ಶಿಕ್ಷಣ ಎಲ್ಲರಿಗೂ ಸಿಗುವಂತಾಗಬೇಕು:ಮಾನೆ

ಶಹಾಬಾದ,ನ.10-ನಗರದಲ್ಲಿ ಎಐಡಿಎಸ್‍ಓ ವಿದ್ಯಾರ್ಥಿ ಸಂಘಟನೆಯಿಂದ ಶಹಾಬಾದ ಸ್ಥಳೀಯ ಮಟ್ಟದ 7ನೇ ವಿದ್ಯಾರ್ಥಿ ಸಮ್ಮೇಳನ ನಡೆಸಲಾಯಿತು.
ಎಸ್‍ಯುಸಿಐ ಕಮುನಿಷ್ಟ ಪಕ್ಷದ ಶಹಾಬಾದ ಕಾರ್ಯದರ್ಶಿ ಗಣಪತ್ ರಾವ್ ಮಾನೆ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತ ಶಿಕ್ಷಣವು ಉಳ್ಳವರಿಗೆ ಮಾತ್ರ ದೊರೆಯುತ್ತಿದೆ. ಶಿಕ್ಷಣವು ಪ್ರತಿಯೊಬ್ಬರಿಗೂ ದೊರೆಯಬೇಕು ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಗಾಳಿ, ನೀರಿನಷ್ಟೇ ಸಹಜವಾಗಿ ಸಿಗಬೇಕು. ಕೇವಲ ಸರ್ಟಿಫಿಕೇಟ್ ಅಥವಾ ಅಂಕಗಳಿಗಾಗಿ ಶಿಕ್ಷಣ ಆಗಬಾರದು. “ಪ್ರಸ್ತುತ ಕಲುಷಿತ ಸಮಾಜದಲ್ಲಿ ಬದುಕುತ್ತಿರುವ ವಿದ್ಯಾರ್ಥಿಗಳ ಮುಗ್ಧ ಮನಸ್ಸುಗಳೂ ಸಹ ಕಲುಷಿತಗೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಪುನರುಜ್ಜೀವನ ಕಾಲದ ಚಿಂತಕರ, ಸ್ವಾತಂತ್ರ್ಯ ಹೋರಾಟಗಾರರ, ಕ್ರಾಂತಿಕಾರಿಗಳ ವಿಚಾರಗಳನ್ನು ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ಬಿತ್ತಿ, ಅನ್ಯಾಯದ ವಿರುದ್ಧದ ಹೋರಾಟದ ಸ್ಪೂರ್ತಿಯನ್ನು ತುಂಬುವ ಉದ್ದೇಶ ಶಿಕ್ಷಣದಾಗಬೇಕು . ಭಗತ್ ಸಿಂಗ್, ನೇತಾಜಿಯಂತಹ ಕ್ರಾಂತಿಕಾರಿಗಳು ಕಂಡ ಸ್ವಾತಂತ್ರ್ಯ ಭಾರತದ ಕನಸ್ಸು ನನಸಾಗಬೇಕಿದೆ. ಮಾನವನಿಂದ ಮಾನವನ ಮೇಲಿನ ಎಲ್ಲಾ ದೌರ್ಜನ್ಯಗಳನ್ನು ಮಟ್ಟಹಾಕಬೇಕಿದೆ. ಈ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಿದೆ” ಎಂದರು. ಎಂದು ಮಾತನಾಡಿದರು.
ಈ ಸಮ್ಮೇಳನವನ್ನು ಉದ್ದೇಶಿಸಿ, ಎಐಡಿಎಸ್‍ಓ ಸಂಘಟನೆಯ ಜಿಲ್ಲಾ ಆಧ್ಯಕ್ಷÀ ಹನುಮಂತ ಎಸ್.ಎಚ್ ರವರು ಮಾತನಾಡಿ, ಶಿಕ್ಷಣ ಕ್ಷೇತ್ರ ಮೇಲಿಂದ ಮೇಲೆ ದಾಳಿಯನ್ನು ಎದುರಿಸುತ್ತಿದೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ನೇತಾಜಿರವರ ಕನಸಾದ ವೈಜ್ಞಾನಿಕ-ಧರ್ಮನಿರಪೇಕ್ಷಕ ಹಾಗೂ ಪ್ರಜಾಸತ್ತಾತ್ಮಕ ಶಿಕ್ಷಣದ ಕನಸನ್ನು ಕನಸಾಗಿಯೇ ಉಳಿದಿದೆ. 70 ದಶಕಳಿಂದ ನಮ್ಮನ್ನಾಳಿದ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಸರ್ಕಾರಗಳು ಶಿಕ್ಷಣ ನೀಡುವ ತಮ್ಮ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿವಿ. ಬಿಜೆಪಿ ಸರ್ಕಾರ ಸಹ ಯಾವುದೇ ವ್ಯತ್ಯಾಸ ಇಲ್ಲದೆ ಮುಂದುವರೆಸಿದೆ. ‘ಅಚ್ಛೇ ದಿನ್’ ತರುವ ಭರವಸೆ ನೀಡಿದ ಮೋದಿ ಸರ್ಕಾರ, ಮೊದಲನೆ ಕೇಂದ್ರ ಬಜೆಟ್ ನಲ್ಲಿ ಶಿಕ್ಷಣಕ್ಕೆ ಶೇ 10 ರಷ್ಟು ಮೀಸಲಿಡಬೇಕಾಗಿತ್ತು. ಆದರೆ ಈಗ ಮೀಸಲಿಡುತ್ತಿರುವ ಒಟ್ಟಾರೆ ಹಣ ಶೇಕಡಾ 0.3 ಕ್ಕಿಂತಲೂ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ವಿದ್ಯಾರ್ಥಿ ವಿರೋದಿಯಾದ ಹೊಸ ಶಿಕ್ಷಣ ನೀತಿಯು(ಓಇP) ಜಾರಿಮಾಡುತ್ತಿದೆ, ಖಾಸಗಿ ಶಾಲೆಗಳು ತಮಗಿಷ್ಟ ಬಂದಂತೆ ಶುಲ್ಕವನ್ನು ನಿಗದಿಗೊಳಿಸಲು ಕಾನೂನಾತ್ಮಕವಾಗಿ ಮುಕ್ತ ಅವಕಾಶ ನೀಡುತ್ತಿದೆ.. ಈ ಹಿನ್ನಲೆಯಲ್ಲಿ ಮುಂಬರುವ ದಿನಗಳು ಬಡ-ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರಾಳ ದಿನಗಳಾಗಿ ಪರಿಣಮಿಸಲಿವೆ ಈ ಪರಿಸ್ಥಿತಿಯಲ್ಲಿ ವಿಧ್ಯಾರ್ಥಿ ಹೋರಾಟಗಳನ್ನು ಇನ್ನಷ್ಟು ಬಲಿಷ್ಠಗೊಳಿಸುವ ಅವಶ್ಯಕತೆ ನಮ್ಮ ಮುಂದಿದೆ. ಶಿಕ್ಷಣದ ಹಲವಾರು ಜ್ವಲಂತ ಸಮಸ್ಯೆಗಳಾದ ಶಿಕ್ಷಣ ವ್ಯಾಪಾರೀಕರಣ , ಸರ್ಕಾರಿ ಶಿಕ್ಷಣ ಸಂಸ್ಥೆಗಳು ಅಧೋಗತಿಗೆ ತಲುಪುತ್ತಿವೆ, ಇಂತಹ ಸಮಸ್ಯೆಗಳ ವಿರುದ್ಧ ಹೋರಾಟ ಬೆಳೆಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಈ ಸಮ್ಮೇಳನಕ್ಕ ಅತಿಥಿಗಳಾಗಿ ಆಗಮಿಸಿದ್ದ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರದ ಪ್ರಾದ್ಯಪಕ ಜಗನ್ನಾಥ ಆರ್ ಹೊಸಮನಿ. ಅವರು ಮಾತನಾಡುತ್ತ ಮಾಹನ್ ವ್ಯಕ್ತಿಗಳ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು. ಅನ್ಯಾಯದ ವಿರುದ್ದ ಧ್ವನಿ ಎತ್ತಬೇಕು. ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಐಡಿಎಸ್‍ಒ ಶಹಾಬಾದ ಅಧ್ಯಕ್ಷರಾದ ತುಳಜರಾಮ ಎನ್ ಕೆ ವಹಿಸಿದ್ದರು.
ನೂತನ ಸಮಿತಿಯ ರಚನೆ:
ಎ.ಐ.ಡಿ.ಎಸ್.ಓ.ಸ್ಥಳೀಯ ಸಮಿತಿ ರಚಿಸಲಾಗಿದ್ದು, ಅಧ್ಯಕ್ಷರಾಗಿ ಕಿರಣ್ ಜಿ ಮಾನೆ, ಉಪಾಧ್ಯಕ್ಷರಾಗಿ ಸುರೇಶ ವಾಸ್ಟರ್,ದೆವರಾಜ ಎಸ್ ಹೊನಗುಂಟ, ಕಾರ್ಯದರ್ಶಿಯಾಗಿ ಅಜಯ್ ಎ ಜಿ, ಕಛೇರಿ ಕಾರ್ಯದರ್ಶಿಯಾಗಿ ಸಾಕ್ಷಿ ಜಿ ಮಾನೆ, ಹಾಗೆಯೇ ಕಾರ್ಯಕಾರಣಿ ಸಮಿತಿಯಲ್ಲಿ ಸ್ಪೂರ್ತಿ ಆರ್ ಜಿ, ಬಾಬು ಪವಾರ್,ರಂಗನಾಥ ಮಾನೆ. ಕಾರ್ಯನಿರ್ವಾಹಕ ಸಮಿತಿಯಲ್ಲಿ ಸೆಂತೊಷಿ, ಪೂಜಾ, ಲಕ್ಷ್ಮಿ, ಶಿವನಂದ, ಸಿದ್ದು ಹೊನಗುಂಟ, ರಾಕೇಶ್, ಮೈಲಾರಿ,ಅರ್ಪಿತಾ ಮಾನೆ, ಚೇತನ್ ಮಾನೆ, ಯಲ್ಲಪ್ಪ, ಭೂಮಿಕಾ, ರೂಪ s,ಓಂಕಾರ , ಭಾಗ್ಯನಾಥ್, ಪಲ್ಲವಿ, ರೇಣುಕಾ ಮಾನೆ, ನಾಗರತ್ನ ಅವರನ್ನು ನೇಮಕ ಮಾಡಲಾಯಿತು.
