ಶಿಕ್ಷಣ ಕ್ರಾಂತಿಗೆ ಪಣ ತೊಟ್ಟ ಶಾಸಕ ಕೆ.ಶಿವನಗೌಡನಾಯಕ

ಅರಕೇರಾ,ಮಾ.೦೯- ಏಷ್ಯಾ ಖಂಡದಲ್ಲೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡು ಇದುವರಿಗೂ ಇದ್ದಂತಹ ಒಂದು ತಾಲೂಕಿನ ಶೈಕ್ಷಣಿಕ ಹಾಗೂ ರಸ್ತೆ ಕೃಷಿ, ಆರೋಗ್ಯ ಇತರೆ ಹಲವಾರು ಕ್ಷೇತ್ರಗಳಲ್ಲಿ ಅತ್ಯಂತ ಗಮನಾರ್ಹ ಪ್ರಗತಿಯನ್ನು ಕಾಣುತ್ತಿರುವದು ತುಂಬಾ ಶ್ಲಾಘನೀಯ ಮತ್ತು ಸಂತೋಷಕರ ಸಂಗತಿಯಾಗಿದೆ.
ಇದೆಲ್ಲದಕ್ಕೂ ಈಗಿರುವ ಶಾಸಕರಾದ ಕೆ.ಶಿವನಗೌಡ ನಾಯಕ್‌ರವರು ಪಾದರಸದಂತೆ ಮಾಡುವ ಕೆಲಸ ಹಾಗೂ ಅವರ ದೂರದೃಷ್ಟಿ ಕಾರಣವಾಗಿದೆ. ಅವರ ಸಂಕಲ್ಪದಂತೆ ಅರಕೇರಾ ತಾಲೂಕಾ ಕೇಂದ್ರವಾಗಿದೆ ಹಾಗೂ ತಾಲೂಕ ಕೇಂದ್ರದ ಮೊದಲೆ ಅರಕೇರಾಕ್ಕೆ ಸೂಸಜ್ಜಿತ ರಸ್ತೆಗಳು ನಿರ್ಮಾಣಗೊಂಡಿವೆ. ಶಾಲಾ ಕೊಠಡಿಗಳು ಸಿದ್ದಗೊಂಡಿವೆ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯು ಮೂರು ಅಂತಸ್ತಿನಲ್ಲಿ ತೆಲೆ ಎತ್ತಿ ನಿಂತಿದೆ ಹಾಗೂ ಅಗ್ನಿಶಾಮಕಠಾಣೆ, ಶ್ರೀಸಿದ್ದಯ್ಯ ಹವಲ್ದಾರ ಸರಕಾರಿ ಪದವಿ ಪೂರ್ವಕಾಲೇಜು, ಬಿಸಿಎಂ ವಸತಿನಿಲಯ, ಸಮುದಾಯ ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗದವರಿಗೆ ವಸತಿ ಕಟ್ಟಡ ನಿರ್ಮಾಣಗೊಂಡಿದೆ.
ಇವೆಲ್ಲಕ್ಕೂ ಮುಕುಟವೆಂಬಂತೆ ಇದೀಗ ಬರುವ ಶೈಕ್ಷಣಿಕ ವರ್ಷದಿಂದ ಅಂದರೆ ೨೦೨೩-೨೪ ನೇ ಸಾಲಿನಿಂದ ಅರಕೇರಾದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯಿಂದ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲು ಅನುಮತಿ ನೀಡಿರುವದು ತಾಲೂಕಿನ ಸುತ್ತಮುತ್ತಲಿನ ಹಳ್ಳಿಯ ವಿದ್ಯಾರ್ಥಿಗಳಲ್ಲಿ ತುಂಬಾ ಸಂತೋಷವುಂಟುಮಾಡಿದೆ.
