ಶಿಕ್ಷಣದ ಸುತ್ತ “ಕ್ಲಿಕ್’ ಸದ್ದಿಲ್ಲದೆ ಚಿತ್ರೀಕರಣ ಪೂರ್ಣ

ಮುಂಚೂಣಿ ಸಂಗೀತ ನಿರ್ದೇಶಕ ರವಿ ಬಸ್ರೂರ್ ಪುತ್ರ ಮಾಸ್ಟರ್ ಪವನ್ ಬಸ್ರೂರು “ಕ್ಲಿಕ್” ಚಿತ್ರದ ಮೂಲಕ ಪೂರ್ಣಪ್ರಮಾಣದಲ್ಲಿ ಚಂದನವನಕ್ಕೆ ಕಾಲಿಟ್ಟಿದ್ದಾರೆ. “ಗಿರ್ಮಿಟ್” ಚಿತ್ರದಲ್ಲಿ ಸಣ್ಣ ಪಾತ್ರ ನಿರ್ವಹಿಸಿದ್ದ ಪವನ್, “ಕ್ಲಿಕ್” ಚಿತ್ರದ ಪ್ರಮುಖ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.

ಐಟಿ ಉದ್ಯೋಗಿ ಶಶಿಕಿರಣ್ ನಿರ್ಮಾಣ ಮಾಡಿದ್ದಾರೆ. ಪವನ್ ಜೊತೆ ಮತ್ತೊಬ್ಬ ಯುವನಟ ಕಾರ್ತಿಕ್ ಕೂಡ ನಟಿಸಿದ್ದಾರೆ. ಉಳಿದಂತೆ ಚಂದ್ರಕಲಾ ಮೋಹನ್, ರಚನಾ ದಶರತ್, ಸಂಜು ಬಸಯ್ಯ, ಸಿಲ್ಲಿಲಲ್ಲಿ ಆನಂದ್, ಸುಮನಾ ಶಶಿ ಸೇರಿ ಹಲವರಿದ್ದಾರೆ.

ಹೆಚ್ಚಿನ ಪಾಲು ಪೆÇೀಷಕರು ಮಕ್ಕಳು ಡಾಕ್ಟರ್ ಇಂಜಿನಿಯರ್ ಆಗಬೇಕು ಎಂದು ಬಯಸುತ್ತಾರೆ. ಆದರೆ ಈ ಎರಡು ವಲಯದ ಹೊರತಾಗಿ ತುಂಬಾ ಆಯ್ಕೆಗಳಿವೆ. ಮಕ್ಕಳ ಇಚ್ಛೆಗೆ ತಕ್ಕಂತೆ ಓದಲು, ಆಯ್ಕೆ ಮಾಡಲು ಬಿಡಬೇಕು ಎಂಬ ಶಿಕ್ಷಣದ ಕಥೆ ಸುತ್ತ “ಕ್ಲಿಕ್” ಚಿತ್ರ ಸಾಗುತ್ತದೆ ಎಂದು ಶಶಿಕುಮಾರ್ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದು ಸದ್ಯದಲ್ಲಿಯೇ ಚಿತ್ರ ತೆರೆಗೆ ಬರಲಿದೆ.

ನಿರ್ಮಾಪಕ ಶಶಿ ಕಿರಣ್ ಪ್ರತಿಕ್ರಿಯೆ ನೀಡಿ,ರವಿ ಬಸ್ರೂರು ಅವರಿಗೆ ಕಥೆ ಹೇಳಲು ಹೋಗಿದ್ದೆ. ಒನ್ ಲೈನ್ ಕೇಳಿದ್ರು. ಪವನ್ ಜತೆಯೂ ಮಾತನಾಡಿದ್ವಿ. “ನನ್ ಮಗ ಅಂತ ತಗೋಬೇಡಿ… ಆಡಿಷನ್ ಮಾಡಿ ಸೆಲೆಕ್ಟ್ ಮಾಡಿ” ಅಂತ ಹೇಳಿದ್ದರು. ನಂತರ ವರ್ಕ್ ಶಾಪ್ ಕೂಡಾ ಮಾಡಿದೆವು. ಸಿನಿಮಾಕ್ಕೆ ಬೇಕಾದ ಎಲ್ಲವನ್ನೂ ಒದಗಿಸಿ ಗುಣಮಟ್ಟದ ಚಿತ್ರ ಮಾಡಿದ್ದೇವೆ ಎಂದಿದ್ದಾರೆ.

ಬೆಂಗಳೂರು, ಬಿಡದಿ ರಾಮನಗರ ಕುಂದಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಕ್ಲಿಕ್ ಸಿನಿಮಾಗೆ ಆಕಾಶ್ ಪರ್ವ-ವಿಶ್ವಾಸ್ ಕೌಶಿಕ್ ಸಂಗೀತ ಜೀವನ್ ಗೌಡ ಛಾಯಾಗ್ರಹಣ, ವಿನಯ್ ಕುಮಾರ್ ಸಂಕಲನವಿದೆ.