ಕೂಡ್ಲಿಗಿ. ಜೂ 17 :- ಆಸ್ತಿ ಗಳಿಸುವ ಮೊದಲು ಮಕ್ಕಳನ್ನೇ ಆಸ್ತಿಗಳನ್ನಾಗಿ ಮಾಡಿ, ಶಿಕ್ಷಣ ದೇಶದ ಅತಿದೊಡ್ಡ ಸಂಪತ್ತಾಗಿದ್ದು ಶಿಕ್ಷಣದಿಂದ ಪಡೆದ ಜ್ಞಾನ ಶಾಶ್ವತ ಎಂದು ವಿಜಯಪುರ ಹಾಗೂ ಚಿತ್ರದುರ್ಗ ಗಾಣಿಗ ಗುರುಪೀಠದ ಸ್ವಾಮೀಜಿಗಳಾದ ಡಾ ಜಯಬಸವಕುಮಾರ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ತಾಲೂಕಿನ ಹೊಸಹಳ್ಳಿ ಗ್ರಾಮದ ಗಾಣಿಗರ ಮಂಟಪದಲ್ಲಿ ಇಂದು ಕೂಡ್ಲಿಗಿ ತಾಲೂಕು ಗಾಣಿಗರ ಸಂಘದಿಂದ ಆಯೋಜಿಸಿದ ಲಿಂಗೈಕ್ಯ ಪರಮಪೂಜ್ಯ ಜಯದೇವ ಜಗದ್ಗುರುಗಳ ಪುಣ್ಯಸ್ಮರಣೆ ಹಾಗೂ ಗಾಣಿಗರ ಸಮುದಾಯದ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತ ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ ಶ್ರೀನಿವಾಸ ಸಹ ಪ್ರತಿಭೆಯ ಮೂಲಕ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಏಮ್ಸ್ ನಲ್ಲಿ ಶಿಕ್ಷಣ ಪಡೆದು ವೈದ್ಯರಾಗಿ ಇಂದು ಕ್ಷೇತ್ರದ ಶಾಸಕರಾಗಿರುವುದು ಕ್ಷೇತ್ರದ ಹೆಮ್ಮೆ ಎಂದರು.
ಶಾಸಕರಾದ ಡಾ ಶ್ರೀನಿವಾಸ ಮಾತನಾಡಿ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯಕ್ಕೆ ಮೊದಲ ಆದ್ಯತೆ ನೀಡಲಾಗಿದ್ದು ಮಕ್ಕಳ ಶಿಕ್ಷಣ ಕಲಿಕೆಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವ ಕುರಿತಾದ ಬೇಡಿಕೆ ಹೆಚ್ಚಾಗಿದೆ ಇದಕ್ಕೆ ಸ್ಪಂದಿಸುವ ಬಗ್ಗೆ ತಿಳಿಸಿದರು ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಂಬಂದಿಸಿದ ಸಚಿವರ ಜೊತೆ ಚರ್ಚೆ ನಡೆಸಿದ್ದೇನೆ ಎಂದು ಶಾಸಕರು ತಿಳಿಸಿದರು.
ಗಾಣಿಗ ಸಮುದಾಯದ ಪೀಠದ ಜಗದ್ಗುರು ಡಾ.ಜಯ ಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗಾಣಿಗರ ಸಂಘದ ತಾಲೂಕು ಅಧ್ಯಕ್ಷ ಎಸ್.ಶೇಖರಪ್ಪ ಅಧ್ಯಕ್ಷತೆ ವಹಿಸಿದ್ದರು. ಗಾಣಿಗರ ಸಂಘದ ಜಿಲ್ಲಾಧ್ಯಕ್ಷ ಜಿ.ಉಮೇಶ್, ಜಿಲ್ಲಾ ಕಾರ್ಯದರ್ಶಿ ಡಾ.ಶಿವಪ್ರಸಾದ್, ಗಾಣಿಗ ಸಮುದಾಯದ ಮುಖಂಡರಾದ ದಿನ್ನೆ ಮಲ್ಲಿಕಾರ್ಜುನ, ಜೆ.ಸಿ.ಧನಂಜಯ, ಹುಡೇಂ ದ್ಯಾಮಕ್ಕಜ್ಜೇರ ಚಂದ್ರಣ್ಣ, ಕೊಟ್ರಪ್ಪ ಮೇಷ್ಟ್ರು, ಯಜಮಾನಪ್ಪ, ಹಾರಕಬಾವಿ ಕೊಟ್ರೇಶ್, ವಲಯ ಅರಣ್ಯಾಧಿಕಾರಿ ಮಂಜುನಾಥ, ಚಿರತಗುಂಡು ಈಶ್ವರಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ತಾಪಂ ಮಾಜಿ ಸದಸ್ಯರಾದ ಹುಡೇಂ ಪಾಪನಾಯಕ, ಗುರುಸಿದ್ದನಗೌಡ, ದಸಂಸ ಮುಖಂಡರಾದ ಬಿ.ಟಿ.ಗುದ್ದಿ ದುರುಗೇಶ್, ಎಳನೀರು ಗಂಗಣ್ಣ, ಕಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ.ಕುಮಾರಗೌಡ, ಮುಖಂಡರಾದ ಜಿ.ಓಬಣ್ಣ, ದುಗ್ಗಪ್ಪ, ತಳವಾರ ಶರಣಪ್ಪ ಇತರರಿದ್ದರು.