ಶಿಕ್ಷಣ ಒಂದು ಸಂಕಲ್ಪ ಮಾದರಿ ಕಾರ್ಯಕ್ರಮ:ಚವ್ಹಾಣ

ತಾಳಿಕೋಟೆ:ಅ.9: ನಮ್ಮ ದೇಶದ ನೆಚ್ಚಿನ ಪ್ರಧಾನ ನರೇಂದ್ರ ಮೋದಿಜಿ ಅವರ ಮಹತ್ವಾಕಾಂಕ್ಷೀ ಯೋಜನೆಯಾಗಿರುವ ಶಿಕ್ಷಣ ಒಂದು ಸಂಕಲ್ಪ ಮಾದರಿಯಾದಂತಹ ಕಾರ್ಯಕ್ರಮ ಇದಾಗಿದೆ ಇದರಿಂದ ಉತ್ತಮ ಶಿಕ್ಷಕರನ್ನು ಉತ್ತಮ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವಂತಹ ಒಳ್ಳೆಯ ಕೆಲಸವಾಗಲಿದೆ ಎಂದು ಶ್ರೀ ನಿಮಿಷಾಂಭಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಘನಶಾಮ ಚವ್ಹಾಣ ಅವರು ಹೇಳಿದರು.
ಪಟ್ಟಣದ ಬಾಪೂಜಿ ಕನ್ನಡ ಮತ್ತು ಆಂಗ್ಲ ಮಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಸ್ಟಿರೇಶನಲ್ ಬ್ಲಾಕ್ ಪ್ರೋಗ್ರಾಮ್ ಶಿಕ್ಷಣ ಒಂದು ಸಂಕಲ್ಪ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ಈ ಮೊದಲಿನಿಂದಲೂ ಬಾಪೂಜಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿವರ್ಷವೂ ಉತ್ತಮ ಶಿಕ್ಷಕರನ್ನು ಉತ್ತಮ ಮಕ್ಕಳನ್ನು ಆಯ್ಕೆಗೊಳಿಸಿ ಎಲ್ಲ ಮಕ್ಕಳಿಗೆ ಪ್ರೋತ್ಸಾಹಿಸುವಂತಹ ಕೆಲಸ ಮಾಡುತ್ತಾ ಬರಲಾಗಿತ್ತು ಆದರೆ ಸದ್ಯ 500ತಾಲೂಕುಗಳಲ್ಲಿ ಶಿಕ್ಷಣ ಒಂದು ಸಂಕಲ್ಪದಡಿ ಕಾರ್ಯಕ್ರಮವನ್ನು ಆಯೋಜಿಸಿ ಶಿಕ್ಷಕರಲ್ಲಿ ಜವಾಬ್ದಾರಿಯನ್ನು ಹೆಚ್ಚಿಸುವದರೊಂದಿಗೆ ಮಕ್ಕಳಿಗೆ ಶಿಕ್ಷಣದೆಡೆಗೆ ಪ್ರೋತ್ಸಾಹಿಸುವಂತಹ ಕಾರ್ಯ ನಡೆದಿರುವದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಮುಖ್ಯಗುರುಗಳಾದ ಎಸ್.ಸಿ.ಹಿರೇಮಠ ಪ್ರಾಸ್ಥಾವಿಕ ಮಾತನಾಡಿದರು.ಇದೇ ಸಮಯದಲ್ಲಿ ಉತ್ತಮ ಶಿಕ್ಷಕಿ ಎಂದು ಕುಮಾರಿ ಭಾವನಾ ಭೂಸಾರೆ ಅವರನ್ನು ಹಾಗೂ ಉತ್ತಮ ವಿಧ್ಯಾರ್ಥಿ ಎಂದು ಕು.ಸಂಜನಾ ಬಡಿಗೇರ, ರುಕ್ಕಯ್ಯ ಮಸಳಿ, ಅಕ್ಕಮಹಾದೇವಿ ಘಾಳಪೂಜಿ ಅವರನ್ನು ಆಯ್ಕೆ ಮಾಡಿ ಅವರಿಗೆ ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಒಂದು ಸಂಕಲ್ಪ ಕಾರ್ಯಕ್ರಮದ ನಿಮಿತ್ಯ ನಡೆಸಲಾದ ವಿವಿಧ ಸ್ಪರ್ದೆಯಲ್ಲಿ ವಿಜೇತರಾದ ಮಕ್ಕಳಿಗೆ ಭಹುಮಾನ ವಿತರಿಸಲಾಯಿತು.
ವೇದಿಕೆಯ ಮೇಲೆ ಶ್ರೀ ನಿಮಿಷಾಂಭಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸೀಮಾ ಚವ್ಹಾಣ, ಡಾ.ಎಪಿಜೆ ಆಯ್‍ಟಿಐ ಕಾಲೇಜ್ ಪ್ರಾಚಾರ್ಯ ಎಂ.ಸಿ.ಗಸ್ತಿ, ದೈಹಿಕ ಶಿಕ್ಷಕ ಚಿದಾನಂದ ಕಟ್ಟಿಮನಿ, ಶಿಕ್ಷಕಿಯರಾದ ಶ್ರೀಮತಿ ಹಸೀನಾ ಭಾಗವಾನ, ದಾನಮ್ಮ ಹೂಗಾರ, ಭೂವನೇಶ್ವರಿ ವಸ್ತ್ರದ, ಸುನಿತಾ ಸಜ್ಜನ, ಅವರು ಉಪಸ್ಥಿತರಿದ್ದರು.ಶಿಕ್ಷಕಿ ಶ್ರೀಮತಿ ಭುವನೇಶ್ವರಿ ವಸ್ತ್ರದ ಸ್ವಾಗತಿಸಿ ನಿರೂಪಿಸಿದರು.