ಶಿಕ್ಷಣ ಪಡೆದು ಮಗು ದೇಶದ ಉತ್ತಮ ಪ್ರಜೆಯಾಗಲಿ

ಸಂಡೂರು:ಜ: 7:ಪ್ರತಿಯೊಂದು ಮಗುವೂ ಸಹ ಶಿಕ್ಷಣ ಪಡೆಯಬೇಕು, ದೇಶದ ಆಸ್ತಿಯಾಗಬೇಕು ಎನ್ನುವ ಮಹತ್ತರ ಉದ್ದೇಶದಿಂದ ಸರ್ಕಾರ ಕೋಟ್ಯಾಂತರ ರೂಪಾಯಿ ವ್ಯಯ ಮಾಡಿ ಕಡ್ಡಾಯ ಶಿಕ್ಷಣವನ್ನು ಜಾರಿಗೆ ತಂದಿದೆ, ಅದರೆ ಬಹಳಷ್ಟು ಪಾಲಕರು ಅವರ ಬಾಲ್ಯದ ಶಿಕ್ಷಣದ ಹಕ್ಕನ್ನೇ ಕಸಿದುಕೊಂಡು ಬಾಲಕಾರ್ಮಿಕರಾಗುತ್ತಿದ್ದು ಅದನ್ನು ತಪ್ಪಿಸಲು ಗ್ರಾಮ ಪಂಚಾಯಿತಿ ಅಡಿಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅಭಿಯಾನ ಹಮ್ಮಿಕೊಂಡಿರುವುದು ಉತ್ತಮವಾದ ಕಾರ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಐ.ಅರ್. ಅಕ್ಕಿ ತಿಳಿಸಿದರು.
ಅವರು ತಾಲೂಕಿನ ವಡ್ಡು ಗ್ರಾಮ ಪಂಚಾಯಿತಿ ಅವರಣದಲ್ಲಿ ವಡ್ಡು ಗ್ರಾಮ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ 10 ವಾರಗಳ ಕಾಲ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮಕ್ಕಳ ನೇತೃತ್ವದಲ್ಲಿಯೇ ಸಭೆಯನ್ನು ಮಾಡಿ ಅವರಿಗೆ ತಮ್ಮ ಹಕ್ಕುಗಳು ಮತ್ತು ಕರ್ತವ್ಯಗಳನ್ನು ತಿಳಿಸುವ ಮೂಲಕ ಅವರು ಶಾಲೆಯಿಂದ ಹೊರಗುಳಿಯದಂತೆ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಅನುಕೂಲವಾಗುವಂತಹ ಕಾರ್ಯಕ್ರಮ ಇದಾಗಿದೆ, ಅಲ್ಲದೆ ಪಾಲಕರಿಗೆ ಸಹ ಇದರ ಬಗ್ಗೆ ಅರಿವು ಮೂಡಿಸಿ ಅವರನ್ನು ಸಹ ಜಾಗೃತರನ್ನಾಗಿಸುವಂತಹ ಯೋಜನೆಯನ್ನು ಎಲ್ಲರೂ ಸಹ ತಿಳಿದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ಅಧಿಕಾರಿ ಉಮಾಪತಿಯವರು ಮುಖ್ಯಅತಿಥಿಗಳಾಗಿ ಅಗಮಿಸಿ ಮಾತನಾಡಿ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು, ಅ ಪ್ರಜೆಗಳೇ ದೇಶದ ನಾಯಕರು ಎನ್ನುವುದನ್ನು ನಾವು ಮರೆಯಬಾರದು, ಅದ್ದರಿಂದ ಅಂತಹ ಮಗುವು ಶಿಕ್ಷಣದಿಂದ ವಂಚಿತವಾಗಿ ಇರಬಾರದು, ಕಾರಣ ದೇಶವನ್ನು ನಡೆಸುವಂತಹ ಮಹತ್ತರ ಶಕ್ತಿಯನ್ನು ಬಾಲ್ಯದಲ್ಲಿಯೇ ತುಂಬುವುದರಿಂದ ಉತ್ತಮ ನಾಯಕನಾಗುತ್ತಾನೆ, ಅದ್ದರಿಂದ ಇಂದು ಬಹಲಷ್ಟು ಜಾಗೃತರಾಗಿದ್ದಾರೆ, ಅದರೂ ಸಹ ಬಹಳಷ್ಟು ಪಾಲಕರು ಮಕ್ಕಳಿಗೆ ಶಿಕ್ಷಣದಿಂದ ದೂರವಿಟ್ಟು ಕೂಲಿಕಾರ್ಮಿಕರನ್ನಾಗಿಸುವಂತಹ ಕಾರ್ಯ ನಡೆಯಬಾರದು ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣಕೊಡಿ ಅವರ ಹಕ್ಕುಗಳನ್ನು ರಕ್ಷಿಸಿ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಸಿದ್ದಪ್ಪ, ಪಂಚಾಯಿತಿಯ ಇತರ ಸಿಬ್ಬಂದಿಗಳು ಶಾಲೆಯ ಶಿಕ್ಷಕ ವೃಂದದವರು, ಇತರ ಗಣ್ಯರು ಉಪಸ್ಥಿತರಿದ್ದರು.