ಈಗಾಗಲೇ ಪಾಲಿಟೆಕ್ನಿಕ್ ಕಾಲೇಜಿಗೆ ಬೇಕಾದಂತಹ ಕಟ್ಟಡಗಳು ವಸತಿನಿಲಯ, ಸಿಸಿ.ರಸ್ತೆಗಳು ಅರಕೇರಾದಲ್ಲಿ ನಿರ್ಮಾಣಗೊಂಡಿವೆ. ಇದೇ ಶೈಕ್ಷಣಿಕ ವರ್ಷದಿಂದ ಪಾಲಿಟೆಕ್ನಿಕ್ ಕಾಲೇಜು ಆರಂಭ ಆಗುತ್ತಿರುವದು ಇದಕ್ಕೆಲ್ಲ ಶಾಸಕರ ಶೈಕ್ಷಣಿಕ ಕಾಳಜಿ ಕಾರಣವಾಗಿದೆ. ಇಂತಹ ಶಾಸಕರನ್ನು ಪಡೆದ ನಾವುಗಳು ಧನ್ಯರು ಎಂದು ಇಲ್ಲಿನ ನಾಗಕರಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇದಲ್ಲದೆ ಮುಂದಿನ ದಿನಮಾನದಲ್ಲಿ ಅರಕೇರಾಕ್ಕೆ ಪದವಿಪೂರ್ವಕಾಲೇಜು,ಸರಕಾರಿ ಆಯುರ್ವೇದಿಕ ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ಶಾಸಕರು ಪ್ರಯತ್ನನಡೆಸಿದ್ದಾರೆ ಇದರಿಂದ ಅರಕೇರಾದ ಸುತ್ತಮುತ್ತಲ್ಲಿನ ಬಡವಿದ್ಯಾರ್ಥಿಗಳಿಗೆ ಪದವಿವರೆಗಿನ ಶಿಕ್ಷಣವನ್ನು ಮುಗಿಸಲು ಯಾವುದೇ ತೊಂದರೆ ಆಗುವುದಿಲ್ಲ ಎಂದು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ತೀರಾ ಬಡತನ ಮತ್ತು ಅನಕ್ಷರತೆಯಿಂದ ಹೇಗಾದರೂ ಮಾಡಿ ಜನರನ್ನು ಹೊರಜನರನ್ನು ಹೊರತರಲು ಹಾಗೂ ಎಲ್ಲಾ ವಿದ್ಯಾರ್ಥಿಗಳು ಪದವಿವರೆಗಿನ ಶಿಕ್ಷಣವನ್ನು ಹೆಣ್ಣು ಮಕ್ಕಳು ಸಹಿತವಾಗಿ ಪಡೆಯುವಂತಹ ಕಾರ್ಯಕ್ರಮ ಮಾಡಲು ಶಾಸಕರು ಹಗಲಿರುಳು ಶ್ರಮಿಸುತ್ತಿದ್ದಾರೆ ಇವರ ಕಾರ್ಯ ಹಾಗೇಯೇ ಮುಂದುವರೆದಲ್ಲೇ ನಮ್ಮ ತಾಲೂಕಾ ಏಷ್ಯಾದಲ್ಲಿಯೇ ಅತ್ಯಂತ ಮುಂದುವರೆದ ಹಾಗೂ ಶೈಕ್ಷಣಿಕವಾಗಿ ಬಲಿಷ್ಠ ತಾಲೂಕಾ ಆಗುವದರಲ್ಲಿ ಯಾವುದೇ ಸಂದೇಹವಿಲ್ಲ.
ಶಿಕ್ಷಣ ಸರ್ವರಿಗೂ ಮಾಗದರ್ಶಿ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರತಿನಿತ್ಯ ಕಲಿಕೆಯ ವಿಚಾರಗಳು ಬದಲಾಗುತ್ತಾ ಹೋಗುತ್ತಿವೆ ಬದಲಾಗುತ್ತಿರುವ ಶಿಕ್ಷಣವನ್ನು ಶೈಕ್ಷಣಿಕ ಜ್ಞಾನವನ್ನು ಕಾಳಕ್ಕೆ ತಕ್ಕಂತೆ ಮಕ್ಕಳಿಗೆ ಪರಿಚಯಿಸಬೇಕಿದೆ. ಡಾ.ಎಚ್.ಎ.ನಾಡಗೌಡ ರಾಯಚೂರು ರಿಮ್ಸ್ ಆಡಳಿತ ಮಂಡಳಿಯ ಸದಸ್ಯರು ಅರಕೇರಾ ಕಾಲೇಜಿನಲ್ಲಿ ಕೇವಲ ಪುಸ್ತಕದಿಂದ ಜ್ಞಾನ ಪಡೆಯದೆ ಪ್ರಯೋಗಗಳ ಮೂಲಕ ಕಲಿಕೆ ಅನೂಕೂಲವಾಗಲಿದೆ.
ಇಂತಹ ಸೌಲಭ್ಯ ಅತ್ಯಂತ ಅವಶ್ಯಕ ಐತಿಹಾಸಿಕ ಯೋಜನೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಗಾಳಿ ಬೀಸಲಿದೆ ಅರಕೇರಾದಲ್ಲಿ ಪಾಲಿಟೆಕ್ನಿಕ್ ಕಾಲೇಜ್ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುತ್ತಿರುವುದು ಸಂತಸ ತಂದಿದೆ.
ಶ್ರೀನಿವಾಸನಾಯಕ ಎಸ್.ಗುರಿಕಾರ