ಶಿಕ್ಷಣ ಕ್ಷೇತ್ರದಲ್ಲಿ ಧಾರವಾಡದ ಕೊಡುಗೆ ಅಪಾರ


ಧಾರವಾಡ,ಜು.8: ಒಬ್ಬ ವಿದ್ಯಾರ್ಥಿಯ ಯಶಸ್ಸಿನ ಹಿಂದೆ ವಿದ್ಯಾಗುರು ಹಾಗೂ ಗ್ರಂಥಪಾಲಕರ ಪಾತ್ರ ಹೆಚ್ಚಿರುತ್ತದೆಎಂದು ವಿಶ್ರಾಂತ ಪ್ರಾಚಾರ್ಯ ಹಾಗೂ ಚನ್ನಮ್ಮನಕಿತ್ತೂರತಾಲೂಕಾಕನ್ನಡ ಸಾಹಿತ್ಯ ಪರಿಷತ್ತಿನಅಧ್ಯಕ್ಷಡಾ. ಎಸ್.ಬಿ. ದಳವಾಯಿ ಹೇಳಿದರು.
ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿದತ್ತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ವೀರಪ್ಪ ನಾಗಶೆಟ್ಟಿಯವರಜೀವನ ಮತ್ತು ಸಾಧನೆ’ ಕುರಿತುಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದಅವರು, ಖಗೋಳ ಶಾಸ್ತ್ರದಲ್ಲಿಜಗತ್ತಿನಲ್ಲಿಯೇ ಭಾರತವು ಮುಂದುವರೆದದೇಶವಾಗಿದೆ.ಇದಕ್ಕೆಗುರು ಮತ್ತುಗ್ರಂಥಪಾಲಕರು ಪ್ರತಿಭೆಗಳಿಗೆ ಜ್ಞಾನದಧಾರೆಎರೆಯುತ್ತಾರೆಎಂದುಡಾ.ಎಸ್.ಬಿ. ದಳವಾಯಿ ಹೇಳಿದರು.
ಲಿಂ. ವೀರಪ್ಪ ವೀರಭದ್ರಪ್ಪ ನಾಗಶೆಟ್ಟಿಅವರ ಸರಳ ಜೀವನಗಾಥೆಯನ್ನು ಸ್ಮರಿಸಿದರು.ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ನಾಗಶೆಟ್ಟಿಅವರು, ಸ್ವಾತಂತ್ರ್ಯ ಪೂರ್ವದಲ್ಲಿಯಅವರದೃಷ್ಟಿಕೋನ, ಅವರ ಕೃತಿಗಳಿಂದ ತಿಳಿದು ಬರುತ್ತದೆ.ಸ್ವಸ್ಥ ಸಮಾಜ ನಿರ್ಮಿಸುವಲ್ಲಿ ತೊಡಗಿಸಿಕೊಂಡ ವ್ಯಕ್ತಿಗಳಿಗೆ ಸಿಗುತ್ತಿದ್ದ ಆ ಗೌರವ ಇಂದಿನ ದಿನಗಳಲ್ಲಿ ಸಿಗದೇ ಹೋಗುತ್ತಿರುವುದು ವಿಷಾದನೀಯಎಂದು ದಳವಾಯಿ ನುಡಿದರು.
ಬಹುಮುಖ ಪ್ರತಿಭೆಯಆದರ್ಶ ಶಿಕ್ಷಕರಾಗಿದ್ದ ದಿ.ವೀರಪ್ಪ ನಾಗಶೆಟ್ಟಿಯವರು ಹಲವು ಮೌಲ್ಯಯುತ ಸಾಹಿತ್ಯ ಪ್ರಕಾರಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದವರು. ಮಾನವೀಯ ಮೌಲ್ಯ ಹೆಚ್ಚಿಸುವಲ್ಲಿ ಸ್ವಾತಂತ್ರ್ಯ ಪೂರ್ವದ ಶಿಕ್ಷಕರು ಮತ್ತು ಇಂದಿನ ಶಿಕ್ಷಕರ ವ್ಯತ್ಯಾಸಕುರಿತು ಎಳೆ-ಎಳೆಯಾಗಿ ಡಾ. ಎಸ್.ಬಿ. ದಳವಾಯಿ ಹೇಳಿದರು.
