
ಮುಳಬಾಗಿಲು,ಮೇ.೨೨:ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗೆ ಅಡವಿಟ್ಟು ಬಡವರ ಶಿಕ್ಷಣವನ್ನು ಕಸಿಯುತ್ತಿರುವ ಜಿಲ್ಲಾ ಶಿಕ್ಷಣ ಉಪನಿರ್ದೇಶಕರ ಶಿಕ್ಷಣ ವಿರೋದಿ ನೀತಿಯನ್ನು ಖಂಡಿಸಿ ಮೇ.೨೫ ರ ಗುರುವಾರ ಜಾನುವಾರುಗಳ ಸಮೇತ ಶಿಕ್ಷಣ ಇಲಾಖೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಗುರುಕುಲದಿಂದ ಆರಂಭವಾದ ಶಿಕ್ಷಣ ವ್ಯವಸ್ಥೆ ಇಂದು ಕಾರ್ಪೋರೇಟ್ ಕಂಪನಿಗಳ ವ್ಯಾಪಾರದ ವಸ್ತುವಾಗಿ ಮಾರ್ಪಟ್ಟಿರುವುದು ದುರಾದೃಷ್ಠಕರ ಬಾಬಾ ಸಾಹೇಬ್ ಆಂಬೇಡ್ಕರ್‌ರವರ ಕನಸು ಕಟ್ಟಕಡೆಯ ವ್ಯಕ್ತಿಗೆ ಸಿಗಬೇಕಾದ ಶಿಕ್ಷಣ ಇಂದು ಸಿಗದೇ ಇರುವುದು ಮಾಹಾನ್ ವ್ಯಕ್ತಿಗೆ ಸರ್ಕಾರಗಳು ಮಾಡುವ ಅವಮಾನವಾಗಿದೆ ಎಂದು ಹದಗೆಟ್ಟಿರುವ ಶಿಕ್ಷಣ ವ್ಯವಸ್ಥೆ ವಿರುದ್ದ ಕಿಡಿ ಕಾರಿದರು.
ರಾಜ್ಯ ಪ್ರಧಾನ ಕಾರ್ಯದರ್ಶೀ ಪಾರುಕ್‌ಪಾಷ ಮಾತನಾಡಿ ಶಾಲೆಗಳ ಆರಂಭಕ್ಕೆ ಕೇಲವೇ ದಿನಗಳು ಬಾಕಿ ಇರುವಾಗ ಸರ್ಕಾರಿ ಶಾಲೆಗಳ ಅಭಿವೃದ್ದಿ, ಶಿಕ್ಷಕರ ಕೊರತೆ ಜೊತೆಗೆ ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಜಾಗೃತಿ ಮೂಡಿಸಿ ಹಾಜರಾತಿ ಹೆಚ್ಚಿಸಬೇಕಾದ ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಮಾಲೀಕರ ಜೊತೆ ಶಾಮೀಲಾಗಿ ಬಡವರ ಶಿಕ್ಷಣವನ್ನು ಕಸಿಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಸಂಬಂಳ ಪಡೆದು ಜಾತಿಗೊಂದು ಸಂಘಟನೆ ಮಾಡಿಕೊಂಡು ತಮ್ಮ ಕರ್ತವ್ಯವನ್ನು ಮರೆಯುವ ಶಿಕ್ಷಕರಿಗೆ ಕಡಿವಾಣ ಹಾಕಲು ಕಾನೂನು ಜಾರಿ ಮಾಡುವ ಜೊತೆಗೆ ಸರ್ಕಾರಿ ಶಾಲೆಗಳಿಗೆ ಅವಶ್ಯಕತೆ ಇರುವ ಬಟ್ಟೆ ಪುಸ್ತಕ ಮದ್ಯಾನದ ಊಟ ಮತ್ತಿತರ ಸೌಲಭ್ಯಗಳನ್ನು ಒದಗಿಸಿ ಖಾಸಗಿ ಶಾಲೆಗಳ ದುಬಾರಿ ಡೋನೆಷನ್ ಹಾವಳಿ ಹಾಗೂ ಆನದೀಕೃತ ಶಾಲೆಗಳ ಪತ್ತೆ ಹಚ್ಚಲು ವಿಶೇಷ ತಂಡ ರಚನೆ ಮಾಡುವಂತೆ ಮೇ.೨೫ ರ ಗುರುವಾರ ಜಾನುವಾರುಗಳ ಸಮೇತ ಕೋಲಾರ ಉಪ ನಿರ್ದೇಶಕರ ಕಚೇರಿ ಮುತ್ತಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕರೆದಿದ್ದ ಸಭೆಯಲ್ಲಿ ತಿರ್ಮಾನಿಸಲಾಯಿತು.
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್, ಹೆಬ್ಬಣಿ ಆನಂದ್‌ರೆಡ್ಡಿ, ಬಂಗಾರಿ ಮಂಜು, ವಿಜಯ್‌ಪಾಲ್, ಸುನಿಲ್‌ಕುಮಾರ್, ಭಾಸ್ಕರ್, ರಾಜೇಶ್, ಗುರುಮೂರ್ತಿ, ದೇವರಾಜ್, ವಿಶ್ವ, ಗೀರಿಶ್, ಚಂದ್ರಪ್ಪ, ಪದ್ಮಘಟ್ಟ ಧರ್ಮ, ನಂಗಲಿ ನಾಗೇಶ್, ರಾಮಸಾಗರ ವೇಣು, ಕದರಿನತ್ತ ಅಪ್ಪೋಜಿರಾವ್, ಇದ್ದರು.