ಶಿಕ್ಷಣ ಕ್ರಾಂತಿಯ ಹರಿಕಾರ ಡಾ.ಸರ್ವಪಲ್ಲಿ ರಾಧಾಕೃಷ್ಣನ್.

ದಾವಣಗೆರೆ ಸೆ 5;   ಭಾರತ ಕಂಡ ಅತ್ಯಂತ ಶ್ರೇಷ್ಠ ಶಿಕ್ಷಣತಜ್ಞ, ಶಿಕ್ಷಣ ಕ್ರಾಂತಿಯ ಹರಿಕಾರ ಡಾ. ಸರ್ವಪಲ್ಲಿ ರಾಧಾಕೃಷ್ಣನ್  ಎಂದು ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಪ್ರೊ. ಚನ್ನಪ್ಪ ಪಲ್ಲಾಗಟ್ಟೆ ಅಭಿಪ್ರಾಯಪಟ್ಟರು . ಇಂದು ಭಾರತ ಸೇವಾದಳ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತಿ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಧಾಕೃಷ್ಣನ್ ರವರು   ವಿವಿಧ ಪದವಿಯನ್ನು ಪಡೆದು  ಹಲವು ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಕುಲಪತಿಗಳಾಗಿ ಸೇವೆ ಸಲ್ಲಿಸಿ, ಭಾರತದ ಉಪರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿ ಭಾರತ ರತ್ನ ಪ್ರಶಸ್ತಿಯನ್ನು ಪಡೆದುಕೊಂಡ ಏಕೈಕ ಶಿಕ್ಷಣ ಪ್ರೇಮಿಯಾಗಿದ್ದಾರೆ, ಇವರ ಹುಟ್ಟು ಹಬ್ಬವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ.ಶಿಕ್ಷಣ ಕ್ಷೇತ್ರದಲ್ಲಿ ತಾಲೂಕು, ಜಿಲ್ಲಾ ಮತ್ತು ರಾಷ್ಟ್ರ ಪ್ರಶಸ್ತಿಯನ್ನು ಪಡೆಯುತ್ತಿರುವ ಶಿಕ್ಷಕರಿಗೆ ಅಭಿನಂದನೆ  ತಿಳಿಸಿದರು. ಕೇಂದ್ರ ಸಮಿತಿ ಸದಸ್ಯ ಟಿ.ನಾಗರಾಜ್ ಮತ್ತು  ನಿವೃತ್ತ ಶಿಕ್ಷಕ ವೀರೇಶ ರವರು ಶಿಕ್ಷಕರ ಮತ್ತು ಶಿಷ್ಯರ ಬಾಂಧವ್ಯಗಳ ಕುರಿತು ಮಾತನಾಡಿದರು. ಅಣ್ಣಯ್ಯ ವಲಯ ಸಂಘಟಕರು ಡಾ. ಸರ್ವಪಲ್ಲಿ ರಾಧಾಕೃಷ್ಣನ್   ಬಾಲ್ಯ,ಶಿಕ್ಷಣ, ವೃತ್ತಿ ಸಮಾಜ ಸೇವೆ, ಪ್ರಾಧ್ಯಾಪಕ ಜೀವನ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ. ಬಿ. ಪರಮೇಶ್ವರಪ್ಪ ಬಿ.ಪಿ ಪ್ರಸಾದ್, ತಾಲೂಕು ಸೇವಾದಳ ಅಧ್ಯಕ್ಷ ಹಾಸಬಾವಿ ಕರಿಬಸಪ್ಪ,  ರತ್ನ ವೀರೇಶ್, ಶೈಲಜಾ ಪರಶುರಾಮ್ ಕಟೌಕರ್, ಕೆ. ಪಿ ಶ್ರೀಕಾಂತ್  ಉಪಸ್ಥಿತರಿದ್ದರು. ಗೋಪಾಲಪ್ಪ ಶಿಕ್ಷಕರು ಸ್ವಾಗತಿಸಿದರು, ಹನುಮಂತಪ್ಪ ನಿವೃತ್ತ ಶಿಕ್ಷಕರು ವಂದಿಸಿದರು. 

Attachments area