
ಬೀದರ್:ಸೆ.7:ಮೇಡಿಕಲ್, ನರ್ಸಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸುಗಳ ಜೊತೆಗೆ ಶಾಲಾ ಕಾಲೇಜು ಆರಂಭಿಸಲು ಯೋಜನೆ ಸಿದ್ಧಪಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರದ ಮೂಲಕವೂ ಜಿಲ್ಲೆಯ ಜನತೆಗೆ ಸೇವೆ ಸಲ್ಲಿಸಲಾಗುತ್ತದೆ ಎಂದು ಗುರುಪಾದಪ್ಪ ನಾಗಮಾರಪಳ್ಳಿ ಮಲ್ಟಿ ಸೂಪರ್ ಸ್ಪೇಷಾಲಿಟಿ ಸಹಕಾರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಇಲ್ಲಿ ಪ್ರಕಟಿಸಿದರು.
ನಗರದ ಅಕ್ಕಮಹಾದೇವಿ ಕಾಲೋನಿಯಲ್ಲಿರುವ ಆಸ್ಪತ್ರೆಯ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ನಡೆದ 2022-2023 ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ 24 ತಿಂಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ವಿವಿಧ ಶಾಲಾ ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು. ಈಗಾಗಲೇ ಬಿಎಸ್‍ಸಿ ನರ್ಸಿಂಗ್ ಕಾಲೇಜು ಆರಂಭಿಸಲು ಅನುಮತಿ ದೊರೆತಿದೆ. ಇತರ ಶಾಲಾ ಕಾಲೇಜುಗಳ ಅನುಮತಿ ಪಡೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಗುರುಪಾದಪ್ಪ ನಾಗಮಾರಪಳ್ಳಿ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದರು.
ಸಹಕಾರಿ ಕ್ಷೇತ್ರದ ಮೊದಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಇರುವ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆಯು ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿದೆ. ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರ ಆಶಯದಂತೆ ರೈತರ, ಜನಸಾಮಾನ್ಯ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿದೆ. ಹೊಸ ಹೊಸ ಚಿಕಿತ್ಸಾ ಸಾಧನ, ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಅತ್ಯಲ್ಪ ವೆಚ್ಚದಲ್ಲಿ, ಅತ್ಯುತ್ತಮ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯ ಜನತೆಗೆ ಪ್ರಶಂಸೆಗೆ ಪಾತ್ರವಾಗಿದೆ. ಆಡಳಿತ ಮಂಡಳಿ ಸಹಕಾರದೊಂದಿಗೆ ಆಸ್ಪತ್ರೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಕಾರ್ಯ ಮುಂದುವರೆಯಲಿದೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಹೇಳಿದರು.
ಸಹಕಾರ ರಂಗದ ಭೀಷ್ಮರು, ತಂದೆಯವರು ಆಗಿದ್ದ ಡಾ. ಗುರುಪಾದಪ್ಪಾ ನಾಗಮಾರಪಳ್ಳಿ ಅವರ ಮಗನಾದ ನಾನು ಡಿಸಿಸಿ ಬ್ಯಾಂಕ ಅಧ್ಯಕ್ಷರಾದ ಶ್ರೀ ಉಮಾಕಾಂತ ನಾಗಮಾರಪಳ್ಳಿರವರ ಮಾರ್ಗದರ್ಶನದಲ್ಲಿ ಹಾಗೂ ಆಸ್ಪತ್ರೆಯ ಆಡಳಿತ ಮಂಡಳಿಯ ಸಲಹೆ, ಸಹಕಾರದೊಂದಿಗೆ ಆಸ್ಪತ್ರೆಯನ್ನು ಅತ್ಯುತ್ತಮವಾಗಿ ಸುಗಮವಾಗಿ ನಡೆಸಿಕೊಂಡು ಬರುತ್ತಿರುವುದು ಎಲ್ಲರಿಗೂ ತಿಳಿದಿದೆ. ತಾಯಿ ಹಾಗೂ ನವಜಾತ ಶಿಶುಗಳ ಆರೈಕೆಯಲ್ಲಿ ನಾವು ಮಾಡಿರುವ ಸಾಧನೆಯನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಎಂದು ಸೂರ್ಯಕಾಂತ್ ನಾಗಮಾರಪಳ್ಳಿ ಹೇಳಿದರು.
ನವಜಾತ ಶಿಶುವಿಗಿದ್ದ ಹೃದಯ ರಂಧ್ರ ಸಮಸ್ಯೆಗೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದೇವೆ. ಕಡಿಮೆ ತೂಕದ, ಗಂಭೀರ ಸ್ಥಿತಿಯಲ್ಲಿದ್ದ ನವಜಾತ ಶಿಶುಗಳನ್ನು ಉಳಿಸಿಕೊಂಡಿದ್ದೇವೆ. ಪರಸ್ಪರ ಅಂಟಿಕೊಂಡು ಜನಿಸಿದ್ದ ಶಿಶುಗಳನ್ನು ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಿ, ಹೊಸ ಬದುಕು ನೀಡುವ ಕೆಲಸವನ್ನೂ ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಮಾಡಿದ್ದಾರೆ. ಇವೆಲ್ಲವೂ ಹೆಮ್ಮೆಪಡಬಹುದಾದ ಸಂಗತಿಗಳು ಎಂದು ಆಸ್ಪತ್ರೆ ಅಧ್ಯಕ್ಷರು ಹೇಳಿದರು.
ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆದಿದ್ದು, ಆರಂಭದಿಂದ ಇಲ್ಲಿಯವರೆಗೆ 31-03-2023 ಕ್ಕೆ ಅಂತ್ಯಗೊಂಡಂತೆ 16484 ಒಖI.; 12277 ಅಖಿ; 12545 ಘಿ-ಖಚಿಥಿ; 19303 USಉ; 3866 ಇಅಉ; 74146 ಐಂಃ; 82171 ಔPಆ; 12563 IPಆ;4203 ಶಸ್ತ್ರ ಚಿಕಿತ್ಸೆ ಮತ್ತು 500 ಅoviಜ ಗಿಚಿಛಿಛಿiಟಿe ನೀಡುವ ಮುಖಾಂತರ ಸೇವೆ ಒದಗಿಸಿದ್ದೇವೆ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಅಡಿಯಲ್ಲಿ ಮತ್ತು ಸ್ಟಾರ ಹೆಲ್ತ್ ಇನ್ನುರೆನ್ಸ್, ಯಶಸ್ವಿನಿ ಅಡಿಯಲ್ಲಿ ಕೂಡಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಆಸ್ಪತ್ರೆಯು ರೂಪಾಯಿ 8.00 ಲಕ್ಷ ಲಾಭದಲ್ಲಿದೆ. ಆಸ್ಪತ್ರೆ ಆರಂಭವಾದಾಗಿನಿಂದ ಈವರೆಗೆ ಒಟ್ಟು 2,40,000 ಲಕ್ಷ ಮೇಲ್ಪಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ದಿ. ಗುರುಪಾದಪ್ಪಾ ನಾಗಮಾರಪಳ್ಳಿ ಅವರು ಬೀದರ ಜಿಲ್ಲೆಯಲ್ಲಿ 350 ಹಾಸಿಗೆಯುಳ್ಳ ಆಸ್ಪತ್ರೆಯೊಂದಿಗೆ ಮೆಡಿಕಲ್ ಕಾಲೇಜ ಸ್ಥಾಪಿಸಿಬೇಕೆಂಬ ಕನಸ್ಸು ಇಟ್ಟುಕೊಂಡು ಲಾಲಬಾಗ ಸಮೀಪ 70 ಎಕರೆ 18 ಗುಂಟೆÉ ಜಮೀನನ್ನು ಸುಮಾರು 4 ಕೋಟಿ ವೆಚ್ಚದಲ್ಲಿ ಖರೀದಿ ಮಾಡಿದ್ದರು. ಮೇಡಿಕಲ್ ಕಾಲೇಜು ಆರಂಭಿಸಲು ಗಂಭೀರ ಪ್ರಯತ್ನ ನಡೆಯುತ್ತಿದೆ ಎಂದರು.
