ಶಿಕ್ಷಣ ಪ್ರಗತಿಗೆ ಶ್ರಮಿಸಿ ಶೈಕ್ಷಣಿಕ ಫಲಿತಾಂಶ ಹೆಚ್ಚಿಸಿ: ಸಚಿವ ದರ್ಶನಾಪುರ ಕರೆ

ಶಹಾಪುರ:ಸೆ.16:ಪ್ರತಿ ಪರೀಕ್ಷೆಗಳ ಸರದಿಯ ಫಲಿತಾಂಶಗಳ ಸಾಲಿನಲ್ಲಿ ಯಾದಗಿರಿ ಜಿಲ್ಲೆ 30 ರ ಗಡಿ ದಾಟದೆ, ಯಥಾಸ್ಥಿತಿಯಲ್ಲಿದ್ದು. ಶಿಕ್ಷಕರು ಶಿಕ್ಷದ ಪ್ರಗತಿಗೆ ಶ್ರಮಿಸುವದರ ಮುಖಾಂತರ ಯಾದಗಿರಿ ಜಿಲ್ಲೆಯನ್ನು ಶೈಕ್ಷಣಿಕ ಫಲಿತಾಂಶಗಳ ಹೆಚ್ಚಳಕ್ಕೆ ಪ್ರಯತ್ನದತ್ತ ಸಾಗಬೇಕು. ಎಂದು ಕರ್ನಾಟಕ ಸರ್ಕಾರದ ಸಣ್ಣ ಕೈಗಾರಿಕೆ ಸಾರ್ವಜಿನಿಕ ಮಾಧ್ಯಮಗಳ ಮಂತ್ರಿಗಳಾದ ಶರಣಬಸ್ಸಪ್ಪಗೌಡ ದರ್ಶನಾಪುರವರು ಕರೆ ನೀಡಿದರು. ಅವರು ತಾಲುಕಿನ ಭೀ,ಗುಡಿಯ ಕೃಷಿ ವಿವಿಯ ಅಡಿಟೋರಿಯಲ್ ಸಭಾಂಗಣದಲ್ಲಿ ಹಮ್ಮಿಕೊಂಡ. ಯಾದಗಿರಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು, ಜಿಲ್ಲಾ ತಾಲುಕಾ ಅತ್ಯುತ್ತಮ ಪ್ರಶಸ್ತಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡಿದ ಅವರು, 31ರ ಸ್ಥಾನ ಪಲ್ಲಟವಾಗಲು ಶಿಕ್ಷಕರು ಕಾಳಜಿಯಿಂದ ಪರಿಶ್ರಮ ಪಡಬೇಕಾಗಿದೆ.ಸ್ವಾತಂತ್ರ್ಯೋತ್ತರ ಸಮಯದಲ್ಲಿ ಶೇ, 18 ರಷ್ಟು ಸಾಕ್ಷರೆತೆ ಹೊಂದಿದ್ದ ಭಾರತ ಇಂದು ವಿಶ್ವದಲ್ಲೆ ಮುಂದುವರೆದ ರಾಷ್ಟ್ರಗಳಲ್ಲಿ ಒಂದಾಗಿದೆ, ಆದರೆ ಇಂದು ಕರ್ನಾಟಕದಲ್ಲಿ ಶಿಕ್ಷಣಕ್ಕಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಅಲ್ಲದೆ ಕಲ್ಯಾಣ ಕರ್ನಾಟಕ ಅಭಿವೃದ್ದಿ ಭಾಗದಲ್ಲಿ ಪ್ರತಿ ವರ್ಷ ಶೈಕ್ಷಣಿಕ ಮೂಲಭೂತ ಸೌಕರ್ಯಗಳಿಗಾಗಿ ಕೊಟ್ಯಾಂತರ ಅನುಧಾನ ಉಪಯೋಗಿಸಲಾಗುತ್ತಿದೆ, ಇದರಿಂದ ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯಗಳಿಗೆ ಕೊರತೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವ ದರ್ಶನಾಪುರವರು. ಅಂದು ಹತ್ತಾರು ದಶಕಗಳ ಹಿಂದೆ ಶಾಲಾ ಕೊಣೆಗಳಿದ್ದವು, ಶಿಕ್ಷಕರಿರಲಿಲ್ಲ. ಇಂದು ಶಿಕ್ಷಣಕ್ಕಾಗಿ ಕೊಣೆಗಳಿಗೆ ಶಿಕ್ಷಕರಿಗೆ ಕೊರತೆ ಉಂಟಾಗುತ್ತಿದೆ. ಈ ವ್ಯವಸ್ಥೆಯನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅಥಿತಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ, ಎಂದು ತಿಳಿಸಿದ ಅವರು ತಂದೆ ತಾಯಿಂದಿರಿಗಿಮತಲೂ ಅತ್ಯಂತ ಗೌರವ ಶಿಕ್ಷಕರಿಗಿದೆ, ಅದನ್ನು ಮೌಲ್ಯಾಧಿರತವಾಗಿ ಕಾಪಾಡಿಕೊಳ್ಳಲು ಶಿಕ್ಷಣಕ್ಕಾಗಿ ಶಿಕ್ಷಕರು ಪರಿಶ್ರಮ ಪಡಬೆಕು. ಖಾಸಗಿ ಶಿಕ್ಷಣ ಮಟ್ಟಕ್ಕಿಂತಲೂ, ಸರ್ಕಾರದ ಶಿಕ್ಷಣ ಅತ್ಯಂತ ಮೇಲ್ಮಟ್ಟದಲ್ಲಿ ನಿಲ್ಲುವಂತೆ ಮಾಡಬೇಕಾಗಿದೆ,ಎಂದ ಅವರು. ಈಗಾಗಲೆ ಚಾಮನಾಳ ,ಮತ್ತು ಬೀ,ಗುಡಿ ಸರ್ಕಾರಿ ಶಾಲೆಗಳನ್ನು ಮಾದರಿಯ ಶಾಲೆಯನ್ನಾಗಿಸಲು ಈಗಾಗಲೆ 2 ಕೊಟಿ ರೂ, ಮಂಜೂರಿ ಮಾಡಲಾಗಿದೆ,ಎಂದು ಸಚಿವರು ವಿವರ ನಿಡಿದರು. ವಿಶೇಷ ಉಪನ್ಯಾಷಕರಾಗಿ ಆಗಮಿಸಿದ್ದ, ವಿಶ್ರಾಂತ ಡಿಡಿಪಿಐ ಶಾಂತಗೌಡರವರು ಮಾತನಾಡಿ, ಭರತ ಖಂಡದಲ್ಲಿ ಅಂದು ರಾಜಮಾ ಹಾರಾಜರಿಗಾಗಿ ರಾಜಾಶ್ರೆಯದಲ್ಲಿ ಶಿಕ್ಷಣ ಜಾರಿಯಲ್ಲಿತ್ತು. ಅಂದು ಗುರುವರ್ಯರು ರಾಜಾಶ್ರೆಯದ ಗರಡಯಲ್ಲಿದ್ದರು. ಅದು ಪ್ರಾಚಿನ ಶಿಕ್ಷಣವಾಗಿದ್ದರೆ ಬ್ರೀಟಿಷ ಶಿಕ್ಷಣ ಪ್ರಾಂತ್ಯೆಗಳಿಗೆ ಸೀಮೀತವಾಗುತ್ತು. ಇಂದು ಆಧುನಿಕ ಶಿಕ್ಷಣ ಸ್ವತಂತ್ರ್ಯೋತ್ತರ ಶಿಕ್ಷಣ ರಾಷ್ಟ್ರೀಯ ಶಿಕ್ಷಣ ನೀತಿಯಾಗಿ ಬದಲಾವಣೆಗೊಂಡು ಇಂದು ಸರ್ವ ಶಿಕ್ಷಣವಾಗಿ ಅಭಿವೃದ್ದಿಯಲ್ಲಿದ್ದೇವೆ.ಅಂದಿನ ಗುರುವೃಂದ ಇಂದಿನ ಶಿಕ್ಷಕ ಒಂದೆ ನಾಣ್ಯದ ಮುಖಗಳಂತೆ, ಪ್ರಾಚಿದಿಂದಲೂ, ಶಿಕ್ಷಣದಲ್ಲಿ ಅಂದಿನ ಗುರುಋಷಿ ಮುನಿಯವರ್ಯರು ದಿಕ್ಷೆದ ಗುರು ಮೊಕ್ಷದ ಗುರು ಶಿಕ್ಷಕದ ಗುರುವೆಂದು ಕರೆದಿದ್ದಾರೆ. ಗುರುವಿಗ ಅಧ್ಯಮ ಶಕ್ತಿ ಇದ್ದು ಸಮಾಜಿಕ ಬದಲಾವಣೆಗೆ ಗುರುವಯ್ರು ಕಾರಣರಾಗಿದ್ದಾರೆ ಎಂದು ಅವರು ಮಾರ್ಮಿಕವಾಗಿ ಮಾತನಾಡಿದರು. ಯಾದಗಿರಿ ಜಿಲ್ಲಾ ಡಿಡಿಪಿಐ ಎಚ್,ಟಿ, ಮಂಜುನಾಥ ಮಾತನಾಡಿದರು. ನಾಡಗೀತೆಯೊಂದಿಗೆ ಪ್ರಾರಂಭಗೊಂಡ ಈ ಕಾರ್ಯಕ್ರಮಕ್ಕೆ ಬಸನಗೌಡ ಪಾಟೀಲ ಸ್ವಾಗತಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿಭಾ ಜಿಲಿಯನ್ ಬಿಆರ್,ಸಿ ರೇಣುಕಾ ಪಾಟೀಲ್, ಅಕ್ಷರ ದಾಸೋಹ ಸಾಹಾಯಕ ನಿರ್ಧೇಶಕರಾದ ಬಿ,ಎಸ್,ಸೂರ್ಯವಂಶಿ. ಕ,ನೌಸಂ, ಅಧ್ಯಕ್ಷರಾದ ಮಹಿಪಾಲರಡ್ಡಿ ,ತಾಲುಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ರಯಪ್ಪಗೌಡ ಹುಡೆದ.ಜಿಲ್ಲಾ ಪ್ರೌಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಶೋಕ ಕುಮಾರ ಕೆಂಭಾವಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಗದ ಅಧ್ಯಕ್ಷರಾದ ರಾಘವೆಂದರ ಅಳ್ಳಳ್ಳಿ, ಮಲ್ಲೇಶಪ್ಪ ಹೊಸಮನಿ, ತಾಲುಕಾ ಪ್ರೌಡ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಭೀಮನಗೌಡ ತಳವಾಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಯಾಳಗಿ. ಸೇರಿದಂತೆ ಜಿಲ್ಲೆಯ ವಿವಿಧ ಶಾಲಾ ಶಿಕ್ಷಕರು ಆಗಮಿಸಿದ್ದರು.

ಜಿಲ್ಲಾ ಮಟ್ಟದ ಪ್ರಶಸ್ತಿ ಪುರಷ್ಕಾರ ಪಡೆದ ಮಲ್ಲಿಕಾರ್ಜುನ ಸೂಡಿ, ಸಾಹೇಬಗೌಡ ಬಿರೆದಾರ. ಚಂದಾಸಾಬ್, ಶ್ರೀಮತಿ ಮಿನಾಕ್ಷಿ, ಶ್ರೀಮತಿ ರತ್ನಾಕರ. ಭೀಮನಗೌಡ ಸಿಂಗನಳ್ಳಿ. ಗುಲಾಮ ಅಫಿಜ್, ಈಶ್ವರ ಸುರುಪುಕರ್. ಮಲ್ಲಪ್ಪ ಗ್ಯಾನಪ್ಪ; ಷಣ್ಮುಖಪ್ಪ ರವರಿಗೆ ಮತ್ತು ಸರ್ಕಾರಿ ನೌಕರರ ಸಂಘದಿಂದ ಪ್ರಶಸ್ತಿ ಪಡೆದ ಶ್ರೀಮತಿ ಶೇಖಮ್ಮ ಪರ್ಜನಾ ಅಮೋಘಸಿದ್ದಗೌಡ .ಸಚಿವ ದರ್ಶನಾಪುರ ಗೌರವಿಸಿ ಸನ್ಮಾನಿಸಿ ಗೌರವಿಸಿದರು.

ಉಗ್ರರ ಜೊತೆ ನಂಟು ಹೊಂದಿದ್ದು ಇನ್ನೂ ಖಚಿತವಲ್ಲ.ವಿಚಾರಣೆ ಮುಂದುವರೆದಿದೆ. ಪೋಲಿಸ ಇಲಾಖೆ ಈ ಕುರಿತು ತಿವೃ ನಿಗಾದಲ್ಲಿದೆ. ಈ ಕುರಿತು ಮುಂದಿನ ದಿನಮಾನಗಳಲ್ಲಿ ವಿಚಾರಣೆಯಿಂದ ಸತ್ಯಾ ಸತ್ಯೆತೆ ಪರೀಶೀಲನೆಯಾದಲ್ಲಿ ಕಾದು ನೋಡಬೇಕಿದೆ.
ಶರಣಬಸ್ಸಪ್ಪಗೌಡ ದರ್ಶನಾಪುರ ಸಣ್ಣ ಕೈಗಾರಿಕೆ ಸಚಿವರು ಕರ್ನಾಟಕ ಸರ್ಕಾರ