ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ರಾಯಚೂರು,ನ.೧೬- ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯು ಮದ್ಯ ವಾರ್ಷಿಕ ಪರೀಕ್ಷೆಯನ್ನು ರಾಜ್ಯ ಬೋರ್ಡ್ ಪರೀಕ್ಷೆಯಾಗಿ ನಡೆಸುವ ನಿರ್ಧಾರ ಕೂಡಲೇ ಹಿಂಪಡಿಯಬೇಕು ಎಂದು ಅಲ್ ಇಂಡಿಯಾ ಡೆಮಾಕ್ರೆಟಿಕ್ಸ್ಟ್ ಡೆಂಟ್ಸ್ ಅರ್ಗನೈಜೆಷನ್ ಮುಖಂಡರು ನಗರದ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ಪ್ರತಿಭಟನೆ ನಡೆಸಿದರು.
ಸರಕಾರ ಯಾವುದೇ ಮುನ್ಸೂಚನೆ ಇಲ್ಲದೇ ಏಕಾಏಕಿ ಪೂರ್ವ ತಯಾರಿ ಇಲ್ಲದೇ ಪರೀಕ್ಷೆಯೊಂದನ್ನು ಎದುರಿಸಲು ಸಿದ್ಧರಾಗಬೇಕು ಎಂದು ರಾಜ್ಯ ಸರ್ಕಾರ ಹೋರಾಡಿಸಿರುವ ಈ ನಡೆ ಖಂಡನೀಯ.
ಯಥಾಪ್ರಕಾರದಂತೆ ಮದ್ಯ ವಾರ್ಷಿಕ ಪರೀಕ್ಷೆಯನ್ನು ಕಾಲೇಜ್ ಮಟ್ಟದಲ್ಲಿ, ವೀಕೆಂದ್ರಿಕೃತವಾಗಿ ನಡೆಸಬೇಕು. ಇದರ ಮೌಲ್ಯಮಾಪನ ಅಂತಿಮ ಪರೀಕ್ಷೆ ಒಳಪಡುವುದು ಬೇಡ. ಶೈಕ್ಷಣಿಕ ವೇಳಾಪಟ್ಟಿಯನ್ನು ವಿಸ್ತರಿಸಿ, ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗಳನ್ನು ಜೂನ್ ತಿಂಗಳಗಳಿಗೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಹೇಶ್ ಚಿಕಳಪರ್ವಿ,ಪಿರಸಾಬ್,
ಕಾರ್ತಿಕ್, ಬಸವರಾಜ್, ವಿರೇಶ್, ವಿಶ್ವಾಸ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.