ಶಿಕ್ಷಣದ ಶಕ್ಶಿಕ್ಷಣದ ಶಕ್ತಿ ಜಗತ್ತನ್ನೇ ಗೆಲ್ಲುತ್ತದೆ.. ತಿ ಜಗತ್ತನ್ನೇ ಗೆಲ್ಲುತ್ತದೆ.

ಸಿರಿಗೇರಿ:ಜ,05 ಇಲ್ಲಿನ ಶಿಕ್ಷಣ ಪ್ರೇಮಿ ಸಂಘದ ವತಿಯಿಂದ ಕ್ವಿಜ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜಯಗಳಿಸಿದವರಿಗೆ ಸನ್ಮಾನ ಹಾಗೂ ಗ್ರಂಥಾಲಯಕ್ಕೆ ಉಚಿತವಾಗಿ ಪುಸ್ತಕಗಳನ್ನು ನೀಡುವ ಕಾರ್ಯಕ್ರಮವನ್ನು ಗ್ರಾಪಂ ಸಮುದಾಯ ಭವನದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂಧರ್ಭದಲ್ಲಿ ಮಾತನಾಡಿದ ಯುವ ಮುಖಂಡ ಧರಪ್ಪ ನಾಯ್ಕ ಹಾಗೂ ರೈತ ಮುಖಂಡ ಎಸ್.ಎಂ.ಅಡಿವೆಯ್ಯಸ್ವಾಮಿ ನೇಗಿಲು ಹಿಡಿದ ಕೈ ಅನ್ನ ನೀಡಿದರೆ, ಶಿಕ್ಷಣದ ಶಕ್ತಿ ಜಗತ್ತನ್ನೇ ಗೆಲ್ಲಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಸಹ ಶಿಕ್ಷಣಕ್ಕೆ ಒತ್ತು ನೀಡಬೇಕು. ಇದರ ಜೊತೆಯಲ್ಲಿ ಪುಸ್ತಕವನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂದು ತಿಳಿಸಿದರು. ತದ ನಂತರ ಬಾಲಕರ ಪ್ರೌಢ ಶಾಲಾ ಮುಖ್ಯಗುರು ಈರಪ್ಪ ಹಾಗೂ ಶಿಕ್ಷಕ ಮಹದೇವಪ್ಪ ಮಾತನಾಡಿದರು. ತದ ನಂತರ ಕ್ವಿಜ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಜಯಗಳಿಸಿದ ನವೀನ್ ಹಾಗೂ ನಾಗರಾಜ ಮತ್ತು ದ್ವಿತೀಯವಾಗಿ ಜಯ ಗಳಿಸಿದ ಚೈತ್ರ ಎಂಬುವರನ್ನು ಕಾರ್ಯಕ್ರಮದ ಆಯೋಜಕ ನ್ಯಾಯವಾದಿ ರಾಂಬಾಬು ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಸಭೆಯಲ್ಲಿ ನರೇಗಾ ಅಧಿಕಾರಿ ನಿರ್ಮಲ, ಗ್ರಾಪಂ ಪಿಡಿಓ ರಾಜೇಶ್ವರಿ, ರಾರಾವಿ ವೆಂಕಟೇಶ, ಪವಾಡಿನಾಯ್ಕ ಸೇರಿದಂತೆ ಪುಸ್ತಕ ದಾನಿಗಳು ಸಂಘ ಸಂಸ್ಥೆಯ ಮುಖಂಡರು ಉಪಸ್ಥಿತರಿದ್ದರು.