ಶಿಕ್ಷಣ ಮತ್ತು ಧರ್ಮದ ಸಮ್ಮಿಲನದಿಂದ ಸಾಮರಸ್ಯತೆ ಸಾಧ್ಯ:- ಬಿ.ದೇವೇಂದ್ರಪ್ಪ 

ಸಂಜೆವಾಣಿ ವಾರ್ತೆ

ಜಗಳೂರು ಸುದ್ದಿ :- ಅಂಬೇಡ್ಕರ್ ಅವರ ಶಿಕ್ಷಣ ಮತ್ತು ಧರ್ಮದ ಸಮ್ಮಿಲನದಿಂದ ಸಾಮರಸ್ಯತೆ ಶಾಂತಿ ಸಾಧ್ಯ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿ ದರು.ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಮಹಾಶಿವರಾತ್ರಿ ಹಬ್ಬ ದ ಅಂಗವಾಗಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಾಗರಣಾ ರಾತ್ರಿ ಕಾರ್ಯಕ್ರಮದಲ್ಲಿ ಸಂವಿಧಾನ‌ಪೀಠಿಕೆ ನಾಮಫಲಕ ಅನಾವರಣಗೊಳಿಸಿ ನಂತರ ಮಾತನಾಡಿದರು.ವೈವಿದ್ಯತೆಯಲ್ಲಿ ಏಕತೆ ಸಾರುವ ದೇಶದಲ್ಲಿ ಧರ್ಮದಲ್ಲಿ ಕಂದಕಗಳು ಮೂಡಿವೆ.ಅಲ್ಲದೆ ಧರ್ಮದೊಳಗಿನ ಜಾತಿ ಜಾತಿಗಳ ಮಧ್ಯೆ ಸಹಬಾಳ್ವೆ,ಅನ್ಯೂನ್ಯತೆ ಕಣ್ಮರೆಯಾಗು ತ್ತಿದೆ.ಪ್ರತಿಯೊಬ್ಬರೂ ಧರ್ಮ ಮತ್ತು ಜ್ಞಾನ ಎರಡನ್ನೂ ಅರಿಯಬೇಕಿದೆ ಎಂದು ಸಲಹೆ ನೀಡಿದರು.ದೇಶದಲ್ಲಿ ಪ್ರತಿಯೊಬ್ಬ ಪ್ರಜೆಗೂ ಮೂಲಭೂತ ಹಕ್ಕು, ಮತ್ತು ಕರ್ತವ್ಯಗಳನ್ನು ಒದಗಿಸಿದ ಬಾಬಾಸಾಹೇಬರ ಸಂವಿಧಾನವೇ ಶ್ರೇಷ್ಠ ಗ್ರಂಥವಾಗಿದೆ‌.ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಪ್ರತಿ ಕಾರ್ಯಕ್ರಮದಲ್ಲೂ ಸಂವಿಧಾನ ಪೀಠಿಕೆ ಓದುವ ಮೂಲಕ ಜಾಗೃತಿ ಮೂಡಿ ಸುತ್ತಿದ್ದಾರೆ.ಅಂಬೇಡ್ಕರ್ ಜಾಗರಣೆ ರಾತ್ರಿ ವೈಚಾರಿಕತೆ ಕಾರ್ಯಕ್ರಮಕ್ಕೆ ಲೊಕೋಪಯೋಗಿ ಇಲಾಖೆ ಸಚಿವರು ಮಾನವಬಂಧುತ್ವ ವೇದಿಕೆ ರುವಾರಿಗಳಾದ ಮಾನ್ಯ ಸತೀಶ್ ಜಾರಕಿಹೊಳೆ ಅವರು ಸ್ಪೂರ್ತಿಯಾಗಿದ್ದಾರೆ. ಇದಕ್ಕೆ ತಾಲೂಕಿನ ಪ್ರಗತಿಪರ ಸಮಾನ ಮನಸ್ಕರು ಇಂದು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಮಾತನಾಡಿ,ಆಡಳಿತ ಮತ್ತು ವಿರೋಧ ಪಕ್ಷದವರು ಮಾಡಬೇಕಿದ್ದ ಸಂಸತ್ತಿನ ಉದ್ಘಾಟನೆಗೆ ಪುರೋಹಿತರು,ಬ್ರಾಹ್ಮಣರು ತೆರಳುತ್ತಾರೆ.ಆದರೆ ರಾಮ ಮಂದಿರದ ಉದ್ಘಾಟನೆಗೆ ದೇಶದ ಪ್ರಧಾನಿ ತೆರಳುತ್ತಾರೆ ಅಲ್ಲದೆ ರಾಮಸೀತೆಯರು ಬಹುತ್ವದ ಸಂಕೇತವಾಗಿದ್ದಾರೆ ಭೇಟಿ ಪಡಾವೋ,ಭೇಟಿ ಬಚಾವೋ ಎನ್ನುವ ಪ್ರಧಾನ ಮಂತ್ರಿಗಳಿಗೆ ಸೀತೆ ಬೇಕಿಲ್ಲ. ಕೇವಲ ರಾಮನನ್ನು ವೈಭವೀಕರಿಸುತ್ತಾರೆ.ಇದು ದೇಶದ ಸಂವಿಧಾನದ ಆಶಯಗಳಿಗೆ ವಿರುದ್ದವಾಗಿವೆ ಇದರಿಂದ ಸಂವಿಧಾನ ಗಡ್ಡೆಗೆ ಬೆಂಕಿಹಚ್ಚುವ ಹುನ್ನಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ.ಅಂದಿನ ಕಾಲದಲ್ಲಿ ಪದ್ಯದ ಮೂಲಕ ವೈಚಾರಿಕತೆ ಸಾರಿದ ಕುವೆಂಪು ಅವರನ್ನು ಪ್ರಸ್ತುತದಿನಮಾನದಲ್ಲಿ ದೇಶದ್ರೋಹಿ ಪಟ್ಟ ಕಟ್ಟುತ್ತಿದ್ದರು.ಎಂದು ಬೇಸರ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ ಪಾಲಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್ ,ನಿವೃತ್ತ ಉಪನ್ಯಾಸಕ ಸುಭಾಸ್ ಚಂದ್ರಬೋಸ್,ಸಮಾಜಕಲ್ಯಾಣ ಇಲಾಖೆ ನಿವೃತ್ತ ಸಹಾಯಕ‌ನಿರ್ದೇಶಕ ಮಹೇಶ್ವರಪ್ಪ,ಉಪನ್ಯಾಸಕ ಎಎಲ್ ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ, ಎನ್.ಟಿ. ಎರ್ರಿಸ್ವಾಮಿ,ಶಂಭುಲಿಂಗಪ್ಪ,ಹಟ್ಟಿ ತಿಪ್ಪೇಸ್ವಾಮಿ,ಪೂಜಾರ್ ಸಿದ್ದಪ್ಪ,ಕುಬೇಂದ್ರಪ್ಪ,ಸಣ್ಣಸೂರಜ್ಜ,ಓಬಣ್ಣ,ರಾಜಪ್ಪ ವ್ಯಾಸಗೊಂಡನಹಳ್ಳಿ,ಮಾದಿಹಳ್ಳಿ ಮಂಜುನಾಥ್, ಬಸವರಾಜ್,ಧನ್ಯಕುಮಾರ್,ಸತೀಶ್,ನಾಗಲಿಂಗಪ್ಪ,ಸೇರಿದಂತೆ ಇದ್ದರು.