
ರಾಯಚೂರು,ಜು.೨೪-ನಗರದ ಜ್ಞಾನಗಂಗಾ ಶಾಲೆ ಬಡ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ನೀಡುತ್ತಿದ್ದು, ಗುಣಮಟ್ಟದ ಶಿಕ್ಷಣ ಸಂಸ್ಥೆಯಲ್ಲಿ ಜ್ಞಾನಗಂಗಾ ಶಿಕ್ಷಣ ಸಂಸ್ಥೆ ಹೆಸರುವಾಸಿಯಾಗಿದೆ ಎಂದು ಶಾಸಕ ಡಾ.ಎಸ್.ಶಿವರಾಜ ಪಾಟೀಲ್ ಹೇಳಿದರು.
ಅವರು ಜು.೨೩ ರ ಶನಿವಾರ ದಂದು ಜ್ಞಾನಗಂಗಾ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಎಸ್ ಎಸ್ಎಲ್ಸಿ ಹಾಗೂ ದ್ವಿತೀಯ ಪಿ ಯುಸಿ ಪರೀಕ್ಷೆಯಲ್ಲಿ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ
ಉದ್ಘಾಟಿಸಿ ಮಾತನಾಡುತ್ತಾ, ಜ್ಞಾನ ಗಂಗಾ ಶಿಕ್ಷಣ ಸಂಸ್ಥೆ ಸಮಾಜಪರ ಕಾಳಜಿಯನ್ನು ಹೊಂದಿ ಕೆಲಸ ಮಾಡಿಕೊಡುತ್ತಿದೆ. ಸರ್ಕಾರದ ಯಾವುದೇ ಸೌಲಭ್ಯ ಇಲ್ಲದಿದ್ದರೂ ಕೂಡ ಬಡಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯವಾಗಿದೆ.
ನಗರದ ಹಲವು ಶಾಲೆಗಳಲ್ಲಿ ಅತಿ ಹೆಚ್ಚು ಡೋನೆಷನ್ ವಸೂಲಿ ಮಾಡುತ್ತಿವೆ. ಆದರೇ ಜ್ಞಾನ ಗಂಗಾ ಶಾಲೆ ಪಾಲಕರಿಗೆ ಹೊರೆಯಾಗದಂತೆ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ ಎಂದರು. ವಿದ್ಯಾ ರ್ಥಿಗಳು ಪರಿಶ್ರಮಪಟ್ಟು ಅಭ್ಯಾಸ ಮಾಡುವ ಮೂಲಕ ಸಾಧನೆ ಮಾಡ ಬೇಕು ಎಂದು ಸಲಹೆ ಮಾಡಿದರು. ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಸಹಾಯ ಸಹಕಾರ ಮಾಡುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಕಡಗೋಲು ಆಂಜನೇಯ್ಯ, ಬಿಇಓ ಪ್ರಭು, ನಗರಸಭೆ ಸದಸ್ಯರಾದ ಶಶಿರಾಜ, ಹರೀಶ್ ನಾಡಗೌಡ, ಎನ್.ಕೆ.ನಾಗರಾಜ, ಬಿಜೆಪಿ ಮುಖಂಡ ಕಡಗೋಲು ಅಂಜಿನಯ್ಯ, ನಗರಸಭೆ ಮಾಜಿ ಸದಸ್ಯರಾದ ಪಿ.ಯಲ್ಲಪ್ಪ, ಸುಭಾಶ ಅಸ್ಕಿಹಾಳ, ರೋಟರಿ ಕ್ಲಬ್ ಕಾರ್ಯದರ್ಶಿ ಎನ್.ಶಿವಶಂಕರ ವಕೀಲ, ನಿವೃತ್ತ ಪೊಲೀಸ್ ಅಧಿಕಾರಿ ರಾಮಣ್ಣ, ನಿವೃತ್ತ ಬಿಇಓ ನರಸಪ್ಪ, ಗಂಗಮ್ಮ, ಜ್ಞಾನಗಂಗಾ ಶಿಕ್ಷಣ ಸಂಸ್ಥೆಯ ರಾಜಾ ಶ್ರೀನಿವಾಸ ಸೇರಿದಂತೆ ಉಪಸ್ಥಿತರಿದ್ದರು.