‘ಶಿಕ್ಷಣ ಬಾಳಿನ ಸಂಪತ್ತು’ ಕೃತಿ ಬಿಡುಗಡೆಶಿಕ್ಷಣದಿಂದಲೆ ಸರ್ವಂಗೀಣ ಅಭಿವೃದ್ಧಿ ಸಾಧ್ಯ -ಮಾಸಿಮಾಡೆ

ಬೀದರಃ ಜೀವನದಲ್ಲಿ ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು’ ಎಂಬ ಮಹತ್ತರ ಜೀವನದ ಘಟ್ಟಗಳ ಕುರಿತಾದ ನಾಣ್ಣುಡಿಯಂತೆ ಸಾಧಿಸುವುದು ಜೊತೆಗೆ ಪುಸ್ತಕ ಹೊರತರುವುದೆಂದರೆ ಮಹತ್ತರ ಕಾರ್ಯವಾಗಿದೆ. ಅಂತಹ ಕಾರ್ಯವನ್ನು ಶಿಕ್ಷಕಿ ಜಗದೇವಿ ಬಸವರಾಜ ಹುಮನಾಬಾದೆ ಮಾಡಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅದ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು ನುಡಿದರು.
ಅವರು ಶುಕ್ರವಾದ ಬೀದರನ ಮಾಧವನಗರದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ‘ಶಿಕ್ಷಣ ಬಾಳಿನ ಸಂಪತ್ತು’ ಪುಸ್ತಕ ಬಿಡುಗಡೆಯ ನಂತರ ಮಾತನಾಡುತಿದ್ದರು. ಶಿಕ್ಷಣದಿಂದ ಸಕಲ ಗೌರವಗಳು ದೊರೆಯುತ್ತವೆ. ಭೌತಿಕ ಸಂಪತ್ತಿನಿಂದ ಶಾಂತಿ ನೆಮ್ಮದಿ ದೊರಕುತ್ತದೆ ಅಲ್ಲದೆ ವ್ಯಕ್ತಿತ್ವಕ್ಕೆ ಮೆರಗು ಬರುತ್ತದೆ. ಶಿಕ್ಷಣದಿಂದಲೆ ಸರ್ವಂಗೀಣ ಅಭಿವೃದ್ಧಿ ಸಾಧ್ಯ. ಆದ್ದರಿಂದ ಮನೆಗೊಂದು ಗ್ರಂಥಾಲಯವಿರಲಿ, ಅದಕ್ಕಾಗಿ ಕೋಣೆಯೊಂದಿರಲಿ ಎಂದು ಕಿವಿಮಾತು ಹೇಳಿದರು.
ಪ್ರಾಚಾರ್ಯ ಡಾ. ಬಸವರಾಜ ಬಲ್ಲೂರ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಚಾರಿತ್ರಿಕವಾಗಿ ಮಹತ್ತರ ಪಾತ್ರ ವಹಿಸುವ ಪುಸ್ತಕ ಮಾತ್ರ ಉಳಿಸಯುವುದು ಎಂದು ತಿಳಿಸಿದ ಅವರು ಜಗದೇವಿ ಬರೆದ ಗ್ರಂಥದಲ್ಲಿ 19 ಪ್ರಮುಖ ಲೇಖನಗಳು ಒಳಗೊಂಡಿದ್ದು, ಶಿಕ್ಷಣದ ಮಹತ್ವ, ಅರ್ಥ, ಪ್ರಾಮುಖ್ಯತೆ ಸೇರಿದಂತೆ ಶಿಕ್ಷಣದ ಹಲವು ವಿಷಯಗಳ ಕುರಿತು ಬರೆದಿದ್ದಾರೆ. ಪ್ರತಿಯೊಬ್ಬರೂ ಈ ಪುಸ್ತಕ ಓದಬೇಕೆಂದರು.

ಡಾ. ರಘುಶಂಖ ಭಾತಂಬ್ರಾ ಅವರು ಮಾತನಾಡಿ, ಈ ಕೃತಿ ಅಮೂಲ್ಯವಾಗಿದೆ. ಶೈಕ್ಷಣಿಕ ಪ್ರಗತಿಗೆ ದಾರಿದೀಪವಾಗಿದೆ. ಇಂಥ ಕೃತಿಗಳ ಮೂಲಕ ಲೇಖಕರು ಬದುಕು ಬಂಗಾರವಾಗಿಸಿಕೊಂಡಿದ್ದಾರೆ ಎಂದರು. ಪತ್ರಕರ್ತ, ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಮಪುರ ಅವರು ಮಾತನಾಡಿ, ಶಿಕ್ಷಕಿ, ಸಾಹಿತಿ, ಜಗದೇವಿ ಹುಮನಾಬಾದೆ ಅವರು ತಮ್ಮ ತಾಯಿಯ ಮನೆಯಲ್ಲಿರುವಾಗಲೇ ಬಸವತತ್ವ ಮತ್ತು ಸಾಹಿತ್ಯದ ನಿರಂತರ ಅಭ್ಯಾಸದಲ್ಲಿ ತೊಡಗಿದ್ದರು. ಆ ಪರಿಣಾಮವಾಗಿ ಇಮದು ಉತ್ತಮ ಕೃತಿಯನ್ನು ನೀಡಿದ್ದಾರೆ ಎಂದರು. ತಾವು ಪತ್ರಿಕೆಗಳಲ್ಲಿ ದುಡಿಯುತ್ತಿರುವಾಗ ಶ್ರೀಮತಿ ನಾಗಮ್ಮ ಮಾರುತಿ ಉಂಡೆಯವರ ಕುಟುಂಬದೊಂದಿಗಿನ ನಿಕಟ ಸಬಂಧ ಬಗ್ಗೆ ವಿವರಿಸಿದರು. ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಜೆಂದ್ರಕುಮಾರ ಗಂದಗೆ, ಭಾಲ್ಕಿ ಶ್ರೀಗಳು ಮನಾತನಾಡಿದರು.

  ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಅವರು ಮಾತನಾಡಿ, ಸಂಸ್ಕಾರ ಕಲಿಸುವಂತಹ ಕಾರ್ಯ ಮನೆಯಿಂದಲೇ ಆರಂಭವಾಗಬೇಕಾಗಿದೆ. ಪ್ರತಿ ಮನೆಗಳಲ್ಲಿ ಗ್ರಂಥಾಲಯಗಳು ಮಾಡಬೇಕು. ಶುದ್ಧ ಕನ್ನಡ ಪದಗಳನ್ನು ಬಳಸುವ ಮೂಲಕ ಮಾತ್ರ ಭಾಷೆಗೆ ಒತ್ತು ನಿಡಬೇಕಾಗಿರುವುದು ಅತ್ಯಂತ ಅವಶ್ಯಕವಾಗಿದೆ. ಅಲ್ಲದೆ ವೃದ್ಧಾಶ್ರಮಗಳಿಗೆ ಅವಕಾಶ ನೀಡದೆ ತಾಯಿ-ತಂದೆಯರನ್ನ ಮಕ್ಕಳು ಒಳ್ಳೆ ರೀತಿಯಿಂದ ನೋಡಿಕೊಳ್ಳುವಂತಹ ಉತ್ತಮ ವಾತಾವರಣ ನಿರ್ಮಾಣ ಮಾಡಬೇಕಾಗಿದೆ ಎಂದರು. ಮನೆ ಸಂಸ್ಕಾರಗಳ ಕೇಂದ್ರಗಳಾಗಬೇಕೆಂದು ಕರೆ ನೀಡಿದರು.

ದಿವ್ಯ ಸಾನಿಧ್ಯ ವಹಿಸಿರುವ ಹುಲಸೂರಿನ ಶ್ರೀ ಶಿವಾನಂದ ಮಹಾಸ್ವಾಮಿಯವರು ಮಾತನಾಡಿ, ಜಗತ್ತಿನಲ್ಲಿ ಜ್ಞಾನ ಸಂಪತ್ತಿನಿಗಿಂತ ಹೆಚ್ಚು ಇನ್ನೊಂದು ಸಂಪತ್ತಿಲ್ಲ, ಅದರಿಂದಲೇ ಜೀವನ ಹಸನಾಗಿರುವುದು ಎಂದರು. ಎಂ. ಎಸ್. ಮನೋಹರ ಅವರು ಮಾತನಾಡಿ ಕಸಾಪ ಶಾಲೆಗೊಂದು, ಹಳ್ಳಿಗೊಂದು, ಮನೆಯಂಗಳದಲ್ಲಿ ಮಾತು, ಪುಸ್ತಕಗಳ ಪ್ರಕಟಣೆ ಸೇರಿದಂತೆ ಹತ್ತು ಹಲವಾರು ರೀತಿಯ ಕಾರ್ಯಕ್ರಮ ಮಾಡುತ್ತಿದೆ ಎಂದರು.

ಪ್ರಾರಂಭದಲ್ಲಿ ಉಮೇಶ ಉಂಡೆ ಹಳ್ಳದಕೇರಿ ಸ್ವಾಗತಿಸಿದರು. ನವಲಿಂಗ ಪಾಟೀಲ ನಿರೂಪಿಸಿದರು. ಅಶೋಕ ದಿಡಗೆ ವಂದಿಸಿದರು. ವೇದಿಕೆಯ ಮೇಲೆ ಪರಿಷತ್ ಕಾರ್ಯದರ್ಶಿ ಟಿ. ಎಂ. ಮಚ್ಛೆ, ಶ್ರೀಮತಿ ಭಾರತಿ ವಸ್ತ್ರದ, ವಿ. ಎಂ. ಡಾಕುಳಗಿ, ಸಂಜೀವಕುಮಾರ ಅತಿವಾಳೆ, ಜಗದೇವಿ ಬಸವರಾಜ ಹುಮನಾಬಾದೆ, ಭಾತಂಬ್ರಾ ಉಪಸ್ಥಿತರಿದ್ದರು.