ಶಿಕ್ಷಣ ಮನುಷ್ಯನನ್ನು ಬಲಿಷ್ಠರನ್ನಾಗಿಸುತ್ತದೆ

ಕೋಲಾರ.ಜು,೬ಸಮಾಜದ ಪ್ರತಿಯೊಬ್ಬರು ಶಿಕ್ಷಣದಿಂದ ವಂಚಿತರಾಗಬಾರದು, ಶಿಕ್ಷಣ ಮನುಷ್ಯನನ್ನು ಬಲಿಷ್ಠರನ್ನಾಗಿ ಮಾಡುತ್ತದೆ, ಪ್ರತಿಯೊಬ್ಬರು ಶಿಕ್ಷಣ ಕ್ರಾಂತಿಗೆ ಕೈಜೋಡಿಸಬೇಕು, ಈ ಮೂಲಕ ಸಮಾಜದ ಸವಾಂಗೀಣ ಪ್ರಗತಿ ಕಾಣಬಹುದು ಎಂದು ಬೆಂಗಳೂರು ಉತ್ತರ ಮಹಾ ವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಡಾ. ಸಿ.ಎಮ್. ಮುನಿಯಪ್ಪ ಅಭಿಪ್ರಾಯಪಟ್ಟರು
ನಗರದ ಸಂಚಿಕೆ ಕಾರ್ಯಾಲಯದಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಎಸ್ ಸಿ/ ಎಸ್ ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿಯು ತಮಗೆ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ಮನುಷನಿಗೆ ಬಡತನ ಶಾಶ್ವತ ಅಲ್ಲ, ಪ್ರತಿಯೊಬ್ಬರಲ್ಲೂ ಕಲಿಕೆಯ ಆಸಕ್ತಿ ಇರಬೇಕು. ಕಲಿಯುವ ವಿದ್ಯಾರ್ಥಿ ಆಗಬೇಕು, ಕಲಿಕೆಯ ಹಸಿವು ಇರಬೇಕು ಆಗ ಮಾತ್ರ ಕಲಿಕೆ ಶಾಶ್ವತ ಆಗುತ್ತದೆ ಎಂದರು.
ಇಂದಿನ ಪೈಪೋಟಿ ಜಗತ್ತಿನಲ್ಲಿ ತಂದೆ, ತಾಯಿ ಪೋಷಕರು ತಮ್ಮ ಮೇಲೆ ಇಟ್ಟಿರುವ ನಂಬಿಕೆಗೆ ಪಾತ್ರರಾಗಿ, ನಮ್ಮ ನಂತರದ ಜನಾಂಗವನ್ನು ಮುನ್ನಡೆಸಲು, ವಿದ್ಯಾವಂತರನ್ನಾಗಿ ಮಾಡಿಸಲು, ಪ್ರಾಮಾಣಿಕ ಪ್ರಯತ್ನ ಆಗಬೇಕು ಎಂದು ಹೇಳಿದರು
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಪಡೆಯಲು ಸ್ಪರ್ಧಾ ಮನೋಭಾವ ಬೆಳೆಸಿಕೊಂಡು, ವಿದ್ಯಾರ್ಥಿ ಯುವ ಸಮುದಾಯವನ್ನು ಜಾಗೃತಿ ಗೊಳಿಸುವ ಗುರುತರ ಜವಾಬ್ದಾರಿ ಸರ್ಕಾರಿ ನೌಕರರ ಮೇಲೆ ಇದೆ ಎಂದು ತಿಳಿಸಿದರು
ತಮಗ ದೊರೆತ ಗೌರವ ಸಮುದಾಯದ ಜನತೆಗೆ ಅರ್ಪಿಸುವುದಾಗಿ ಹೇಳಿದ ಅವರು ಸರ್ಕಾರಿ ನೌಕರರು ಶಿಸ್ತು, ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ಸರ್ಕಾರಿ ಸೇವೆಯನ್ನು ದೇವರ ಸೇವೆ ಎಂದು ಭಾವಿಸಿ ಕಾರ್ಯೋನ್ಮುಖರಾಗುವಂತೆ ಸಲಹೆ ನೀಡಿದರು.ಜಿಲ್ಲಾ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಜಿ.ಶ್ರೀನಿವಾಸ್, ಅಧ್ಯಕ್ಷ ರಾಮಾಂಜನೇಯ, ಪ್ರಧಾನ ಕಾರ್ಯದರ್ಶಿ ಮುಕುಂದ, ಜಿಲ್ಲಾ ಖಜಾಂಚಿ ಪದ್ಮಾವತಿ, ರಾಜ್ಯ ಪ್ರದಾನ ಮಹಿಳಾ ಪ್ರತಿನಿಧಿ ಸುನಿತ, ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಸಂಘಟನಾ ಕಾರ್ಯದರ್ಶಿ ರಾಜಣ್ಣ, ಚುಟುಕು ಸಾಹಿತ್ಯ ಪರಿಷತ್ ಕಾರ್ಯದರ್ಶಿ ಶರಣಪ್ಪ ಗಬ್ಬೂರು ಮತ್ತಿತರರು ಉಪಸ್ಥಿತರಿದ್ದರು.