
ಭಾಲ್ಕಿ: ಸೆ.4:ಶಿಕ್ಷಣ ಕ್ಷೇತ್ರಕ್ಕೆ ಪತ್ರಿಕೆಗಳ ಕೊಡುಗೆ ಅಪಾರವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಅಭಿಪ್ರಾಯಪಟ್ಟರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಧಾರವಾಡ ತಾಲೂಕು ಘಟಕ ಭಾಲ್ಕಿ ವತಿಯಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರಿಗಾಗಿ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲಾ ಕ್ಷೇತ್ರಗಳಲ್ಲಿಯೂ ಶಿಕ್ಷಣ ಕ್ಷೇತ್ರ ತುಂಬಾ ವ್ಯಾಪಕವಾಗಿದೆ. ಪತ್ರಕರ್ತರು, ಮತ್ತು ಪತ್ರಿಕೆಗಳು ಶಿಕ್ಷಣ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪತ್ರಿಕೆಗಳ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಶಿಕ್ಷಕ ಸಂಘಟನೆಯವರು ಪತ್ರಕರ್ತರನ್ನು ಗುರುತಿಸಿ ಗೌರವಿಸುತ್ತಿರುವ ಕಾರ್ಯ ಮೆಚ್ಚುವಂತಹದ್ದಾಗಿದೆ ಎಂದು ಹೇಳಿದರು.
ತಾ.ಪಂ. ಸಹಾಯಕ ನಿದೇರ್ಶಕ ಚಂದ್ರಕಾಂತ ಬನ್ನಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಡಾ| ಕಾಶಿನಾಥ ಚಲವಾ, ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಸಂಘಟನೆಗಳ ಬಗ್ಗೆ ಮಾತನಾಡಿದರು. ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಶೋಕ ತಾಂಬೋಳೆ, ಚಂದ್ರಕಾಂತ ತಳವಾಡೆ, ಶೇಖ ಸಾಬೇರ ಪಟೇಲ, ಬಸವರಾಜ ದಾನಾ, ಸಲೀಂ ಪಟೇಲ, ಬಾಲಾಜಿ ಕಾಂಬಳೆ, ಮಾಯಾವತಿ ಗೋಖಲೆ, ಶಾಂತಾ ಮೊರೆ ಉಪಸ್ಥಿತರಿದ್ದರು.
ಇದೇವೇಳೆ ಪತ್ರಕರ್ತರಾದ ಗಣಪತಿ ಬೋಚರೆ, ಸಂತೋಷ ಬಿಜಿಪಾಟೀಲ, ಬಸವರಾಜ ಪ್ರಭಾ, ಸಂತೋಷ ಹಡಪದ, ರಾಜೇಶ ಮುಗಟೆ, ಮಲ್ಲಿಕಾರ್ಜುನ ಪಾಟೀಲ, ಪರಶುರಾಮ ಕರ್ಣಂ, ಭದ್ರೇಶ ಸ್ವಾಮಿ, ತುಕಾರಾಮ ಮೋರೆ, ಪ್ರವೀಣ ಮೇತ್ರೆ, ಮಲ್ಲಪ್ಪಾ ಹಾಸಗೊಂಡ, ವಿನಾಯಕ ಸಿಂಧೆ, ದೀಪಕ ಥಮಕೆ ರವರಿಗೆ ಶಿಕ್ಷಕರ ಸಂಘಟನೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಸವರಾಜ ದಾನಾ ಸ್ವಾಗತಿಸಿದರು. ದತ್ತು ಮುದಾಳೆ ನಿರೂಪಿಸಿದರು. ಸಾವರೆ ವಂದಿಸಿದರು.