ಬೇಡಿಕೆಗಳು:
ಎಲ್ಲಾ ಹಂತಗಳಲ್ಲಿ ಶುಲ್ಕ ಹೆಚ್ಚಳವನ್ನು ನಿಯಂತ್ರಿಸಿ ಹಾಗೂ ಡೋನೆಷನ್ ಕ್ಯಾಪಿಡೇಷನ್ ಹಾವಳಿಗೆ ಕಡಿವಾಣ ಹಾಕಬೇಕು, ಶಹಾಬಾದ ತಾಲೂಕಿನ ಶಾಲಾ,ಕಾಲೇಜು, ವಸತಿನಿಲಯಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮತ್ತು ಸರಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸಬೇಕು, ಶಹಾಬಾದನಲ್ಲಿ ಸರಕಾರಿ ಪದವಿ ಕಾಲೇಜನ್ನು ಸ್ಥಾಪಿಸಬೇಕು, ಸರಕಾರಿ ಮೆಟ್ರಿಕ್ ನಂತರ ಬಾಲಕರ ಹಾಗೂ ಬಾಲಕೀಯರ ವಸತಿ ನಿಲಯಗಳನ್ನು ಸ್ಥಾಪಿಸಬೇಕು, ಅಗತ್ಯವಿರುವ ಎಲ್ಲಾ ಶಾಲಾ/ಕಾಲೇಜ್‍ಗಳಲ್ಲಿ ಈ ಕೂಡಲೇ ಖಾಯಂ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಬೇಕು, ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಬಸ್ ಸೌಲಭ್ಯ ಕಲ್ಪಿಸಬೇಕು,ಸರಕಾರಿ ಶಾಲಾ/ಕಾಲೇಜು ಆವರಣದಲ್ಲಿ ಶೈಕ್ಷಣಿಕ ವಾತಾವರಣವನ್ನು ಕಾಪಡಲು ಇತರೆ ಯಾವುದೇ ಸರಕಾರಿ ಸರ್ವಾಜಿನಿಕ ಕಛೇರಿಯನ್ನು ಸ್ಥಾಪಿಸಬಾರದು ಹಾಗೂ ಶಾಲಾ/ಕಾಲೇಜುಗಳಿಗೆ ಭದ್ರತೆಯನ್ನು ಒದಗಿಸಬೇಕು, ಶಾಹಾಬದನಲ್ಲಿರುವ ಸಾರ್ವಜನಿಕ ಗ್ರಂಥಾಲಯವನ್ನು ಮೇಲ್ದರ್ಜೆಗೆರಿಸಿ ಹಾಗೂ ನಗರದ ಮುಖ್ಯ ಜಾಗದಲ್ಲಿ ಹೊಸ ಕಟ್ಟಡ ನಿರ್ಮಿಸಬೇಕು,ಸಂಕಷ್ಟದ ಶೈಕ್ಷಣಿಕ ಸಂದರ್ಭದಲ್ಲಿ ಎನ್‍ಇಪಿ-2020 ದಿಢೀರ ಹೇರಿಕೆಯನ್ನು ನಿಲ್ಲಿಸಬೇಕು, ಎನ್‍ಇಪಿ -2020 ರಿಂದ ಉಂಟಾಗಿರುವ ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಬೇಕು, ವಿದ್ಯಾರ್ಥಿನಿಯರಿಗೆ ಭದ್ರತೆಯನ್ನು ಖಾತ್ರಿಪಡಿಸಬೇಕು ಎಂದು ಸಮ್ಮೇಳನದ ಮೂಲಕ ಸರ್ಕಾರವನ್ನು ಆಗ್ರಹಿಸಲಾಯಿತು.
ಎ.ಐ.ಡಿ.ಎಸ್.ಓ ಶಹಾಬಾದ ಸ್ಥಳೀಯ ಸಮಿತಿ ಅಧ್ಯಕ್ಷ ಕಿರಣ್ ಜಿ.ಮಾನೆ, ಕಾರ್ಯದರ್ಶಿ ಅಜಯ್ ಎ.ಜಿ. ಸೇರಿದಂತೆ ಮತ್ತಿತರರು ಇದ್ದರು.