
ಅಥಣಿ : ನ.13:ದೇಶದಲ್ಲಿ ಶಿಕ್ಷಣದ ಅಡಿಪಾಯವನ್ನು ಹಾಕುವಲ್ಲಿ ಮೌಲಾನಾ ಆಜಾದ್ ಅವರ ಪಾತ್ರದ ಸ್ಮರಣೀಯವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಆಜಾದ್ ಅವರ ಕೊಡುಗೆ ಅಪಾರವಾಗಿದೆ. ಮುಸ್ಲಿಂ ಸಮಾಜದ ಪ್ರತಿಯೊಬ್ಬರೂ ಶಿಕ್ಷಣ ಕಲಿಬೇಕು. ಇದರಿಂದ ದೇಶದ ಪ್ರಗತಿ ಕಾಣಲು ಸಾಧ್ಯ ನಮ್ಮ ಮನೆಯಲ್ಲಿ ನಮ್ಮ ಮಕ್ಕಳು ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಲಕ್ಷ್ಮಣ ಸವದಿ ಅವರು ಹೇಳಿದರು,
ಅವರು ಪಟ್ಟಣದ ಹನುಮಾನ ಆಗಸಿ ಹತ್ತಿರ ಇರುವ ಆಜಾದ್ ವೃತ್ತದಲ್ಲಿ ದೇಶದ ಪ್ರಥಮ ಶಿಕ್ಷಣ ಸಚಿವರು, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಭಾರತ ರತ್ನ ಡಾ. ಅಬುಲ್ ಕಲಾಂ ಆಜಾದ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಅನೇಕ ಮಹನೀಯರ ಜನ್ಮದಿನವನ್ನು ಆಚರಣೆ ಮಾಡುವ ಉದ್ದೇಶ ಏನೆಂದರೆ ಅವರು ಬಿಟ್ಟು ಹೋಗಿರತಕ್ಕಂತಹ ವಿಚಾರಧಾರೆಗಳನ್ನು ಅವರು ಸಮಾಜಕ್ಕೆ ಕೊಟ್ಟಿರತಕ್ಕಂತಹ ಅನೇಕ ಸಂದೇಶಗಳನ್ನ ಸಮಾಜಕ್ಕೆ ತಿಳಿಸುವುದು ಅವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕೆಂದು ಸಲಹೆಯನ್ನು ನೀಡಿದರು, ಅಬ್ದುಲ್ ಕಲಾಂ ಆಜಾದವರು ಎರಡು ವಿಚಾರಗಳನ್ನು ಪ್ರಮುಖವಾಗಿ ಇಟ್ಟುಕೊಂಡವರು ಒಂದು ಬ್ರಿಟಿಷರ ಕಪಿ ಮುಷ್ಟಿಯಲ್ಲಿ ಇದ್ದಂತಹ ಭಾರತ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಹೊರಗೆ ಬರಬೇಕು ಇನ್ನೊಂದು ಸಾಮಾಜಿಕವಾಗಿ ನ್ಯಾಯ ಸಿಗಬೇಕು. ಸಾಮಾಜಿಕ ನ್ಯಾಯ ಸಿಗಬೇಕಾuಟಿಜeಜಿiಟಿeಜದರೆ ಶಿಕ್ಷಣಕ್ಕೆ ಹೆಚ್ಚು ಒತ್ತನ್ನು ನೀಡಿ ಸಮಾಜ ಮೇಲೆ ಬರಬೇಕು . ಸಮಾಜ ಮೇಲ್ದರ್ಜಿಗೆ ಏರಬೇಕು ಒಂದು ಸಮಾಜ ಆರ್ಥಿಕ ಸ್ಥಿತಿ ಉತ್ಳವಾಗಬೇಕಾದರೆ ಶಿಕ್ಷಣಕ್ಕೆ ಬಹಳಷ್ಟು ಒತ್ತನ್ನು ಕೊಡಬೇಕೆಂದು ಸಂದೇಶವನ್ನು ನೀಡಿದವರು ಆಜಾದ್. ಅವರ ಜನ್ಮದಿನದಂದು ನಮ್ಮಿಂದ ಒಂದು ಪ್ರಮಾಣ ಆಗಬೇಕು ನಮ್ಮ ಮನೆಯಲ್ಲಿ ನಮ್ಮ ಮಕ್ಕಳು ಯಾರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಇದನ್ನ ಒಂದು ಕೆಲಸವನ್ನು ಮಾಡಿದರೆ ನಿಜವಾಗಲೂ ಆಜಾದ್ ಅವರಿಗೆ ಗೌರವನ್ನು ಕೊಟ್ಟಂತೆ ಆಗುತ್ತದೆ ಮುಸ್ಲಿಂ ಬಾಂಧವರಲ್ಲಿ ನಾನು ವಿನಂತಿ ಮಾಡುತ್ತೇನೆ ನಿಮ್ಮಲ್ಲಿ ಶಿಕ್ಷಣದ ಕೊರತೆ ಬಹಳಷ್ಟು ಇದ್ದು ಮುಸ್ಲಿಂ ಸಮಾಜದವರು ಹಿಂದಿನ ಕಾಲದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿಲ್ಲ ಇನ್ನ ಮೇಲೆ ಯಾರೂ ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಯಾರಿಗೆ ಮಕ್ಕಳಿಗೆ ಶಿಕ್ಷಣವನ್ನ ಕೊಡತಕ್ಕಂತ ಸಂದರ್ಭದಲ್ಲಿ ಆರ್ಥಿಕವಾಗಿ ಕಷ್ಟವಾಗುತ್ತಿದ್ದರೆ ಅಂತವರು ದಯವಿಟ್ಟು ನನ್ನನ್ನು ಸಂಪರ್ಕಿಸಿದರೆ ನಾನು ನನ್ನ ಕೈಲಾದಷ್ಟು ಸಹಾಯ ಮಾಡಿ ಶಿಕ್ಷಣಕ್ಕೆ ಒತ್ತು ಕೊಡುವಂತಹ ಕೆಲಸವನ್ನು ಮಾಡುತ್ತೇನೆ ಎಂದರು.