ಈ ಹಿಂದೆ ಕೋವಿಡ್‍ನಿಂದ ಇಡೀ ದೇಶ ಸಂಕಟದಲ್ಲಿ ಸಿಲುಕಿತ್ತು. ಆ ಕಷ್ಟದ ಕಾಲದಲ್ಲಿ ನಮ್ಮ ಆಸ್ಪತ್ರೆಯಿಂದ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿತ್ತು. ಕೋವಿಡ್ ಸೋಂಕಿತರ ಚಿಕಿತ್ಸೆಗೆ ಕೋವಿಡ್ ಕೇರ್ ಸೆಂಟರ್ ಆರಂಭಿಸಿ, ಒಂದೇ ರೂಪಾಯಿಗೆ ಊಟ, ತಿಂಡಿ, ವಸತಿ, ಮೆಡಿಸಿನ್, ಚಿಕಿತ್ಸೆ ನೀಡಿರುವುದು ತಮಗೆಲ್ಲ ತಿಳಿದಿದೆ. ವಾರದ ಏಳೂ ದಿನ, ದಿನದ 24 ಗಂಟೆ ಆಸ್ಪತ್ರೆಯು ಜನರ ಆರೋಗ್ಯ ರಕ್ಷಣೆಯಲ್ಲಿ ತೊಡಗಿದೆ ಎಂದರು.
ನಮ್ಮ ಆಸ್ಪತ್ರೆಯಲ್ಲಿ 1.5 ಟೆಸ್ಲಾ-16 ಚಾನಲ್ ಎಂಆರ್‍ಐ, ಸಿಟಿ ಸ್ಕ್ಯಾನ 16 ಸ್ಲೈಸ್,
ಅಲ್ಟ್ರಾ ಸೌಂಡ ಕಲರ್ ಡಾಪ್ಲರ್, ಡಿಜಿಟಲ್ ಎಕ್ಸ-ರೇ,
ಉಚಿತ ಆಂಬ್ಯುಲೆನ್ಸ ಸೇವೆ, ಫುಲ್ ಲೋಡೆಡ್ ವೆಂಟಿಲೇಟರ್ ಸಹಿತ ಆಂಬ್ಯುಲೆನ್ಸ್ ಮುಂತಾದ ಸೇವೆಗಳಿವೆ. ವಿಕಿರಣ ಶಾಸ್ತ್ರಜ್ಞ, ಎಮ್ ಡಿ ವೈದ್ಯರು, ಸ್ತ್ರಿರೋಗ ತಜ್ಞರು, ಮಕ್ಕಳ ತಜ್ಞರು, ಚರ್ಮ ರೋಗ ತಜ್ಞರು, ಎಲುಬು ತಜ್ಞರು, ಲ್ಯಾಪರೊಸ್ಕೋಪಿ ತಜ್ಞರು ಕಿವಿ ಗಂಟಲ ತಜ್ಞರು, ಸಾಮಾನ್ಯ ಶಸ್ತ್ರ ಚಿಕಿತ್ಸಕರು ಇದ್ದಾರೆ.
ನವಜಾತ ಶಿಶುಗಳ ಆರೈಕೆ, ಚಿಕಿತ್ಸೆಗೆ ಸುಸಜ್ಜಿತ ಎನ್‍ಐಸಿಯು ಘಟಕ ಇದೆ. 200 ಗ್ರಾಂ ಕ್ಕಿಂತ ಕಡಿಮೆ ತೂಕ ಇರುವ ಮಕಳಿಗೆ ವಿಶೇಶವಾಗಿ ಚಿಕಿತ್ಸೆ ನೀಡುವ ಮುಖಾಂತರ ಬದುಕಿಸುವ ಕೆಲಸವನ್ನು ನಮ್ಮ ವೈದ್ಯರು ಮಾಡುತ್ತಿದ್ದಾರೆ.
ಚಿಕಿತ್ಸಾ ವೆಚ್ಚದಲ್ಲಿ ಶೇರುದಾರರಿಗೆ ಶೇ 10% ರಿಂದ 20% ವರಗೆ ರಿಯಾಯಿತಿ,
ಹಿರಿಯನಾಗರಿಕರಿಗೆ ಶೇ 10% ರಿಯಾಯಿತಿ ನೀಡಲಾಗುತ್ತಿದೆ. ನಗರ ಪ್ರದೇಶದ ವ್ಯಾಪ್ತಿಯಲ್ಲಿ ರೋಗಿಗಳಿಗೆ ಉಚಿತವಾಗಿ ದಿನದ 24*7 ಸಮಯದಲ್ಲಿ ಸೇವೆ ಲಭ್ಯವಿದೆ.
