ಶಿಕ್ಷಣ ಕ್ಕೆ ಪ್ರಥಮ ಆದ್ಯತೆ ಶಾಸಕ ಬಸನಗೌಡ ತುರ್ವಿಹಾಳ

ಸಿಂಧನೂರು.ನ.೧೫-ನಾನು ಶಾಸಕನಾಗಿ ಆಯ್ಕೆಯಾದ ನಂತರ ಮಸ್ಕಿ ವಿಧಾನ ಕ್ಷೇತ್ರದಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರಥಮ ಆದ್ಯತೆ ನೀಡಿದ್ದೇನೆ ಎಂದು ಮಸ್ಕಿ ವಿಧಾನ ಕ್ಷೇತ್ರದ ಶಾಸಕರಾದ ಆರ್ ಬಸನಗೌಡ ತುರ್ವಿಹಾಳ ಹೇಳಿದರು.
ಅವರು ಮಸ್ಕಿ ವಿಧಾನ ಸಭಾ ಕ್ಷೇತ್ರದ ೭ ನೇಯ ಮೈಲ್ ಕ್ಯಾಂಪನಲ್ಲಿರುವ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಕೊಠಡಿಯ ಭೂಮಿ ಪೂಜೆ ನೆರವೇರಿಸಿದ ಮಾತನಾಡಿದ ಅವರು ಗುಣಮಟ್ಟದ ಕಾಮಗಾರಿಯನ್ನು ಮಾಡುವಂತೆ ಸ್ಥಳದಲ್ಲಿದ್ದ ನಿರ್ಮಿತ ಕೇಂದ್ರದ ಅದಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ನೀವು ನನ್ನನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಕಡಿಮೆ ಸಮಯದಲ್ಲಿ ಸರ್ಕಾರದ ಯೋಜನೆಗಳನ್ನು ಸಾಧ್ಯ ವಾದ ಮಟ್ಟಿಗೆ ಮುಟ್ಟಿಸುವ ಪ್ರಮಾಣಿಕ ಪ್ರಯತ್ತ ಮಾಡುತ್ತಿದ್ದನೆ ಅದಕ್ಕಾಗಿ ನೀವೆಲ್ಲ ಸಹಕರಿಸಬೇಕು ಎಂದು ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು ಇಂದು ಮಾಜಿ ಪ್ರಧಾನ ಮಂತ್ರಿಗಳಾದ ಜವಾಹರಲಾಲ ನೆಹರು ಅವರ ಜನ್ಮ ದಿನಾಚರಣೆ ಅಂಗವಾಗಿ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸುತ್ತಿದ್ದು ನೆಹರು ಅವರ ಬಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಶಾಸಕರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಶಾಲಾ ಕೊಠಡಿಯ ಭೂಮಿ ಫೂಜೆಯನ್ನು ನೆರವೇರಿಸಿದ್ದು ನನ್ನ ಸೌಭಾಗ್ಯ ಎಂದರು.
ಸರ್ಕಾರ ಶಿಕ್ಷಣ ಕ್ಕಾಗಿ ಸಾಕಷ್ಟು ಸೌಭಾಗ್ಯಳನ್ನು ನೀಡುತ್ತಿದ್ದು ಅವುಗಳನ್ನು ಮಕ್ಕಳು ಸದುಪಯೋಗ ಪಡೆದುಕೊಂಡು ಸಮಾಜ ದಲ್ಲಿ ಮುಂದೆ ಬಂದು ಸ್ವಾಭಿಮಾನದ ಜೀವನ ನಡೆಸುವಂತೆ ಶಾಸಕರು ಮಕ್ಕಳಿಗೆ ಕಿವಿ ಮಾತು ಹೇಳಿದರು ಸರ್ಕಾರಿ ಶಾಲೆಗಳಲ್ಲಿ ಅತಿ ಹೆಚ್ಚು ಬಡ ಮಕ್ಕಳು ಅಭ್ಯಾಸ ಮಾಡುತ್ತಿದ್ದು ಮಕ್ಕಳಿಗೆ ಕೊಠಡಿಗಳ ತೊಂದರೆ ಯಾಗದಂತೆ ಹೆಚ್ಚುವರಿಯಾಗಿ ಕೊಠಡಿಯನ್ನು ಮಂಜೂರು ಮಾಡಿಸಿರವೆ ಎಂದರು.
ಕ್ಯಾಂಪ್‌ನ ಮುಖಂಡರಾದ ನಲ್ಲ ವೆಂಕಟೇಶ್ವರ ರಾವು ಕೃಷ್ಣ ಮೂರ್ತಿ ಬಜ್ಜಯ್ಯ ಅಪ್ಪರಾವು ರಾಮಬಾಬು ರಮೇಶ ಪ್ರಭಾರಿ ಬಿಇಒ ಬಸಲಿಂಗಪ್ಪ ಜವಳಗೇರಾ ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ ಕಲ್ಮಂಗಿ ಗ್ರಾಮ ಪಂಚಾಯಿತಿಯ ಫಿಡಿಒ ಪಂಪನಗೌಡ ನಿರ್ಮಿತ ಕೇಂದ್ರದ ಅಭಿಯಂತರಾದ ಪ್ರದೀಪ ಕುಮಾರ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಕ್ಯಾಂಪನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಇದೆ ಸಂದರ್ಭದಲ್ಲಿ ಕ್ಯಾಂಪು ಹಾಗೂ ಶಾಲೆಯ ವತಿಯಿಂದ ಶಾಸಕರಿಗೆ ಸನ್ಮಾನಿಸಿ ಗೌರವಿಸಲಾಯಿತು.