ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಸ್ಥಾನ ಮಹತ್ವದು- ಡಾ ಶಿವರಾಜ ಪಾಟೀಲ

ರಾಯಚೂರು,ಸೆ.೧೧-ರೋಟರಿ ಕಬ್ಲ್ ಮತ್ತು ಇನರ್ ವಿಲ್ ಕ್ಲಬ್ ಸಂಯು?ಕ್ತ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಕಾರ್ಯಕ್ರಮ ಹಮ್ಮಿಕೊಂಡಿಲಾಗಿತ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ಡಾ ಶಿವರಾಜ ಪಾಟೀಲ ಮಾತನಾಡಿ”ಶಿಕ್ಷಣ ವ್ಯವಸ್ಥೆಯಲ್ಲಿ ಗುರುವಿನ ಸ್ಥಾನ ದೊಡ್ಡದಾಗಿದ್ದು, ಅದರ ಪಾವಿತ್ರ್ಯತೆ, ಮಹತ್ವ ಉಳಿಸಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಶಿಕ್ಷಕರ ತಮ್ಮ ಸೇವೆಯನ್ನು ಸರಿಯಾಗಿ ಮಾಡಿದರೆ ದೇಶಕ್ಕೆ ಒಳ್ಳೆಯ ವ್ಯಕ್ತಿತ್ವ ಪ್ರಜೆಯ ನೀಡಬಹದು ೨೧ನೇ ಶತಮಾನದಲ್ಲಿ ಶಿಕ್ಷಕರ ಆಧುನಿಕ ಸವಾಲು ಎದುರಿಸಿ ತರಬೇತಿ ಪಡೆದು ಉತ್ತಮ ಭೋದನೆ ಮಾಡುವುದು ಅಗತ್ಯ ಶಿಕ್ಷಕರಿಗೆ ಪ್ರಶಸ್ತಿಯ ನೀಡಿ ಗೌರವಿಸುವ ರೋಟರಿ ಕ್ಲಬ್ ಕೆಲಸ ಶಾಘಲಿನೀಯ ಎಂದರು
ಆರ್ ಗುರುನಾಥ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವರು ಮಾತನಾಡಿ “ಇಂದಿನ ಆಧುನಿಕ ಶಿಕ್ಷಣದಲ್ಲಿ ಮಕ್ಕಳಿ ಪಾಠ ಕಲಿಸುವ ಕೆಲಸ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿಯುತವಾಗಿದೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಅಗತ್ಯ ಇಂದಿನ ಆಧುನಿಕ ಯುಗದಲ್ಲಿ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಬಡ ಮಕ್ಕಳು ಶಿಕ್ಷಣ ಪಡೆಯುವದು ಕಷ್ಟವಾಗುತ್ತಿದೆ ಇದರಿಂದ ಅವರು ಶಿಕ್ಷಣದಿಂದ ವಂಚಿತರಾಗುತ್ತಿದ್ದರೆ ಅದಕಾರಣ ಸಮಾಜದ ಪ್ರತಿಯೊಬ್ಬರು ಬಡ ಮಕ್ಕಳಿಗೆ ಶಿಕ್ಷಣ ಪಡೆಯಲು ಅಗತ್ಯ ಈ ನಿಟ್ಟಿನಲ್ಲಿ ಶಿಕ್ಷಕರ ಹೆಚ್ಚಿನ ಶ್ರಮಿಸಿಬೇಕು ಎಂದರು
ರೊಟರಿ ಕಾರ್ಯದರ್ಶಿಯ ಎನ್ ಶಿವಶಂಕರ ವಕೀಲರು ಮಾತನಾಡಿ ” ಸಮಾಜದಲ್ಲಿ ನಿಸ್ವಾರ್ಥ ಸೇವೆ ಎಂದರೆ ಶಿಕ್ಷಕರ ಕೆಲಸ ,ಶಿಕ್ಷಕರ ತಮ್ಮ ವೈಯಕ್ತಿಕ ಜೀವನದ ಜೊತೆ ಮಕ್ಕಳನ್ನು ಒಳ್ಳೆಯ ಪ್ರಜೆಯಾಗಲು ಶ್ರಮಿಸುತ್ತಾರೆ,ಮಗುವಿಗೆ ತಾಯಿಗೆ ಮೊದಲ ಗುರುವಾದರೆ, ಶಿಕ್ಷಕ ವ್ಯಕ್ತಿತ್ವ ವಿಕಸನ ಮಾಡುವ ಗುರು ಆಗಿರುತ್ತದೆ, ಶಿಕ್ಷಕರು ತಮ್ಮ ಶಿಷ್ಯ ಉನ್ನತ ಸ್ಥಾನ ಪಡೆದಾಗ ತಾವು ಶಿಕ್ಷಣ ನೀಡಿದ್ದು ಸಾರ್ಥಕವಾಯಿತು ಎಂದು ಸಂತೋಷ ಪಡುತ್ತಾರೆ
ಇನರ್ ವಿಲ್ ಕಬ್ಲ್ ಅಧ್ಯಕ್ಷರಾದ ರೇಖಾಕೇಶವರೆಡ್ಡಿ ಮಾತನಾಡಿ ಶಿಕ್ಷಣ ಇಲಾಖೆಯಿಂದ ಕೆಲವು ಶಿಕ್ಷಕರಿಗೆ ಮಾತ್ರ ಉತ್ತಮ ಶಿಕ್ಷಕ ಪ್ರಶಸ್ತಿ ನೀಡುತ್ತಿದ್ದು , ಅದಕಾರಣ ರೋಟರಿ ಮತ್ತು ಇನರ್ ವಿಲ್ ಸಂಸ್ಥೆಯಿಂದ. ಪ್ರತಿವರ್ಷ ಪ್ರಶಸ್ತಿಯನ್ನು ಶಿಕ್ಷಕರಿಗೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಇಂದಿರಾ ,ಆದಿನಾರಯಣ, ಮಲ್ಲಿಕಾರ್ಜುನ, ಭೀಮಣ್ಣ, ರೇಣುಕ, ರಾಧದೇವಿ, ಮೀನಾಕ್ಷಿ, ಭಾರತಿ, ಜಾವಿದ್ , ಗೌರಮ್ಮ, ನಾಗರತ್ನ, ಅಬಿದಬೇಗಂ, ರಾಜಲಕ್ಷೀ, ಸಾರಿಕಾ, ರೂಪಸಿಂಗ್, ಶಂಕುತಲ, ಸುನೀತ, ಸುರೇಖಾ, ವಿದ್ಯಾವತಿ, ಉಮಾದೇವಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ವೇದಿಕೆಯ ಮೇಲೆ ರೋಟರಿ ಅಧ್ಯಕ್ಷ ಕೇಶವರೆಡ್ಡಿ, ಅಸ್ವೆಟಟ್ ಗೌರ್ನರ ಯಶವಂತ ಇನರ್ ಕ್ಲಬ್ ಶ್ರೀಮತಿ ಶುಶ್ಮ ಪಂತಗೆ ಅಧ್ಯಕ್ಷರು ಕಾರ್ಯದರ್ಶಿ ಅನಿತಾ ವೆಂಕಟೇಶ ರೋಟರಿ ಕ್ಲಬ್ ಸದಸ್ಯರು ಇನರ್ ವಿಲ್ ಕ್ಲಬ್ ಸದಸ್ಯರು ಉಪಸಿತದ್ದರು.