ವಿಶೇಷ ಮತ್ತು ತುರ್ತು ಚಿಕಿತ್ಸೆ ಪಡೆಯಲು ಹೊರರಾಜ್ಯಗಳಿಗೆ ಹೋಗಬೇಕಾದ ರೋಗಿಗಳಿಗೆ ಅತಿ ಕಡಿಮೆ ಖರ್ಚಿನಲ್ಲಿ ಸಂಪೂರ್ಣ ಜೀವ ಬೆಂಬಲ ಇರುವ ಸುಸಜ್ಜಿತ ವೆಂಟಿಲೇಟರ್ ಹೊಂದಿದ ಎರಡು ವಾಹನಗಳ ಸೌಲಭ್ಯ ಲಭ್ಯವಿದೆ.
ಆಡಳಿತ ಮಂಡಳಿಯ ನಿರ್ಣಯ ಹಾಗೂ ಅಧ್ಯಕ್ಷರಿಗೆ ಜವಾಬ್ದಾರಿ ವಹಿಸುವ ಮುಖಾಂತರ ಆಸ್ಪತ್ರೆಯ ಜಮಿನು ಆಸ್ತಿಯ ಸರ್ವೆ ಸಂಖ್ಯೆ 673/1,673/2 ನಲ್ಲಿ 1.05 ಜಮಿನು ಅಂದರೆ 45 ಗುಂಟೆ ಜಮಿನನ್ನು ಶ್ರಿ ಉತ್ತರಾಧಿಮಠ ಶ್ರಿ ಸತ್ಯಾತ್ಮತೀರ್ಥ ಸ್ವಾಮಿಜಿ ಶಂಕರ ಪುರ ಬಸವನಗುಡಿ ಬೆಂಗಳೂರು ಇವರಿಗೆ ದಾನವಾಗಿ ನೀಡಲಾಗಿದೆ ದೇವಸ್ಥಾನ ನಿರ್ಮಾಣದಿಂದ ನಮ್ಮ ಜಮೀನು ಪರಿಸರದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಲಿದೆ.
ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಉಮಾಂಕಾಂತ ನಾಗಮಾರಪಳ್ಳಿ ಅವರು ತಮ್ಮ ಬ್ಯಾಂಕಿನ ಕಡೆಯಿಂದ ಮತ್ತು ಅಪೇಕ್ಸ್ ಬ್ಯಾಂಕಿನ ನೆರವಿನಿಂದ ಆಸ್ಪತ್ರೆಗೆ ಮಿನಿ ಅಂಬುಲೆನ್ಸ ನೀಡಿದ್ದಾರೆ. ಹೊಸದಾಗಿ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆ ಮಾಡುವ ಅತ್ಯಾಧುನಿಕ ಸಾಧನವನ್ನು ಕೊಡುಗೆಯಾಗಿ ನೀಡಿದ್ದಾರೆ. ವಿಶೇಷವಾಗಿ ಇವರಿಗೆ ಆಸ್ಪತ್ರೆಯ ಆಡಳಿತ ಮಂಡಳಿಯ ಪರವಾಗಿ ಹೃತ್ಪೂರ್ವಕÀ ವಂದನೆಗಳು.
ಆಸ್ಪತ್ರೆಯ ಕನಸು ಸಾಕಾರ ಮಾಡುವುದಕ್ಕಾಗಿ ನಿರಂತರ ಸಲಹೆ ಸೂಚನೆ ನೀಡುತ್ತಿರುವ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಗೆ ಆನಂತ ಕೃತಜ್ಞತೆ ಸಲ್ಲಿಸುವೆ. ನಿಗದಿತ ಸಮಯದಲ್ಲಿ ಆಸ್ಪತ್ರೆಗೆ ಮಂಜೂರಿ ನೀಡಿದ ಕೇಂದ್ರ ಸರ್ಕಾರದ ಸಹಕಾರ ಇಲಾಖೆಗೆ ಕೃತಜ್ಞತೆ ಸಲ್ಲಿಸುವೆ. ಸಹಕಾರ ಸಂಘಗಳ ಜಂಟಿ ನಿಬಂಧಕರು ರಾಯಚೂರು, ಬೀದರ ಸಹಕಾರ ಇಲಾಖೆ ಉಪ ನಿಭಂದಕರು, ಸಹಾಯಕ ನಿಬಂಧಕರಿಗೆ ಧನ್ಯವಾದಗಳು. ಜಿಲ್ಲಾ ಆರೋಗ್ಯ ಮತ್ತು ಕುಂಟುಂಬ ಕಲ್ಯಾಣ ಅಧಿಕಾರಿಗಳಿಗೆ, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಸಮನ್ವಯ ಅಧಿಕಾರಿಗಳಿಗೆ ನಮ್ಮ ಧನ್ಯವಾದಗಳು.
ಆಸ್ಪತ್ರೆಯ ಸ್ಥಾಪನೆಗೆ ತಮ್ಮ ಅಮೂಲ್ಯ ಸಮಯ ನೀಡಿ ಸೂಕ್ತ ಸಲಹೆಗಳನ್ನು ನೀಡಿದ ಎಲ್ಲಾ ವೈದ್ಯರಿಗೆ ಮತ್ತು ಇಂಜಿನಿಯರ್‍ಗೆ ಕೃತಜ್ಞತೆ ಸಲ್ಲಿಸುವೆ. ಆಸ್ಪತ್ರೆಯ ನಿರ್ಮಾಣಕ್ಕೆ ಬುನಾದಿ ಎಲ್ಲ ವೈಯಕ್ತಿಕ ಷೇರುದಾದರರು. ಜಿಲ್ಲೆಯ ಎಲ್ಲ ಫ್ಯಾಕ್ಸ್ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುವೆ. ಆಸ್ಪತ್ರೆಯ ಎಲ್ಲ ರೀತಿಯ ಸಹಕಾರ ನೀಡುವ ಜತೆಗೆ ಷೇರುದಾರ ಸದಸ್ಯರನ್ನು ಮಾಡಿಕೊಡುವುದಾಗಿ ಭರವಸೆ ನೀಡಿ ನಮಗೆ ಸ್ಪೂರ್ತಿ ತುಂಬಿರುವ ವಿಧಾನ ಸಭೆ ಸದಸ್ಯರಿಗೂ, ಸಂಸದರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೂ, ಬೀದರ ಜಿಲ್ಲಾಧಿಕಾರಿ, ಅಪರÀ ಜಿಲ್ಲಾಧಿಕಾರಿಗಳಿಗೂ, ಜಿಲ್ಲಾ ಪಂಚಾಯಿತಿಯ ಸಿ.ಇ.ಓ. ಹಾಗೂ ಜಿಲ್ಲಾ ಪೆÇೀಲಿಸ್ ವರಿಷ್ಠ ಅಧಿಕಾರಿಗೂ ಸಹ ನಾನು ಆನಂತ ಕೃತಜ್ಞತೆ ಸಲ್ಲಿಸುವೆ ಎಲ್ಲರಿಗೂ ನಮಸ್ಕಾರಗಳು.
ಸಭೆಯಲ್ಲಿ ನಿರ್ದೇಶಕರಾದ ಸಿದ್ರಾಮ ಡಿಕೆ, ಡಾ. ಚಂದ್ರಕಾಂತ್ ಗುದಗೆ, ಡಾ. ರಜನೀಶ ವಾಲಿ, ಡಾ.ವಿಜಯಕುಮಾರ್ ಕೋಟೆ , ಸಂತೋಷ ತಾಳಂಪಳ್ಳಿ, ರಾಮದಾಸ ತುಳಸಿರಾಮ್ಳ, ಉದಯ ಹಲವಾಯಿ, ಅಶೋಕ ರೇಜಂತಲ್, ಶ್ರೀಮತಿ ವಿಜಯಲಕ್ಷಿಹೂಗಾರ್ , ನಿಜ್ಜಪ್ಪ ಪತ್ರಿ, ಆಕಾಶ್ ಪಾಟೀಲ್, ಸೈಯೇದ ಖುಝಿರಿಲ್ಲ, ಜೈಕುಮಾರ್ ಕಾಂಗೆ, ಅನಿಲ್ ಬೆಳದ್ದರ ಆಸ್ಪತ್ರೆಯ ಸಿಇಒ ಕೃಷ್ಣಾರೆಡ್ಡಿ, ಆಡಳಿತಾಧಿಕಾರಿ ಡಾ. ದೀಪಕ ಚೋಕ್ಡಾ, ಎನ್‍ಎಸ್‍ಎಸ್‍ಕೆ ನಿರ್ದೇಶಕ ಶಂಕರ ಪಾಟೀಲ್, ಮತ್ತು ನರಸಾ ರೆಡ್ಡಿ , ಮಾಧವರಾವ್ ಪಾಟೀಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.