ಶಿಕ್ಷಣದ ಸವಾಲುಗಳು ಕುರಿತು ವಿಚಾರ ಸಂಕಿರಣ

ಹರಪನಹಳ್ಳಿ.ಸೆ.೨೦; ಪಟ್ಟಣದ ಟಿ.ಎಂ.ಎ.ಇ.ಸAಸ್ಥೆ ಶಿಕ್ಷಣ ಮಹಾವಿದ್ಯಾಲಯ, ರಾಜ್ಯ ಅನುದಾನಿತ ಬಿ.ಇಡಿ.ಕಾಲೇಜುಗಳ ಅಧ್ಯಾಪಕರ ಸಂಘ, ಬಳ್ಳಾರಿ ಸಾರ್ವಜನಿಕ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ ಸಹಯೋಗದಲ್ಲಿ £ ವೆಬಿನಾರ್ನಲ್ಲಿ ಒಂದು ದಿನದ ರಾಷ್ಟçಮಟ್ಟದ ವಿಚಾರ ಸಂಕಿರಣ ನಡೆಯಿತು. ರಾಷ್ಟಿçÃಯ ಶಿಕ್ಷಣ ನೀತಿ-೨೦೨೦ರ ಶಾಲಾ ಶಿಕ್ಷಣ ಮತ್ತು ಶಿಕ್ಷಕರ ಶಿಕ್ಷಣದ ಸವಾಲುಗಳು ಮತ್ತು ಸಮಸ್ಯೆಗಳು ವಿಷಯ ಕುರಿತು ವಿವಿಧ ಸಂಪನ್ಮೂಲ ವ್ಯಕ್ತಿಗಳು ಆನ್ಲೆöÊನ್ನಲ್ಲಿ ಪ್ರಬಂಧ ಮಂಡಿಸಿದರು. ಶಾಲಾ ಶಿಕ್ಷಣ, ಸವಾಲುಗಳು ಮತ್ತು ಸಮಸ್ಯೆಗಳು ವಿಷಯ ಕುರಿತು ಮೈಸೂರು ಎನ್ಸಿಇಆರ್ಟಿ ಆರ್‌ಐಇ ವಿಭಾಗದ ಸಂಪನ್ಮೂಲ ವ್ಯಕ್ತಿ ಡಾ.ಟಿ.ವಿ.ಸೋಮಶೇಖರ, ಶಿಕ್ಷಕರ ಶಿಕ್ಷಣದ ಸವಾಲುಗಳು ಮತ್ತು ಸಮಸ್ಯೆಗಳು ಕುರಿತು ಮೈಸೂರು ಆರ್‌ಐಇ ವಿಭಾಗದ ಸಂಪನ್ಮೂಲ ವ್ಯಕ್ತಿ ಡಾ.ಸುಜಾತ ಬಿ.ಹಂಚಿನಾಳ್ ಪ್ರಬಂಧ ಮಂಡಿಸಿದರು. ಉದ್ಘಾಟನೆ ಮಾಡಿದ ಬಳ್ಳಾರಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ರಾಮಪ್ಪ ಮಾತನಾಡಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ರಾಷ್ಟಿçÃಯ ಶಿಕ್ಷಣ ನೀತಿ ಸಹಕಾರಿ ಆಗಲಿದೆ ಎಂದು ಶಿಕ್ಷಣದ ನೀತಿಯನ್ನು ಶ್ಲಾಘಿಸಿದರು.
ಪಂಜಾಬ್, ಮದ್ಯಪ್ರದೇಶ, ಓಡಿಸ್ಸಾ, ಹಿಮಾಚಲ ಪ್ರದೇಶ, ಚಂಡೀಗಡ, ದೆಹಲಿ ಸೇರಿದಂತೆ ದೇಶದ ವಿವಿಧ ರಾಜ್ಯದ ೧೫೦೦ಕ್ಕೂ ಹೆಚ್ಚು ಜನರು ಗೂಗಲ್ಮೀಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತೆಗ್ಗಿನಮಠ ಸಂಸ್ಥಾನದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಟಿ.ಎಂ.ಚAದ್ರಶೇಖರಯ್ಯ, ಅಧ್ಯಾಪಕರ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ರಮೇಶ್, ಪ್ರಾಚಾರ್ಯ ಟಿ.ಎಂ.ರಾಜಶೇಖರ, ಡಾಯೋಗೀಶ, ಡಾ.ಸುಧಾ, ಜಗದೀಶ ಗೌಡ ಪಾಟೀಲ್, ಕೆ.ದಾಕ್ಷಾಯಿಣಿ, ಟಿ.ವಂದನಾ ಅವರೂ ಉಪಸ್ಥಿತರಿದ್ದರು.