ಶಿಕ್ಷಣ ಕ್ಷೇತ್ರಕ್ಕೆ ಮಠಗಳ ಕೊಡುಗೆ ಅನನ್ಯ:ಸಚಿವ ಶಿವರಾಜ ತಂಗಡಗಿ

ಇಲಕಲ್ಲ:ಸೆ.10:ಇಂದು ರಾಜ್ಯದಲ್ಲಿರುವ ಅನೇಕ ಶಿಕ್ಷಣ ಸಂಸ್ಥೆಗ ಳನ್ನು ಕಟ್ಟುವಲ್ಲಿ ಮತ್ತು ಮುಂದುವರಿಸಿಕೊಂಡು ಹೋಗವಲ್ಲಿ ಮಠಗಳ ಪಾತ್ರ ಪ್ರಮುಖವಾಗಿದೆ. ಅದರಂತೆ ಉತ್ತರ ಕರ್ನಾಟಕದಲ್ಲಿಯೇ ಅತ್ಯಂತ ಉತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಸ್ಥೆಯ ಕೊಡುಗೆ ಅಪಾರವಾಗಿದೆ ಎಂದು ಕನ್ನಡ ಮತ್ತು ಸಂಸ್ಕøತಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಅವರು ಶುಕ್ರವಾರದಂದು ಇಳಕಲ್ಲ ನಗರದ ವಿಜಯ ಮಹಾಂತೇಶ್ವರ ಶ್ರೀಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಶರಣ ಸಂಸ್ಕೃತಿ ಮಹೋತ್ಸವದ ಸಮಾರಂಭದಲ್ಲಿ ಶ್ರೀಮಠದಿಂದ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿ, ಇಳಕಲ್ಲಿನ ವಿಜಯ ಮಹಾಂತ ಶಿವಯೋಗಿಗಳ ಈ ಶ್ರೀಮಠ ಬಸವತತ್ವದ ಮೂಲ ಮಠವಾಗಿದೆ. ಡಾ.ಮಹಾಂತ ಶ್ರೀಗಳು ತಮ್ಮ ಜೀವನದುದ್ದಕ್ಕೂ ಬಸವ ತತ್ವಗಳನ್ನು ತಮ್ಮ ಉಸಿರು
ಎಂದು ತಿಳಿದು ಬಾಳಿದವರು. ಮಹಾಂತಪ್ಪನವರು ಬಸವ ತತ್ವಗಳನ್ನು ಪ್ರಚಾರ ಮಾಡುವಲ್ಲಿ ಅದಮ್ಯ ಪಾತ್ರವಹಿಸಿದ ಮಹಾನ್ ಪೂಜ್ಯರು. ಜನರ ದುಶ್ಚಟಗಳನ್ನು ಜೋಳಿಗೆಗೆ ಹಾಕಿಸಿಕೊಂಡು ವ್ಯಸ ನಮುಕ್ತ ಸಮಾಜ ನಿರ್ಮಿಸಲು ಅವರು ಶ್ರಮಿಸಿದ ಪರಿ ಅನನ್ಯವಾದುದು ಎಂದರು.
ಶ್ರೀಗಳ ಜೀವನದ ಕಥೆಯನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸಿಕೊಳ್ಳಲು ನಾನು ಮುಖ್ಯ ಮಂತ್ರಿಗಳಲ್ಲಿ ವಿನಂತಿಸುವೆ. ನಾನು ಈ ಮಠದಲ್ಲಿ ಆಟ ಆಡಿ,
ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನಮಠ, ಇತರ ಶರಣ ಸಂಸ್ಕೃತಿ ಮಹೋತ್ಸವ-2023
ಪ್ರವಚನ-2023

  1. 1. ಶರಣರ ಬರವೆಮಗೆ ಪಾಣ ಜೀವಾಳವಯ
    ಉಟ ಮಾಡಿ ಬೆಳೆದವನು. ಇಳಕಲ್ಲ ನಗರ ನನಗೆ ರಾಜಕೀಯ ಜೀವನ ಕೊಟ್ಟ ನಗರ. ನಾನು ಈ ನಗರಕ್ಕೆ ಸದಾ ಚಿರಋಣಿಯಾಗಿರುವೆ ಎಂದು ತಿಳಿಸಿದರು. ಸಾನ್ನಿಧ್ಯ ವಹಿಸಿದ್ದ ಪೂಜ್ಯ ಗುರುಮಹಾಂತ ಶ್ರೀಗಳು ಆಶಿರ್ವಚನ ನೀಡಿದರು. ವೇದಿಕೆಯ ಮೇಲೆ ಅನೇಕ ಶ್ರೀಗಳು ಹಾಗು ಗಣ್ಯ ಮಹನಿಯರು ಉಪಸ್ತಿತರಿದ್ದರು. ಸಂಗಣ್ಣ ಗದ್ದಿ ಸ್ವಾಗತಿಸಿದರೆ, ಮಹಾಂತೇಶ ಚಟ್ಟೇರ ವಂದಿಸಿದರು.