ಅಧ್ಯಕ್ಷತೆ ವಹಿಸಿದ ಚಂದ್ರಕಾಂತ ಬೆಲ್ಲದ ಮಾತನಾಡಿ, ಇಡೀ ಭಾರತದಲ್ಲಿ ಶಿಕ್ಷಣ ಕ್ಷೇತ್ರದಲ್ಲಿಧಾರವಾಡದಕೊಡುಗೆಅಪಾರವಾಗಿದೆ. ನಾಡಿನ ಬೌದ್ಧಿಕ ಬೆಳವಣಿಗೆಗೆ ಮೂಲ ಕಾರಣವಾಗುವವರುಗ್ರಂಥಾಲಯ ಹಾಗೂ ಗ್ರಂಥಪಾಲಕರಕೊಡುಗೆಅಪಾರಎಂದು ನಿವೃತ್ತಗ್ರಂಥಾಲಯಾಧಿಕಾರಿ ಜಿ.ಬಿ.ಹೊಂಬಳ ಅವರನ್ನು ಸನ್ಮಾನಿಸಿ ನುಡಿದರು.
ವೇದಿಕೆ ಮೇಲೆ ದತ್ತಿದಾನಿ ಅಕ್ಕಮಹಾದೇವಿ ನಾಗಶೆಟ್ಟಿ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನ ಪಡೆದಕಿತ್ತೂರಿನಎಸ್.ಜಿ. ಹೈಸ್ಕೂಲ ವಿದ್ಯಾರ್ಥಿ ಕು. ವಿಶಾಲ ಶ್ರೀಶೈಲ ಗುದಗಿಅವರನ್ನು ಸನ್ಮಾನಿಸಲಾಯಿತು.ಸನ್ಮಾನ್ಯಕ್ಕೆ ಪ್ರತಿಕ್ರಿಯಿಸಿದ ಕು.ವಿಶಾಲ, ಸಂಘದ ಈ ಸನ್ಮಾನಕ್ಕೆಕೃತಜ್ಞತೆಯನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಶಂಕರ ಹಲಗತ್ತಿ, ಡಾ.ಧನವಂತ ಹಾಜವಗೋಳ, ರಾಜಶೇಖಎಸ್. ನಾಗಶೆಟ್ಟಿ, ಎಸ್.ಎಸ್. ಬಣಕಾರ, ಬಿ.ಡಿ. ಪಾಟೀಲ, ಸಿ.ಎಸ್. ಪಾಟೀಲ, ನಿಂಗಣ್ಣಕುಂಟಿ, ಸಿ.ಎಸ್. ಪೊಲೀಸಪಾಟೀಲ, ಡಾ. ಮಲ್ಲಿಕಾರ್ಜುನ ಪಾಟೀಲ, ರಾಜೇಂದ್ರ ಸಾವಳಗಿ, ರಾಜಶ್ರೀ ದಿಂಡಲಕೊಪ್ಪ, ಎಂ.ಎಂ.ಚಿಕ್ಕಮಠ, ಶ್ರೀಮತಿ ಜ್ಯೋತಿ ಭಾವಿಕಟ್ಟಿ, ಎಸ್. ಎಸ್. ಲಕ್ಷ್ಮೇಶ್ವರ, ಬಿ.ಎಸ್. ಶಿರೋಳ, ಈರಣ್ಣ ಅಗಳಗಟ್ಟಿ, ಪ್ರಕಾಶಧರಣೆಪ್ಪಗೌಡರ, ಯು.ಎಸ್. ಕುನ್ನಿಭಾವಿ, ರಮೇಶ ಮರಳಿ, ಶಿವಾನಂದ ಡಿ. ಕೊಟ್ರಶೆಟ್ಟಿ, ಮಲ್ಲಿಕಾರ್ಜುನ ಮುತ್ನಾಳ, ಆನಂದ ವಸ್ತ್ರದ, ಡಾ.ಎಫ್.ಆರ್.ಬೇವಿನಕೊಪ್ಪ, ಪ್ರಕಾಶಜಕಾತಿ, ಶಿವಪ್ರಸಾದ ಭಾವಿಕಟ್ಟಿ, ಗುರುತುರಮರಿ, ಸಂಗಪ್ಪದೊಡ್ಡಣ್ಣವರ, ಸೇರಿದಂತೆ ನಾಗಶೆಟ್ಟಿ ಪರಿವಾರದವರು, ಬಂಧುಗಳು ಉಪಸ್ಥಿತರಿದ್ದರು.