ಶಿಕ್ಷಣ ಕ್ರಾಂತಿ ತಂದವರು ಸಾವಿತ್ರಿಬಾಯಿ ಫುಲೆ-ಪೂಜಾರ

ಸವಣೂರು,ಜ4: ನಾಲ್ಕು ಗೋಡೆಗಳ ಮಧ್ಯೆ ಸೀಮಿತಿವಾಗಿದ್ದ ಮಹಿಳೆಯರಿಗೆ ಅಕ್ಷರಜ್ಞಾನ ನೀಡಿ ಅಕ್ಷರದವ್ವನಾದ ಕ್ರಾಂತಿ ಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಸಂಘರ್ಷಮಯ ಬದುಕನ್ನು ಪ್ರತಿಯೋರ್ವರೂ ಅರಿತು ಅವರ ಆದರ್ಶಗಳನ್ನು ಮೈಗೂಡಿಸಕೊಳ್ಳಬೇಕೆಂದು ಡಿವೈಎಫ್‍ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಕರೆ ನೀಡಿದರು.
ತಾಲೂಕಿನ ಚವಢಾಳ ಪ್ರಾಥಮಿಕ ಶಾಲೆಯಲ್ಲಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (ಡಿವೈಎಫ್‍ಐ) ಗ್ರಾಮ ಘಟಕದ ವತಿಯಿಂದ ಆಯೋಜಿಸಿದ್ದ ಸಾವಿತ್ರಿ ಬಾಯಿ ಪುಲೆಯವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರ ಶಿಕ್ಷಣಕ್ಕಾಗಿ ಹಾಗೂ ಸಮಾಜದಲ್ಲಿನ ಮೌಢ್ಯ ತೊಲಗಿಸಲು ಪತಿ ಜ್ಯೋತಿಭಾ ಪುಲೆ ಅವರ ಜೊತೆಗೂಡಿ ಜೀವನಪೂರ್ತಿ ಶ್ರಮಿಸಿದ ಮಹನೀಯ ವ್ಯಕ್ತಿತ್ವ ಸಾವಿತ್ರಿಬಾಯಿಯವರದು. ಸಾವಿತ್ರಿಬಾಯಿಫುಲೆಯವರ ಜನುಮದಿನವನ್ನು ಸರಕಾರ ಶಿಕ್ಷಕಿಯರ ದಿನವನ್ನಾಗಿ ಆಚರಿಸಲು ಘೋಷಣೆ ಮಾಡಿ ಗೌರವಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ಶಿಕ್ಷಕಿ ಮೈತ್ರಾ ಪುಟ್ಟಮ್ಮನವರ ಮಾತನಾಡಿ, ಸಾವಿತ್ರಿ ಬಾಯಿ ಪುಲೆಯವರು ಬಾಲ್ಯವಿವಾಹ ದಂತಹ ಅನಿಷ್ಠಗಳನ್ನು ಹೋಗಲಾಡಿಸಲು ಬಹುದೊಡ್ಡ ಕೊಡುಗೆಯನ್ನು ನೀಡಿದರು. ನಾವಿಂದು ಮುಹಿಳೆಯರಾಗಿ ಶಿಕ್ಷಣ ಪಡೆಯಲು ಅವಕಾಶ ಸಿಕ್ಕಿದೆ ಎಂದರೆ ಅದು ಸಾವಿತ್ರಿಬಾಯಿ ಪುಲೆಯವರು ಅಂದು ಮಾಡಿದ ಕೆಲಸದಿಂದ ಸಾಧ್ಯವಾಗಿದೆ ಎಂದರು.
ಡಿವೈಎಫ್‍ಐ ಗ್ರಾಮ ಘಟಕದ ಅಧ್ಯಕ್ಷರಾದ ಚಂದ್ರು ಬಿದರಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ದೊಡ್ಮನಿ, ನಿರ್ಮಲಾ ರಾ.ಅತ್ತಿಗೇರಿ,ಮುಖಂಡರಾದ ಲಕ್ಷಣ ಸೂರಣಗಿ, ಶಿವಪುತ್ರಪ್ಪ ಹರ್ಲಾಪುರ ಶಿಕ್ಷಕಿಯರಾದ ರೇಣುಕಾ ಕಹಾರ,ಬಸಮ್ಮ ಏಗನಗೌಡ್ರ ಉಪಸ್ಥಿತರಿದ್ದರು. ಕುಮಾರಿ ಅಕ್ಷತಾ ತಳ್ಳಿಹಳ್ಳಿ ಹಾಗೂ ಸಂಗಡಿಗರು ಪ್ರಾರ್ಥಿಸಿ, ನಾರಾಯಣ ಬಡಿಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Spread the love