ಶಿಕ್ಷಣ ಇಲಾಖೆ ಅವೈಜ್ಞಾನಿಕ ನಿರ್ಧಾರ: ಪುನರ್ ಪರಿಶೀಲನೆಗೆ ನಮೋಶಿ ಆಗ್ರಹ

ಕಲಬುರಗಿ,ಮಾ.29-ಇತ್ತೀಚೆಗೆ ಪರೀಕ್ಷ ಮಂಡಳಿ ಅಧ್ಯಕ್ಷರು ಆದೇಶ ಹೊರಡಿಸಿ 5, 8 ಹಾಗೂ 9ನೇ ತರಗತಿಯ ಪರೀಕ್ಷೆಯ ಮೌಲ್ಯಮಾಪವನ್ನು 31.03.2024 ಮತ್ತು 2.04.2024 ರೊಳಗೆ ಮುಗಿಸಬೇಕೆಂಬ ಆದೇಶಿಸಿದ್ದಾರೆ. 8ನೇ ತರಗತಿಯ ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ ದಿನಕ್ಕೆ 60 ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಬೇಕೆಂದು ಮತ್ತು 9ನೇ ತರಗತಿ ಮೌಲ್ಯಮಾಪನ ಮಾಡುವ ಶಿಕ್ಷಕರಿಗೆ 40 ಉತ್ತರ ಪತ್ರಿಕೆ
ಮೌಲ್ಯಮಾಪನ ಮಾಡಬೇಕೆಂದು ನಿರ್ದೇಶನ ನೀಡಲಾಗಿದೆಂದು ಗೊತ್ತಾಗಿದೆ. ಹಾಗೇನಾದರೂ ಆದ ಪಕ್ಷದಲ್ಲಿ ಶಿಕ್ಷಕರು ಯಾವುದೇ ಕಾರಣಕ್ಕೆ ಪ್ರತಿ ದಿನಕ್ಕೆ 60 ಅಥವಾ 40 ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಲು ಸಾಧ್ಯವಿರುವುದಿಲ್ಲ. ಈಗಾಗಲೇ ಎಸ್.ಎಸ್.ಎಲ್.ಸಿ. ಪರೀಕ್ಷೆ ಮೌಲ್ಯಮಾಪನ ಕೇಂದ್ರದಲ್ಲಿ ವೈಜ್ಞಾನಿಕವಾಗಿ ದಿನಕ್ಕೆ 20 ಉತ್ತರ ಪತ್ರಿಕೆ ಮಾತ್ರ ಮೌಲ್ಯಮಾಪನ ಮಾಡಲು ಸಾಧ್ಯವಿದೆ. ಇದರಂತೆ 6 ರಿಂದ 8 ಗಂಟೆ ಅವಧಿಯಲ್ಲಿ 20 ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿ ಪರೀಕ್ಷೆಯನ್ನು ಪೂರ್ಣಗೊಳಿಸಲು ಅನುಕೂಲವಾಗುತ್ತದೆ. ಆದರೆ ಒಬ್ಬ ಶಿಕ್ಷಕ/ ಉಪನ್ಯಾಸಕ ದಿನಕ್ಕೆ 60 ಅಥವ 40 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಲು ಸಾಧ್ಯವಿಲ್ಲ.ಮಾ.28 ರ ಸಂಜೆಯ ಒಳಗೆ 8 ಮತ್ತು 9ನೇ ತರಗತಿಗೆ ಮೌಲ್ಯಮಾಪನ ವ್ಯವಸ್ಥೆಯಲ್ಲಿ ಉತ್ತರ ಪತ್ರಿಕೆಯಗಳ ಸಂಖ್ಯೆಯನ್ನು ಕನಿಷ್ಠ 8ನೇ ತರಗತಿಗೆ 30 ಉತ್ತರ ಪತ್ರಿಕೆಗಳು, 9ನೇ ತರಗತ್ತಿಗೆ 25 ಉತ್ತರ ಪತ್ರಿಕೆಗಳನ್ನು ನಿಗಧಿ ಮಾಡಲು ನಿರ್ಧಾರ ತೆಗೆದುಕೊಳ್ಳದೇ ಇದ್ದರೆ, ಮಾ.30 ರಂದು ಬೆಳಿಗ್ಗೆ 10 ಗಂಟೆಗೆ ಪರೀಕ್ಷೆ ಮಂಡಳಿ ಅಧ್ಯಕ್ಷರ ಕಛೇರಿ, ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಹಾಗೂ ಆಯುಕ್ತರ ಕಛೇರಿಯ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ ಜಿ.ನಮೋಶಿ ತಿಳಿಸಿದ್ದಾರೆ.
ಇತ್ತೀಚೆಗೆ ಶಿಕ್ಷಣ ಇಲಾಖೆಯಲ್ಲಿ ಅವೈಜ್ಞಾನಿಕವಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದರಿಂದ ಶಿಕ್ಷಕರು ಕೆಲಸ ಮಾಡವ ಮಾನಸಿಕ ಸ್ಥಿತಿ ಕಳೆದುಕೊಳ್ಳುತ್ತಿದ್ದಾರೆ ಸರ್ಕಾರದ ಅವೈಜ್ಞಾನಿಕ ನಿರ್ಧಾರ ಖಂಡಿನೀಯವಾಗಿದ್ದು, ಈ ನಿರ್ಧಾರಗಳನ್ನು ಪುನರ್ ಪರಿಶೀಲನೆ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.