
ಆಳಂದ:ಮಾ.2: ಇಂದಿನ ಗಣಕಯಂತ್ರ ಯುಗದಲ್ಲಿ ಗ್ರಾಮೀಣ ಭಾಗದಲ್ಲಿನ ಕನ್ನಡ ಖಾಸಗಿ ಶಿಕ್ಷಣ ಸಂಸ್ಥೆಗಳು ಉಳಿದು ಬೆಳೆಯಬೇಕಾದರೆ ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಮಾಡಿಯಾಳ ವಪ್ಪತೇಶ್ವರ ಮಠದ ಮರುಳಸಿದ್ಧ ಮಹಾಸ್ವಾಮಿಗಳು ಹೇಳಿದರು.
ಪೂರ ಗ್ರಾಮದ ಇಂದಿರಾ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಸರ್ಕಾರ ಸಾಕಷ್ಟು ಯೋಜನೆಗಳು ತಂzರು ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲಾ, ಹೀಗಾಗಿ ಪಾಲಕರು ಖಾಸಗಿ ಶಾಲೆಯತ್ತ ವಾಲುತ್ತಿದ್ದಾರೆ. ಕಡಿಮೆ ಸಂಬಳದಲ್ಲಿ ಶಿಕ್ಷಕರು ಪಾಠಮಾಡಿ ಗ್ರಾಮೀಣ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶ್ರಮಿಸುತ್ತಿದ್ದಾರೆ ಎಂದರು.
ಕಲಬುರಗಿ ದಿಶ್ಯಾ ವಿಜ್ಞಾನಿ ಕಾಲೇಜು ಅಧ್ಯಕ್ಷ ಶಿವಾನಂದ ಕಜುರಗಿ ಮಾತನಾಡಿ, ಗ್ರಾಮೀಣ ಅಥವಾ ನಗರ ಪ್ರದೇಶದಲ್ಲಿ ಖಾಸಗಿ ಶಾಲಾ ಕಾಲೇಜುಗಳು ನಡೆಯಬೇಕಾದರೆ ಅಲ್ಲಿನ ಪರಿಸರ ಜನರ ಸಹಕಾರ ಅಗತ್ಯವಾಗಿದೆ ತಿಳಿಸಿದರು. ಕಲಬುರಗಿ ಕೆಎಂಎಫ್ ನಿರ್ದೇಶಕ ಈರಣ್ಣಾ ಝಳಕಿ ಉದ್ಘಾಟಿಸಿದರು.
ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗುರುಲಿಂಗ ಜಂಗಮ ಪಾಟೀಲ್ ಅಧ್ಯಕ್ಷತೆ ವಹಿಸಿದರು. ಪೃಥ್ವಿರಾಜ ಪಾಟೀಲ್, ಈರಣ್ಣಾ ಶೇಗಜಿ, ಆಲೂಗೌಡ ಪಾಟೀಲ್, ಡಾ. ರಾಕೇಶ ಚವ್ಹಾಣ , ಚಂದ್ರಶೇಖರ ಶೇಗಜಿ, ಸಂಸ್ಥೆಯ ಕಾರ್ಯದರ್ಶಿ ವಿಶಾಲಾ ಎಸ್. ತೇಲ್ಕರ್, ಶಿವಪುತ್ರ ಆಳಂದ, ಈರಣ್ಣಾ ದೇವಿಂದ್ರ ನಾಟೀಕರ, ಶ್ರೀಶೈಲ ಆಳಂದ , ಯಲ್ಲಾಲಿಂಗ ಮನಿಗಿಣಿ, ಪಂಡಿಥ ಪೂಜಾರಿ, ಆನಂದರಾವ , ನಾರಾಯಣರಾವ ಕುಲಕರ್ಣಿ ಇದ್ದರು. ಸಂಸ್ಥೆಯ ಅಧ್ಯಕ್ಷ ಶಿವಲಿಂಗ ತೇಲ್ಕರ್ ಸ್ವಾಗತಿಸಿದರು. ಮುಖ್ಯ ಶಿಕ್ಷಕಿ ಅಂಬಿಕಾ ಅಷ್ಠಗಿ ನಿರೂಪಿದರು, ವಿದ್ಯಾಶ್ರೀ ವಂದಿಸಿದರು. ತಂಗೆಮ್ಮ, ವೇಣುಬಾಯಿ, ಮೀನಾಕ್ಷಿ ಮಕ್ಕಳಿಂದ ವಿವಿಧ ಕಾರ್ಯಕ್ರಮ ನಡೆಸಿಕೊಟ್ಟರು.