ಶಿಕ್ಷಣ ಇಲಾಖೆ ಸಿಬ್ಬಂದಿಗಳಿಗೆ ಕೋವಿಡ್ ತಪಾಸಣೆ

ಭಾಲ್ಕಿ:ನ.8: ಕೋವಿಡ್ 19 ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬಾರದೇ ಇದ್ದ ಸಂದರ್ಭದಲ್ಲಿ, ಶಿಕ್ಷಣ ಇಲಾಖೆಯ ಸಿಬ್ಬಂದಿಯವರ ಆರೋಗ್ಯ ತಪಾಸಣೆ ನಡೆಸಿ, ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಚಟುವಟಿಕೆ ನಡೆಸುವುದು ಅತ್ಯವಶ್ಯಕವಾಗಿದೆ ಎಂದು ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಶಕುಂತಲಾ ಸಾಲಮನಿ ಅಭಿಪ್ರಾಯಪಟ್ಟರು.

ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ, ಶಿಕ್ಷಣ ಇಲಾಖೆಯ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ, ಇಸಿಓ, ಬಿಆರ್‍ಪಿ, ಸಿಆರ್‍ಪಿಗಳನ್ನೊಳಗೊಂಡಂತೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಎಲ್ಲಾ ಸಿಬ್ಬಂದಿವರ್ಗದವರಿಗೆ ನಡೆಸಿದ ಕೋವಿಡ್-19 ತಪಾಸಣಾ ಸಂದರ್ಭದಲ್ಲಿ ಅವರು ಮಾತನಾಡಿದರು. ಶಿಕ್ಷಣ ಇಲಾಖೆಯ ಸುಮಾರು 38 ಸಿಬ್ಬಂದಿಗಳಿಗೆ ಕೋವಿಡ್ 19 ತಪಾಸಣೆ ನಡೆಸಲಾಗಿದ್ದು, ಯಾರಿಗೂ ಕೊರೋನಾ ರೋಗ ಲಕ್ಷಣಗಳಿಲ್ಲ. ಒಂದುವೇಳೆ ಕೋವಿಡ್ ಪೊಜಿಟಿವ್ ಬಂದರೆ ಅಂತಹ ಸಿಬ್ಬಂದಿಯವರಿಗೆ ಹೊರಗಿಟ್ಟು ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮನೋಹರ ಹೊಳಕರ ಮಾತನಾಡಿ, ಶಿಕ್ಷಣ ಇಲಾಖೆಯ ಸಿಬ್ಬಂದಿಗಳು ಮತ್ತು ಶಿಕ್ಷಕರು ಆರೋಗ್ಯವಾಗಿದ್ದರೆ, ಶಿಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳೊಂದಿಗೆ ಉತ್ತಮವಾಗಿ ಪಾಠಮಾಡಲು ಸಾಧ್ಯ. ಹೀಗಾಗಿ ಶಿಕ್ಷಣ ಇಲಾಖೆಯ ಎಲ್ಲಾ ಸಿಬ್ಬಂದಿಯವರಿಗೆ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿ ಕೋವಿಡ್ 19 ತಪಾಸಣೆ ನಡೆಸಿ, ಶಾಲಾ ಅವಧಿಗಳನ್ನು ಪ್ರಾರಂಭಿಸಲು ತಯ್ಯಾರಿ ನಡೆಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಸಿಓ ಸಹದೇವ.ಜಿ, ಜಯರಾಮ ಬಿರಾದಾರ, ಬಿಆರ್‍ಪಿ ದತ್ತು ಮುದಾಳೆ, ಸಂಬಣ್ಣಾ, ಬಸವರಾಜ ಮಾಳಗೆ, ಶಾಂತಾ ಮೋರೆ ಉಪಸ್ಥಿತರಿದ್ದರು.