ಶಿಕ್ಷಣದ ಜೊತೆಜತೆಗೆ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಿ: ಅಕ್ಕಿ

(ಸಂಜೆವಾಣಿ ವಾರ್ತೆ)
ಬೀದರ್:ಜು.21: ಬೀದರ ಜಿಲ್ಲೆಯ ಕಾಡವಾದ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಬೀದರ್ ಶಾಲಾ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ 2022-23ನೇ ಸಾಲಿನ ಕ್ರೀಡಾಕೂಟ ