ಶಿಕ್ಷಣ ತುಳಿದು ಚರಂಡಿಗೆ ಹಾಕಿ ಸಂಭ್ರಮಿಸುವ ಮನೋಭಾವ

ದಾವಣಗೆರೆ. ಜು.24; ಶೋಷಿತರು,ದಲಿತರು ಎಲ್ಲಿ ಹೋದರು ಮೀಸಲಾತಿ ಕೇಳುತ್ತಾರೆ ಆದರೆ ಪಠ್ಯಪುಸ್ತಕ ರಚನೆಯಲ್ಲಿ ಏಕೆ ಮೀಸಲಾತಿ ಕೇಳಲಿಲ್ಲ ಎಂದು ಹಿರಿಯ ಚಿಂತಕ ಜಿ.ರಾಮಕೃಷ್ಣ ಪ್ರಶ್ನಿಸಿದರು.ದಾವಣಗೆರೆಯ ಕುವೆಂಪು ಕನ್ನಡಭವನದಲ್ಲಿ ನಡೆದ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ ನಗಾರಿ ಬಾರಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಪ್ರಸ್ತುತ ದಿನದಲ್ಲಿ  ಅಜ್ಞಾತವಾಗಿ ಕೆಲಸ ಮಾಡುತ್ತಿರುವವರ ಮರು ಭವಿಷ್ಯ ಇಲ್ಲವಾಗಿದೆ.ಇಂತಹ ಸಮಿತಿಯಲ್ಲಿ ಹಿಂದುಳಿದ ಜನಾಂಗದ ನಾಯಕರು ಇರದೇ ಯಾವುದನ್ನು ಬೆಂಬಲಿಸುತ್ತಿದ್ದಾರೆ.ನೀವು ಎಲ್ಲಿರಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.ಈ ದೇಶದಲ್ಲಿ ವಾಸಿಸುತ್ತಿದ್ದೀರಾ ಅಥವಾ ಎಲ್ಲಿ ವಾಸಿಸಬೇಕು ಎಂದು ಪ್ರಯತ್ನಿಸುತ್ತೀರಾ ಎಂಬ ಪ್ರಶ್ನೆ ಹಾಕಿಕೊಳ್ಳಿ ಎಂದು ಗಂಭೀರವಾಗಿ ತಿಳಿ ಹೇಳಿದರು.ಕತ್ತಿಮಸಿಯುವ ಪ್ರಯತ್ನ ಬೇಡ.ಎಲ್ಲರೂ ಒಂದುಗೂಡಬೇಕು ಎಂದರು.
ಜನತೆಯ ಆಶೋತ್ತರ ಕೇಂದ್ರೀಕರಿಸಿ ಚಿಂತನೆ ಹಾಗೂ ಕ್ರಿಯೆ ನಡೆಯುವ ಬಂಡಾಯ ಸಾಹಿತ್ಯಕ್ಕೆ ಬೆಂಬಲ ನೀಡಬೇಕಿದೆ.ರೈತಾಪಿ ಜನರ ಬಗ್ಗೆ ಕನಿಕರ ತೋರಿಸುವ ಪಾತ್ರಗಳು ಇಂದು ಕಂಡುಬರುತ್ತಿದೆ.ಒಂದು ಕಾಲದಲ್ಲಿ ಜಮೀನುದಾರರು ಊಟವಾದ ಬಳಿಕ ಚರ್ಚೆ ಯಲ್ಲಿ ತೊಡಗುತ್ತಿದ್ದರು.ಅವರಿಗೆ ವೈದ್ಯರು ಹೇಳಿದ್ದರಂತೆ ಗಂಟಲಿಗೆ ವ್ಯಾಯಾಮ ನೀಡಬೇಕು ಎಂದು ಮಾರ್ಮಿಕವಾಗಿ ನುಡಿದರು. ಚರ್ಚೆಗಳು ಔಪಚಾರಿಕ ಅಲ್ಲ ಬೀದಿಗೆ ಇಳಿದು ಹೋರಾಟಬೇಕು. ನ್ಯಾಯಕ್ಕಾಗಿ ಬೀದಿಗೀಳಿದು ಸಂಸ್ಕೃತಿ ಉಳಿಸೋಣ.ದೇಶದಲ್ಲಿ ಅನೇಕ ಚಿಂತನೆಗಳು ನಡೆದಿದೆ.ಒಂದು ಅಗಾಧ ಚಿಂತನೆ ಎಂದರೆ ಭಾರತದಲ್ಲಿ ಹುಟ್ಟಿದರೆ ಮೋಕ್ಷ ಎನ್ನುತ್ತಾರೆ ಅದಕ್ಕಾಗಿ ನಮ್ಮಲ್ಲಿ ಜನಸಂಖ್ಯೆ ಹೆಚ್ಚಾಗಿದೆ.ಮೊಕ್ಷಕ್ಕಾಗಿ ಹೆಚ್ಚಿನ ಜನಸಂಖ್ಯೆ ಇದೆಯೇನೊ ಎಂದರು. ನಮ್ಮ ದನಿ ಅಡಗಿಸುವ ಪ್ರಯತ್ನ ಹಿಮ್ಮೆಟಿಸಬೇಕು.ಶಿಕ್ಷಣ, ದುಡಿಮೆ ಮಾನವೀಯ ಸಂಸ್ಕೃತಿ ಬೇಕು ಇಂದು ಶಿಕ್ಷಣ ವನ್ನು ತುಳಿದು ಚರಂಡಿಗೆ ಹಾಕಿ ಸಂಭ್ರಮಿಸುತ್ತಿದ್ದೇವೆ.ಶಿಕ್ಷಣಕ್ಕೆ ಚೈತನ್ಯ ತುಂಬ ಕೆಲಸವಾಗಬೇಕು.ಶಿಕ್ಷಣಕ್ಕೆ ಮಾರ್ಗದರ್ಶಿ ಸೂತ್ರ ಬರುತ್ತಿದೆ  ಆದರೆ ಆ ಮಾರ್ಗಸೂಚಿ ಅವಶ್ಯಕತೆ ಇಲ್ಲ.ಶಿಕ್ಷಣ ವ್ಯವಸ್ಥೆಯಲ್ಲಿ
