ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿ ನಿರ್ದೇಶಕರನ್ನು ಭೇಟಿ ನೀಡಿ ಚರ್ಚಿಸಿದ ಡಾ.ತಳವಾರ ಸಾಬಣ್ಣಾ

ಕಲಬುರ್ಗಿ,ನ,04: ಸೇಡಂ ತಾಲೂಕಿನ ಮುಧೋಳ ಹತ್ತಿರದ ಗುಂಡೆಪಲ್ಲಿ ಗ್ರಾಮದಲ್ಲಿರುವ ಸರಕಾರಿ ವಸತಿಯುಕ್ತ ಮಾದರಿ ಪ್ರಥಮ ದರ್ಜೆ ಕಾಲೇಜನ್ನು ಪ್ರಾರಂಭಿಸುವ ಸಲುವಾಗಿ ಮಾನ್ಯ ವಿಧಾನ ಪರಿಷತ್ತಿನ ಸದಸ್ಯರಾದ ಡಾ. ತಳವಾರ ಸಾಬಣ್ಣಾ ಅವರು ಕಲಬುರಗಿಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ಚರ್ಚಿಸಿದರು. ಪ್ರಾಂಶುಪಾಲರೊಂದಿಗೆ ಗುಂಡೆಪಲ್ಲಿ ಕಾಲೇಜನ್ನು ವೀಕ್ಷಿಸಿರುವ ವಿಷಯವನ್ನು
ತಿಳಿದರು. ಗುಂಡೆಪಲ್ಲಿ ಗ್ರಾಮದಲ್ಲಿ ಸರ್ಕಾರವು 8.3 ಎಕರೆ ಜಮೀನಿನಲ್ಲಿ ಸುಮಾರು 24 ಕೋಟಿ ವೆಚ್ಚದಲ್ಲಿ&ಟಿbsಠಿ;&ಟಿbsಠಿ; ಸುಸಜ್ಜಿತವಾದ 14 ತರಗತಿ ಕೊಠಡಿಗಳು ಹಾಗೂ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗಾಗಿ ಸುಸಜ್ಜಿತ ಪ್ರತ್ಯೇಕ ಹಾಸ್ಟೆಲ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ವಿಜ್ಞಾನ ಪ್ರಯೋಗಾಲಯಗಳು, ಗ್ರಂಥಾಲಯ, ವಿಶಾಲವಾದ ಸಭಾಂಗಣ ಮತ್ತು ಆಟದ ಮೈದಾನ ನಿರ್ಮಾಣವಾಗಿ&ಟಿbsಠಿ; ಪದವಿ ಕೋರ್ಸುಗಳು ಓದಲು ಈ ಭಾಗದ ಮಕ್ಕಳಿಗೆ ಕಾಲೇಜು ಕಟ್ಟಡ ಸಿದ್ಧವಾಗಿದೆ.

ಪ್ರಾಂಶುಪಾಲರು ಸಂಯೋಜನೆ (ಂಜಿಜಿiಟiಚಿಣioಟಿ) ಪಡೆಯಲು ಕಾಲೇಜು ಶಿಕ್ಷಣ ಇಲಾಖೆಗೆ ಮತ್ತು ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಎಲ್.ಐ.ಸಿ. ಕಮಿಟಿಯು ವರದಿಯನ್ನು ಸಲ್ಲಿಸಿರುತ್ತಾರೆ ಆದರೂ ಸಹ ಸಂಯೋಜನೆ ಆಗಿರುವುದಿಲ್ಲ ಎಂಬ ವಿಷಯವನ್ನು ಪ್ರಸ್ತಾಪಿಸಿದರು. ಎಲ್ಲ ಮೂಲಭೂತ ಸೌಲಭ್ಯವಿರುವ&ಟಿbsಠಿ; ಈ ಕಾಲೇಜಿಗೆ ಸಂಯೋಜನೆ ನೀಡದಿರುವುದು ಗಡಿ ಭಾಗದ ಬಡ ಹಿಂದುಳಿದ ಗ್ರಾಮೀಣ ಕೂಲಿ ಕಾರ್ಮಿಕರ ಮಕ್ಕಳು ಪದವಿ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿದೆ. ಆದಕಾರಣ, ಅದಷ್ಟು ಶೀಘ್ರದಲ್ಲಿ ಈ ಕಾಲೇಜನ್ನು
2022-23 ಸಾಲಿನಿಂದ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಜಂಟಿ ನಿರ್ದೇಶಕರನ್ನು ಒತ್ತಾಯಿಸಿದರು.

ಕಲಬುರಗಿ ವಿಭಾಗದಲ್ಲಿರುವ ಹಲವು ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಭೇಟಿ ನೀಡಿದಾಗ ವಿದ್ಯಾರ್ಥಿಗಳಿಗೆ ಬಸ್ಸಿನ ಕೊರತೆಯಿಂದ ತರಗತಿಗಳಿಗೆ
ಹಾಜರಾಗುವುದು ಕಷ್ಟವಾಗುತ್ತಿದೆ. ಬಸ್ ಕೊರತೆಯಿಂದ ಮಧ್ಯಾಹ್ನದ ನಂತರ ತರಗತಿಗಳನ್ನು ವಿದ್ಯಾರ್ಥಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಕಲಿಯುವ ಆಸಕ್ತಿ ಇದ್ದರೂ ಸಹ ಬಸ್ಸಿನ ಸೌಲಭ್ಯವಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ,&ಟಿbsಠಿ; ಸಾರಿಗೆ ಇಲಾಖೆಯ ಅಧಿಕಾರಿಗಳ ಸಹಕಾರ ಪಡೆದು ವಿದ್ಯಾರ್ಥಿಗಳ ಬಸ್ಸಿನ ಕೊರತೆಯ ಸಮಸ್ಯೆಯನ್ನು ಬಗೆಹರಿಸಬೇಕೆಂದು ಜಂಟಿ ನಿರ್ದೇಶಕರನ್ನು ವಿಧಾನ ಪರಿಷತ್ತಿನ ಸದಸ್ಯರಾದ ಮಾನ್ಯ ಡಾ. ತಳವಾರ ಸಾಬಣ್ಣಾ ಅವರು ಒತ್ತಾಯಿಸಿದರು.