ನಂತರ ಮುಖಂಡರಾದ ಗಜಾನನ ಮಂಗಸೂಳಿ, ಯೂನುಸ್ ಮುಲ್ಲಾ ಹಾಗೂ ಮುಸ್ಲಿಂ ಧರ್ಮ ಗುರುಗಳು ಮಾತನಾಡಿದರು.
ಈ ವೇಳೆ ಯೂನುಸ್ ಮುಲ್ಲಾ, ಅಸ್ಲಮ್ ನಾಲಬಂದ, ಶ್ರೀಕಾಂತ್ ಪೂಜಾರಿ, ಕಲ್ಲೇಶ ಮಡ್ಡಿ, ಪ್ರಮೋದ ಬಿಳ್ಳೂರ, ಸಯ್ಯದಅಮೀನ ಗದ್ಯಾಳ, ಶಿವು ಗುಡ್ಡಾಪುರ್, ರಾವಸಾಬ ಐಹೊಳೆ, ಇಸ್ಮಾಯಿಲ್ ಕೊಕಟನೂರ, ಅಬ್ದುಲಅಜೀಜ ಮುಲ್ಲಾ, ಬಾಬು ಖೇಮಲಪೂರ. ಅಬೂಖಕರ ಕೊಕಟನೂರ ಮುಸಾ ಮಕಾನದಾರ, ಬಸೀರ ಖಲೀಫಾ ಸೇರಿದಂತೆ ಪುರಸಭೆ ಸದಸ್ಯರು ಹಾಗೂ ಹಲವರು ಉಪಸ್ಥಿತರಿದ್ದರು
ಅಥಣಿ ಶಿವಯೋಗಿಗಳ ಪುಣ್ಯ ಭೂಮಿ ಇಲ್ಲಿ ಸಂತ ಮಹಾಂತರು ಪಾದ ಸ್ಪರ್ಶ ಹೋಗಿರುವುದರಿಂದ ಅವರ ಪ್ರಭಾವ ಇನ್ನೂ ಈ ನೆಲದ ಮೇಲಿದೆ ಇರುವುದರಿಂದ ಇಲ್ಲಿ ಎಲ್ಲರೂ ಒಂದೇ ಎನ್ನುವ ಭಾವನೆಯಿಂದ ನಡೆದುಕೊಂಡು ಬಂದಿದ್ದೇವೆ. ಹಿಂದೂ ಮುಸ್ಲಿಂ ಎಂದರೆ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಒಂದು ಮುಖ ತಿಕ್ಕಿ ಹೋದರೆ ಆ ನಾಣ್ಯ ಹೇಗೆ ನಡೆಯುವುದಿಲ್ಲವೋ ಅದೇ ರೀತಿ ನಾಣ್ಯ ಯಾವತ್ತೂ ಚಲಾವಣೆಯಲ್ಲಿ ಇರಬೇಕೆಂದರೆ ನಾವೆಲ್ಲರೂ ಕೂಡ ಒಂದೇ ನಾಣ್ಯದ ಎರಡು ಮುಖಗಳಂತೆ ಸಮಾಜದ ಹಿತವನ್ನು ಬಯಸುವ ಕೆಲಸವನ್ನು ನಾವು ನೀವು ಕೂಡಿ ಮಾಡೋಣ.
ಲಕ್ಷ್ಮಣ ಸವದಿ, ಶಾಸಕರು,