ಶಿಕ್ಷಣ ಸಂಸ್ಥೆ ಮಾನ್ಯತೆ ರದ್ದು ಮಾಡಲು ಕರ್ನಾಟಕ ಏಕತಾ ವೇದಿಕೆ ಒತ್ತಾಯ

 ದಾವಣಗೆರೆ.ನ.೧೫; ಜಿಲ್ಲಾ ಮುಖ್ಯರಸ್ತೆಯಾದ ಹದಡಿ ರಸ್ತೆಯಲ್ಲಿ ಒಂದು ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ತನ್ನ ಪದವಿ ಪೂರ್ವ ಕಾಲೇಜನ್ನು ನಡೆಸುತ್ತಿರುವ ಶಿಕ್ಷಣ ಸಂಸ್ಥೆಯ ಮಾನ್ಯತೆ ರದ್ದು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಏಕತ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು , ಶಾಲೆಯ ಕಟ್ಟಡವು ಜಿಲ್ಲಾ ಮುಖ್ಯರಸ್ತೆಯ ಪಕ್ಕದಲ್ಲೇ ಇರುವುದರಿಂದ ಅಲ್ಲಿನ ಅಪಾರ ಸಂಖ್ಯೆಯ ವಿದ್ಯಾರ್ಥಿಗಳಿಂದ ಆ ರಸ್ತೆಯ ವಾಹನ ಸಂಚಾರಕ್ಕೆ ಅನೇಕ ಬಾರಿ ಅಡಚಣೆ ಉಂಟಾಗಿ ಸಾಕಷ್ಟು ಬಾರಿ ಅಪಘಾತಗಳಾಗಿರುವ ನಿದರ್ಶನಗಳಿವೆ. ಜೊತೆಗೆ ಕಾಲೇಜಿಗೆ ಆ ಭಾಗದಲ್ಲಿ ಹೇಗೆ ಶಿಕ್ಷಣ ಇಲಾಖೆಯಿಂದ ಅನುಮತಿ ನೀಡಿದರೆಂಬ ಅನುಮಾನವಿದೆ ಹಾಗೂ ಕಾಲೇಜಿನಿಂದ ಅನೇಕ ಕಡೆಗೆ ವಸತಿ ನಿಲಯಗಳು ನಡೆಯುತ್ತಿದ್ದು ಆ ಎಲ್ಲಾ ವಸತಿ ನಿಲಯಗಳಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವ ಅನುಮಾನಗಳಿವೆ. ಕಳೆದ ನ. 13 ರ ಶನಿವಾರ ಬೆಳಿಗ್ಗೆ ದಾವಣಗೆರೆ ಜಯನಗರದಿಂದ ಎಸ್.ಎಸ್. ಹೈಟೆಕ್ ಆಸ್ಪತ್ರೆಗೆ ಹೋಗುವ ಮುಖ್ಯರಸ್ತೆಯಲ್ಲಿರುವ ಬಿ.ವೈ.ಆರ್. ಹೈಟ್ಸ್ನಲ್ಲಿ ಕಾಲೇಜಿನ ಯುವತಿಯರ ವಸತಿ ನಿಲಯವಿದೆ. ಆ ನಿಲಯದಲ್ಲಿ ನಡೆದ ದೌರ್ಜನ್ಯದಿಂದ ಬೇಸತ್ತು ಯುವತಿಯೊಬ್ಬಳು ಬೆಳಿಗ್ಗೆ 10.30ಕ್ಕೆ ಬಿ.ವೈ.ಆರ್. ಹೈಟ್ಸ್ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಕೈಕಾಲುಗಳನ್ನು ಮುರಿದುಕೊಂಡು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆದ್ದರಿಂದ ತಾವುಗಳು ಈ ಕೂಡಲೇ  ಕಾಲೇಜಿನಲ್ಲಿ ನಡೆಯುತ್ತಿರುವ ಅನ್ಯಾಯ, ಅಕ್ರಮ ಹಾಗೂ ದೌರ್ಜನ್ಯಗಳ ಬಗ್ಗೆ ತನಿಖೆ ನಡೆಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹಾಗೂ  ಕಾಲೇಜಿನ ಆಡಳಿತ ಮಂಡಳಿಯು ದಾವಣಗೆರೆಯ ಹೊರಭಾಗದಲ್ಲಿರುವ ಇಂಡಸ್ಟಿçÃಯಲ್ ಏರಿಯಾದ ಪಕ್ಕದಲ್ಲಿರುವ ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ  ಬೃಹತ್ ಮಟ್ಟದ ದೊಡ್ಡ ಕಟ್ಟಡವನ್ನು ಅಕ್ರಮವಾಗಿ ಕಟ್ಟಿಸಿ ಅಲ್ಲಿ ವಸತಿ ನಿಲಯ ಹಾಗೂ ಪದವಿ ಪೂರ್ವ ಕಾಲೇಜನ್ನು ನಡೆಸುತ್ತಿದ್ದಾರೆ. ನೀರಾವರಿ ಇಲಾಖೆಗೆ ಸೇರಿದ ಜಾಗದಲ್ಲಿ ಕಟ್ಟಡವನ್ನು ಕಟ್ಟಲು ಇವರಿಗೆ ಅನುಮತಿ ನೀಡಿದವರ ಮೇಲೆ ಹಾಗೂ ಕಾಲೇಜಿನ ಆಡಳಿತ ಮಂಡಳಿಯ ಮೇಲೆ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕೆಂದು ರಾಜ್ಯಾಧ್ಯಕ್ಷರಾದ ಎನ್.ಹೆಚ್.ಹಾಲೇಶ್‌ ಒತ್ತಾಯಿಸಿದ್ದಾರೆ.  ಪ್ರತಿಭಟನೆಯಲ್ಲಿ ಯುವ ರಾಜ್ಯಾಧ್ಯಕ್ಷರಾದ ಮಂಜುನಾಯ್ಕ, ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಆರ್., ಬಿ. ಮಲ್ಲಿಕಾರ್ಜುನ, ಸುರೇಶ ಬಿ., ಪ್ರಕಾಶ್ ಆವರಗೆರೆ, ನಾಗರಾಜ, ಕುಮಾರ್, ಸುನೀಲ್, ಕಿರಣ್ ಕೆ.ಬಿ., ಮಲ್ಲಿಕಾರ್ಜುನ್, ದರ್ಶನ್ ಆರ್.ಎನ್., ಮಂಜುನಾಥ ಟಿ., ತರುಣ್ ಕೆ., ಲಿಖಿತ್ ಎಂ.ಆರ್., ಸುನೀಲ್, ರವಿ ಇನ್ನಿತರರು ಉಪಸ್ಥಿತರಿದ್ದರು.