ಶಿಕ್ಷಣ ಕ್ಷೇತ್ರದಲ್ಲಿ ಪಟ್ಟದೇವರ ಕಾರ್ಯ ಮಾದರಿ

ಔರಾದ :ನ.15: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕನ್ನಡದ ಮಠ ಎಂದು ಪ್ರಖ್ಯಾತಿ ಪಡೆದ ಭಾಲ್ಕಿ ಮಠದ ಶಿಕ್ಷಣ ಕ್ಷೇತ್ರದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯ ಮಾಡಿರುವ ಪೂಜ್ಯಶ್ರೀ ಬಸವಲಿಂಗ ಪಟ್ಟದ್ದೇವರ ಕಾರ್ಯ ಮಾದರಿ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಸ.ಚಿ ರಮೇಶ ಅವರು ತಿಳಿಸಿದರು.

ತಾಲೂಕಿನ ಸಂತಪೂರ ಅನುಭವ ಮಂಟಪದಲ್ಲಿ ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರಯುಕ್ತ ನಡೆದ ಪೂಜ್ಯ ಬಸವಲಿಂಗ ಪಟ್ಟದ್ದೇವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪೂಜ್ಯರು ಅನಾಥ ಮಕ್ಕಳನ್ನು ಪೆÇೀಷಿಸಿ ಅವರಿಗೆ ಉಚಿತ ಶಿಕ್ಷಣ ದಾಸೋಹ ನೀಡುತ್ತಿರುವ ಕಾರ್ಯ ಅನುಕರಣೀಯವಾಗಿದೆ. ಶಿಕ್ಷಣ ಕ್ರಾಂತಿಯ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಪೂಜ್ಯರು, ಸಾಹಿತ್ಯಿಕ, ಧಾರ್ಮಿಕ ಚಿಂತನೆ ಮಾದರಿಯಾಗಿದೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪೂಜ್ಯ ಬಸವಲಿಂಗ ಪಟ್ಟದ್ದೇವರು, ಬಸವಾದಿ ಶರಣರ ಸಂಕಲ್ಪವನ್ನೆ ಜೀವನದುದ್ದಕ್ಕೂ ಹೊತ್ತೊಯ್ಯುವ ಮಹತ್ತರ ಬಯಕೆ ಎನ್ನದಾಗಿದೆ. ಬಸವಾದಿ ಶರಣರ ತತ್ವಗಳನ್ನು ಪ್ರಸಾರ, ಪ್ರಚಾರ ಮಾಡುತ್ತಾ ಬಸವ ಸಂದೇಶ ಸಾರುವ ಸಂಕಲ್ಪ ಹೊಂದಿದ್ದೇನೆ, ಇಂದು ಭಕ್ತವೃಂದ ತೋರುವ ಪ್ರೀತಿ, ಸಹಕಾರ, ವಿಶ್ವಾಸವೇ ಇಂದು ಹಲವು ಕೆಲಸಗಳು ಮಾಡಲು ಸಾಧ್ಯವಾಗಿದೆ. ನಿಮ್ಮೆಲ್ಲರ ನಿಷ್ಕಲ್ಮಶ ಉತ್ಸಾಹ ಉಲ್ಲಾಸ ಕಂಡು ಮನಸ್ಸಿಗೆ ಸಂತಸವಾಗಿದೆ ಎಂದರು.

ಈ ಸಂದರ್ಭದಲ್ಲಿ ಪೂಜ್ಯ ಮಹಾದೇವಮ್ಮ ತಾಯಿ ಸಮಾರಂಭದ ಸಮ್ಮುಖ ವಹಿಸಿದರು. ಜಾನಪದ ವಿದ್ವಾಂಸ ಡಾ. ಜಗನ್ನಾಥ ಹೆಬ್ಬಾಳೆ, ಪೂಜ್ಯ ಗುರುಬಸವ ದೇವರು, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಸಂಜೀವಕುಮಾರ ಜುಮ್ಮಾ, ಅನುಭವ ಮಂಟಪ ಸಂತಪೂರ ಅಧ್ಯಕ್ಷ ಬಸವರಾಜ ಬಿರಾದಾರ ಅಧ್ಯಕ್ಷತೆ ವಹಿಸಿದರು. ಔರಾದ-ಕಮಲನಗರ ತಾಲೂಕಿನ ವಿವಿಧ ಸಂಘಟನೆಗಳಿಂದ, ಶ್ರೀಮಠದ ಭಕ್ತರಿಂದ ಪೂಜ್ಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ, ಉಪನ್ಯಾಸಕ ಅಶೋಕ ಕೋರೆ, ಶಿವಶರಣಪ್ಪ ವಲ್ಲಾಪೂರೆ, ನವೀಲಕುಮಾರ ಉತ್ಕಾರ್, ಮಾರುತಿ ಗಾದಗೆ, ಸಂದೀಪ ಪಾಟೀಲ್ ಸೇರಿದಂತೆ ಇನ್ನಿತರರಿದ್ದರು.

ಪೂಜ್ಯರ ಭವ್ಯ ಮೆರವಣಿಗೆ
ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಾಷ್ಟ್ರೀಯ ಪ್ರಶಸ್ತಿ ಪಡೆದ ಪ್ರಯುಕ್ತ ನಡೆದ ಪೂಜ್ಯ ಬಸವಲಿಂಗ ಪಟ್ಟದ್ದೇವರಿಗೆ ಸಂತಪೂರ ಗ್ರಾಮಸ್ಥರು ಭವ್ಯ ಸ್ವಾಗತ ಕೋರಿದರು. ತೆರೆದ ಸಾರೋಟಿನಲ್ಲಿ ಪೂಜ್ಯರಿಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ವಿವಿಧ ಕಲಾ ತಂಡಗಳು, ಡೊಳ್ಳು ಕುಣಿತ, ಕೋಲಾಟ ಪ್ರದರ್ಶನ ಗಮನ ಸೆಳೆಯಿತು.