ಶಿಕ್ಷಣ ಪಡೆದು ಉನ್ನತ ಹುದ್ದೆ ಪಡೆದಾಗ ಜಯಂತಿಗೆ ಅರ್ಥ- ಎಂ.ಈರಣ್ಣ

ಸಿರವಾರ.ಏ.೧೫- ಎಲ್ಲಿವರೆಗೂ ತಳ ಮಟ್ಟದ ಸಮುದಾಯದ ಮಕ್ಕಳಿಗೆ ಶಿಕ್ಷಣ ಕೊಡುವ ಬಗ್ಗೆ ಒತ್ತು ನೀಡುವುದಿಲ್ಲವೋ ಅಲ್ಲಿ ತನಕ ಅಂಬೇಡ್ಕರ್ ಕಂಡ ಕನಸು ನನಸಾಗುವುದಿಲ್ಲ, ಆಗ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದು ಕರ್ನಾಟಕ ರಾಜ್ಯ ಹಾಲುಮತ ಸಮಾಜದ ರಾಜ್ಯಾಧ್ಯಕ್ಷರು ಹಾಗೂ ಮೇಕೋ ಕನ್ಸ್ಟ್ರಕ್ಷನ್ ಮಾಲೀಕರಾದ ಎಮ್. ಈರಣ್ಣ ಹೇಳಿದರು.
ತಾಲೂಕಿನ ಅತ್ತನೂರು ಗ್ರಾಮದಲ್ಲಿ ಛಲವಾದಿ ಓಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ನೂತನ ನಾಮಪಲಕವನ್ನು ಉದ್ಘಾಟಿಸಿ ಮಾತನಾಡಿದ ಅವರು ತನಗೆ ಬಂದ ಕಷ್ಟ ನನ್ನ ಸಮಾಜದ ಜನರಿಗೆ, ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಆಗಬಾರದು ಎಂದು ಎಲ್ಲಾರಿಗೂ ಸಮಾನತೆ, ಶಿಕ್ಷಣ ಉದ್ಯೋಗದಲ್ಲಿ ಮಿಸಲಾತಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ಆಸ್ತಿಯ ಹಕ್ಕು ಇನೂ ಅನೇಕ ಸೌಲಭ್ಯಗಳನ್ನು ಅಂಬೇಡ್ಕರ ನೀಡಿದ್ದಾರೆ. ಅವರು ಜನಿಸಿ ೧೩೩ ವರ್ಷವಾಗಿದೆ, ಆದರೆ ಅವರು ಹೇಳಿರುವ ಮಾರ್ಗದಲ್ಲಿ ನಾವು ನಡೆಯುತ್ತಿದೆವೆ ಎಂಬುದನ್ನು ತಿಳಿಯಬೇಕಾಗಿದೆ ಎಂದರು.
ನಂತರ ಜೆಡಿಎಸ್ ನ ರಾಜ್ಯ ಉಪಾಧ್ಯಕ್ಷರಾದ ಮಹಾಂತೇಶ್ ಪಾಟೀಲ್ ಮಾತನಾಡಿ, ಅಸ್ಪೃಶ್ಯರ ವಿರುದ್ಧದ ತಾರತಮ್ಯವನ್ನು ತೊಡೆದು ಹಾಕಲು ಮತ್ತು ಮಹಿಳೆಯರು ಹಾಗೂ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅಂಬೇಡ್ಕರ್ ಅವರು ಕಾನೂನಿನ ದೃಷ್ಟಿಯಲ್ಲಿ ಎಲ್ಲಾ ನಾಗರಿಕರು ಸಮಾನರು, ಎಲ್ಲರಿಗೂ ಸಮಾನ ನ್ಯಾಯ ದೊರಕಬೇಕು ಎಂಬುದನ್ನು ತಮ್ಮ ಜೀವಮಾನವಿಡಿ ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಸವರಾಜ ಪಾಟೀಲ್ ಬಿಜೆಪಿ ಮುಖಂಡರು ಹಾಗೂ ವಿಎಸ್‌ಎಸ್‌ಎನ್‌ನ ಅಧ್ಯಕ್ಷರದ ನಾಗನಗೌಡ ಪೊಲೀಸ್ ಪಾಟೀಲ್, ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷರಾದ ವಿಶ್ವನಾಥ್ ಪಟ್ಟಿ, ಚಲವಾದಿ ಸಮಾಜದ ಜಿಲ್ಲಾಧ್ಯಕ್ಷರಾದ ಶಿವರಾಜ್ ಜನೆ.ಕಾಲ್, ತಮ್ಮಣ್ಣ ವಕೀಲ ಬೊಮ್ಮನಾಳ, ಮಹೇಶ್ ಕುಮಾರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹನುಮಂತರಾಯ ಗಚ್ಚಿನಮನಿ, ಮಾಜಿ ತಾಲೂಕ ಪಂಚಾಯತಿ ಸದಸ್ಯರಾದ ಎಂ.ಈರಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ವೀರಭದ್ರ ಸ್ವಾಮಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಹನುಮೇಶ್ ಜಗ್ಲಿ, ಸದಸ್ಯರಾದ ವಿರುಪಾಕ್ಷಿ, ಬ್ರಹ್ಮಜಿ, ಮಹಾಂತೇಶ್, ವೀರಪನ್, ಮಾಜಿ ಗ್ರಾಮ್ ಪಂಚಾಯತ್ ಅಧ್ಯಕ್ಷರಾದ ಬಸವರಾಜ್ ಮರಕುಂದಿನಿ, ಊರಿನ ಎಲ್ಲ ಸಮಾಜದ ಗುರುಹಿರಿಯರು ಹಾಗೂ ಮುಖಂಡರು ಉಪಸ್ಥಿತ ಇದ್ದರು.