ಶಿಕ್ಷಣ ಕ್ರಾಂತಿಗೆ ಬಿಜೆಪಿ ಬೆಂಬಲಿಸಿ: ಮಂಜುಳಾ ಅರವಿಂದ ಲಿಂಬಾವಳಿ

ಕೆ.ಆರ್. ಪುರ,ಮೇ.೧-ಮಹದೇವಪುರ ಕ್ಷೇತ್ರದಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ವಿವಿಧ ಯೋಜನೆಗಳಡಿ ೧೧೪ ಹೆಚ್ಚುವರಿ ಕೊಠಡಿಗಳನ್ನು ಶಾಸಕರಾದ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ನಿರ್ಮಾಣ ಮಾಡಲಾಗಿದೆ,ಶಿಕ್ಷಣ ಕಾಂತ್ರಿಗೆ ಬಿಜೆಪಿಯನ್ನು ಬೆಂಬಲಿಸುವಂತೆ
ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಮನವಿ ಮಾಡಿದರು.

ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ,ಅಶ್ವಥ್ ನಗರ,ಎಇಸಿಎಸ್ ಬಡಾವಣೆ,ಕುಂದಲಹಳ್ಳಿಕಾಲೋನಿ,ಲಕ್ಷ್ಮೀನಾರಾಯಣಪುರ, ಚಿನ್ನಪ್ಪನಹಳ್ಳಿ,ದೊಡ್ಡನೆಕ್ಕುಂದಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಮಾತನಾಡಿದರು.

ಶಿಕ್ಷಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ,ಕಂಪ್ಯೂಟರ್ ಹಾಗೂ ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

ಎರಡು ಪ್ರಥಮ ದರ್ಜೆ ಕಾಲೇಜುಗಳ ನಿರ್ಮಾಣ ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ವಿವರಿಸಿದರು.

ನನ್ನ ಪತಿ ಅರವಿಂದ ಲಿಂಬಾವಳಿ ಅವರು ಮಾಡಿರುವ ಶಿಕ್ಷಣ ಕ್ಷೇತ್ರದ ಕ್ರಾಂತಿಯನ್ನು ಮುಂದುವರೆಸಲು ಅವರ ಪತ್ನಿ ಹಾಗೂ ಬಿಜೆಪಿ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮಹದೇವಪುರ ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವ ಮುಂದುವರೆಸಲು ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿದರು.

ಮಾರತ್ತಹಳ್ಳಿ,ದೊಡ್ಡನೆಕ್ಕುಂದಿ, ಇಎಸಿಎಸ್ ವಾರ್ಡನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು,ಅಭಿವೃದ್ಧಿ ಕಾರ್ಯಗಳು ನನಗೆ ಗೆಲುವಿನ ಶೀರಕ್ಷೆ ನೀಡಲಿವೆ ಎಂದು ನುಡಿದರು.

ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಮನೋಹರರೆಡ್ಡಿ,
ಮಾಜಿ ಅಧ್ಯಕ್ಷ ವೆಂಕಟಸ್ವಾಮಿ ರೆಡ್ಡಿ, ಮುಖಂಡರಾದ ಜಯದೇವ್,ಚಂದನ್,ವಿಜಯ್ ಕುಮಾರ್
ಇದ್ದರು.

ಸುದ್ದಿಚಿತ್ರ: ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುಳಾ ಅರವಿಂದ ಲಿಂಬಾವಳಿ ಅವರು ಎಇಸಿಎಸ್ ನ ಕುಂದಲಹಳ್ಳಿ ಕಾಲೋನಿಯಲ್ಲಿ ಪ್ರಚಾರ ನಡೆಸಿದರು.