ಪ್ರೇಮ ಬಿಂದು ರಕ್ತ ನಿಧಿ ಕೇಂದ್ರ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ ಡಾ. ಶರಣಪ್ಪ ಎಂ. ಕೊಟಗಿಯವರ 58 ನೇ ಜನ್ಮದಿನದ ಸಮಾರಂಭದಲ್ಲಿ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು.
ಶರಣಪ್ಪ ಕೊಟಗಿ ಅವರು ಅಜಾತಶತ್ರುವಾಗಿದ್ದು, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಅವರು ಕೈಹಿಡಿದ ಕೆಲಸಗಳು ಯಶಸ್ವಿಯಾಗಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಡಾ. ವೀರಣ್ಣ ಮತ್ತಿಕಟ್ಟಿಯವರು ಮಾತನಾಡಿದರು ಡಾ. ಶರಣಪ್ಪ ಕೊಟಗಿ ಅವರು ಮಾತನಾಡಿ ನಮ್ಮ ಸಂಸ್ಥೆಯು ಸಮಾಜದಲ್ಲಿ ಉತ್ತಮ ಹೆಸರುವಾಸಿಯಾಗಿದ್ದು, ಅದರ ಶ್ರೇಯಸ್ಸು ಸಂಸ್ಥೆಯ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿಗಳಿಗೆ ಸಲ್ಲುತ್ತದೆ. ಇನ್ನೂ ಸಮಾಜದಲ್ಲಿನ ಬಡ ಹಾಗೂ ಮಧ್ಯಮ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಉದ್ದೇಶವೇ ನಮ್ಮದಾಗಿದೆ ಎಂದರು.
ಮುಖಂಡರಾದ ಮೋಹನ್ ಹೊಸಮನಿ, ಸಂಸ್ಥೆಯ ಟ್ರಸ್ಟಿಗಳಾದ ಮೃತ್ಯುಂಜಯ ಕೊಟಗಿ, ನಾಗರಾಜ್ ಕೊಟಗಿ, ಪ್ರವೀಣ್ ಕೊಟಗಿ, ಹೋಮಿಯೋಪಥಿಕ್ ಕಾಲೇಜಿನ ಆಡಳಿತಧಿಕಾರಿಗಳಾದ ಡಾ. ಕಿರಣ ಸಾಣಿಕೊಪ್ಪ, ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸಸಾನೂರ್, ಡಾ. ಎನ್.ಎಸ್.ದೊಡ್ಡಮನಿ, ಡಾ. ಆನಂದ ರಾಮದುರ್ಗ, ಡಾ. ಪ್ರದೀಪ್ ಕಮ್ಮಾರ, ಕಾಲೇಜಿನ ಪ್ರಾಚಾರ್ಯರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.