ಜಾತಿ ಕುಲ ಗೊತ್ರ ಮತಧರ್ಮ ಗಮನದಲ್ಲಿಡಬಾರದು ಆದರೆ ದಿಕ್ಸೂಚಿ ತಯಾರು ಮಾಡಿದವರಿಗೆ ಶಿಕ್ಷಣಕ್ಕೆ ತಳಪಾಯ ಹಾಕುವ ವ್ಯವಧಾನ ಇಲ್ಲ ಇದು ದುರಂತ.ಶಿಕ್ಷಣದ ಹಾಗೂ ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಬರಗೂರು ರಾಮಚಂದ್ರಪ್ಪ ಬಗ್ಗೆ ಎರಡು ಉಪನ್ಯಾಸ ನೀಡಿದ್ದಾರೆ ಆದರೆ ಅದನ್ನು ಓದುವ ವ್ಯವದಾನ ಇಲ್ಲ.ಪರಿಷ್ಕರಣೆ ಮಾಡಿ ಅಳವಡಿಸಿ ಕಳಿಸುತ್ತೇವೆ ಎನ್ನುತ್ತಾರೆ.ಈ ರೀತಿಯ ನೀತಿ ಪುರಸ್ಕಾರ ಮಾಡುವುದನ್ನು ನೋಡಿದರೆ ಶಿಕ್ಷಣದ ಬಗ್ಗೆ ನಮಗಿರುವ ಜ್ಞಾನ ಮಟ್ಟದ ತಿಳಿಸುತ್ತದೆ. ಏರುಪೇರಿನ ನೀತಿ ಇದಾಗಿದೆ.ವಿಕಾಸದ ಹಾದಿಯ ಗೊಡವೆ ಬೇಡ ಎನ್ನುವಂತೆ ಆಗಿದೆ. ಪೆಟ್ರೊಲ್ ಬೆಲೆ ಹೆಚ್ಚಾಗಿದೆ. ಶೇ ೪೦ ರಷ್ಟು ಲಪಟಾಯಿಸುವವರು ಇದ್ದಾರೆ ಆದರೆ  ಈ ಬಗ್ಗೆ ದನಿ ಎತ್ತಿದರೆ ಜೈಲಿಗೆ ಕಳಿಸುತ್ತಾರೆ.ಇಂತಹ ವೇಳೆ ನಮ್ಮ ಜವಾಬ್ದಾರಿ ಬಗ್ಗೆ ಬಂಡಾಯ ಸಮ್ಮೇಳನ ಹಾದಿಯಾಗಲಿ. ಸಾಹಿತ್ಯದಲ್ಲಿ ಸಿದ್ದಾಂತ ಇರಬಾರದು ಸತ್ಯ ಇರಬೇಕು ಎಂದು ಸಾಹಿತಿಯೊಬ್ಬರು ಹೇಳಿದ್ದರು.ಸತ್ಯ ಬೇಕು ಆದರೆ ಸತ್ಯಯಾವುದು ಎಂಬ ಕೇಳುವ ಮನೋಭಾವನೆ ಬೇಕು. ಸತ್ಯ ಬೀಭತ್ಸದ ಪರಾಕಷ್ಠೆ ಎನ್ನುವಂತಾಗಿದೆ ಸದ್ಯದ ಸ್ಥಿತಿ. ಆಳುವ ದೊರೆಗಳ ಪರವಾಗಿ ಸತ್ಯವನ್ನು ಮರೆಮಾಚುವ ಸ್ಥಿತಿ ಇದೆ.ಅನ್ಯಾಯ ನಡೆದಾಗ ಸೆಟೆದೇಳುವ ಮನೋಭಾವ ಬೇಕಿದೆ. ಮಾನವೀಯತೆಯ ಸೊಗಡನ್ನು ಹಾಳು ಮಾಡಲು ಅಲ್ಲ ಎಂದು ತಿಳಿಸಿದರು.
ವೇದಿಕೆಯ ಅಧ್ಯಕ್ಷತೆಯನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ವಹಿಸಿದ್ದರು. ಮಾವಳ್ಳಿ ಶಂಕರ್, ಸುಕನ್ಯಾ ಮಾರುತಿ, ಬಿ.ಎಂ.ಹನೀಫ್, ಎ.ಬಿ. ರಾಮಚಂದ್ರಪ್ಪ,  ಸುಭಾಶ್ಚಂದ್ರ ಉಪಸ್ಥಿತರಿದ್ದರು.ಸಂಚಾಲಕರಾದ ಬಿ.ಎನ್  ಮಲ್ಲೇಶ್ ಸ್ವಾಗತಿಸಿದರು.ನಂತರ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು ಜರುಗಿದವು.