ಸಂಜೆವಾಣಿ ವಾರ್ತೆ
ಮಂಡ್ಯ: ಸೆ.21:- ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಾಧಕರಾಗಬೇಕು ಎಂದು ದಾನಿ ಕೀಲಾರ ಗ್ರಾಮದ ಕುಮಾರ್ ಹೇಳಿದರು.
ಮಂಡ್ಯ ತಾಲ್ಲೂಕಿನ ಹೊಡಾಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಬುಧವಾರದಂದು ಕಂಪ್ಯೂಟರ್ ಮತ್ತು ಪ್ರಿಂಟರ್ ವಿತರಣೆ ಮಾಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡು ಅಭ್ಯಾಸ ನಡೆಸಿದರೆ ಉನ್ನತ ಸ್ಥಾನ ಪಡೆಯಬಹುದು.ಈ ನಿಟ್ಟಿನಲ್ಲಿ ನಿಮ್ಮ ಕಠಿಣ ಪರಿಶ್ರಮ ಮುಖ್ಯವಾಗಿದ್ದು ಜಾಗೃತರಾಗಬೇಕು ಎಂದರು.
ವಿದ್ಯಾರ್ಥಿಗಳಾದ ನಿಮಗೆ ಯಾವುದೇ ಒತ್ತಡವಿರದೆ ಪೋಷಕರು ನಿಮಗಾಗಿ ಕನಸುಗಳನ್ನು ಕಟ್ಟಿದ್ದಾರೆ.ಅದನ್ನು ನನಸು ಮಾಡುವವರೆಗೂ ವಿರಮಿಸಬೇಡಿ ಎಂದರು.ಪ್ರಸಕ್ತ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯ ಎರಡು ವರ್ಷದ ಪಿಯುಸಿ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚ ಭರಿಸುವುದಾಗಿ ಘೋಷಣೆ ಮಾಡಿದರು.
ಬಳಿಕ ಶೃತಿ ಕುಮಾರ್ ದಂಪತಿಗಳು ಶಾಲೆಗೆ ಒಂದು ಕಂಪ್ಯೂಟರ್ ಮತ್ತು ಪ್ರಿಂಟರ್ ವಿತರಣೆ ಮಾಡಿ, ಕಂಪ್ಯೂಟರ್ ಕಲಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ಕಾರ್ಯಕ್ರಮದಲ್ಲಿ ದಾನಿಗಳಾದ ಕೀಲಾರ ಶೃತಿಕುಮಾರ್, ಪ್ರಭಾರಿ ಮುಖ್ಯ ಶಿಕ್ಷಕ ಕೆ.ಟಿ.ನಾರಾಯಣರಾಜೆ ಅರಸ್, ಸಹ ಶಿಕ್ಷಕರಾದ ಡಿ.ಎಸ್.ಕೃಷ್ಣೇಗೌಡ,ಕೆ.ಆರ್.ಶಶಿಧರ ಈಚಗೆರೆ,ಆರ್.ಚಂದ್ರಮತಿ,ಬಿ.ಸಿ.ಶಿಲ್ಪ ಇದ್ದರು.