ಶಿಕ್ಷಣ ತಜ್ಞ ಮೌಲಾನ್ ಅಬ್ದುಲ್ ಕಲಾಂ ಅಜಾದ್ ಅವರ ಕೊಡುಗೆ ಅಪಾರ

ಚಾಮರಾಜನಗರ, ನ. 12-ಸ್ವಾತಂತ್ರ್ಯದ ಬಳಿಕ ದೇಶದ ಪ್ರಪ್ರಥಮ ಶಿಕ್ಷಣ ಸಚಿವರಾಗಿದ್ದ ಮೌಲಾನ್ ಅಬ್ದುಲ್ ಕಲಾಂ ಅಜಾದ್ ಅವರು ಎಲ್ಲರಿಗೂ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಿದ್ದರು ಎಂದು ಮಾಜಿ ಶಾಸಕ ಹಾಗೂ ಶಾಸಕ ಸಿ. ಪುಟ್ಟರಂಗಶೆಟ್ಟಿ ಬಣ್ಣಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ನಡೆದ ಶಿಕ್ಷಣ ತಜ್ಞ ಹಾಗೂ ಕೇಂದ್ರ ಮಾಜಿ ಶಿಕ್ಷಣ ಸಚಿವ ಡಾ. ಮೌಲಾನಾ ಅಬ್ದುಲ್ ಕಲಾಂ ಅಜಾಧ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಆಜಾದ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಸ್ವಾತಂತ್ರ್ಯದ ನಂತರ ರಚನೆಯಾದ ನೆಹರು ನೇತೃತ್ವದ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಆಜಾದ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯನ್ನು ಮಾಡಿದರು. ಅವರ ಜಾರಿ ಮಾಡಿದ ಶಿಕ್ಷಣ ನೀತಿಯಿಂದಾಗಿ ಪ್ರತಿಯೊಬ್ಬರು ಸಹ ಶಿಕ್ಷಣ ಪಡೆಯುಲು ಸಾಧ್ಯವಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಅಜಾದ್ ಅವರು ಮೆಕ್ಕಾದಿಂದ ಬಂತು ಭಾರತದಲ್ಲಿ ನೆಲೆಸಿ, ಭಾರತೀಯ ಸಂಸ್ಕøತಿ ಪರಂಪರೆಯ ಬಗ್ಗೆ ಅಪಾರವಾದ ಮೆಚ್ಚುಗೆಯನ್ನು ಹೊಂದಿದ್ದರು.
ಉತ್ತಮ ಜ್ಞಾನವನ್ನು ಪಡೆದುಕೊಂಡಿದ್ದ ಅವರು, ಶಿಕ್ಷಣ ಸಚಿವರಾಗಿ ದೇಶದ ಅಭಿವೃದ್ದಿಯಲ್ಲಿ ತಮ್ಮದೇ ಅದ ಸೇವೆಯನ್ನು ಸಲ್ಲಿಸಿದ್ದಾರೆ. ಹೀಗಾಗಿ ಅವರನ್ನು ಶಿಕ್ಷಣ ತಜ್ಞ ಎಂದು ಸಹ ಕರೆಯಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಪೂರ್ವದಲ್ಲಿ ಬ್ರೀಟಿಷರ ವಿರುದ್ದ ಹೋರಾಟ ಮಾಡುವ ಜೊತೆಗೆ ನಂತರವು ದೇಶದ ಅಭಿವೃದ್ದಿಯಲ್ಲಿ ತನ್ನನ್ನು ಸಂಪೂರ್ಣ ತೊಡಗಸಿಕೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್ ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷ ಮಹಮದ್ ಅಸ್ಗರ್, ಕೆಪಿಸಿಸಿ ಸದಸ್ಯ ಸೈಯದ್ ರಫಿ, ಚುಡಾ ಮಾಜಿ ಅಧ್ಯಕ್ಷ ಸುಹೇಲ್ ಆಲಿಖಾನ್, ಮುಖಂಡರಾದ ಪು, ಶ್ರೀನಿವಾಸನಾಯಕ, ನಾಗರ್ಜುನ ಪ್ರಥ್ವಿ, ಪಿ. ಶೇಖರ್, ಚಾಮರಾಜು, ಕಾಗಲವಾಡಿ ಶಿವಸ್ವಾಮಿ, ಆಯುಬ್ ಖಾನ್, ಸೈಯದ್ ತೌಸೀಪ್, ಕರಿನಂಜನಪುರ ಸ್ವಾಮಿ, ರಂಗಸ್ವಾಮಿ, ಶ್ರೀನಿವಾಸ್,ಮೊದಲಾಧವರು ಇದ್ದರು.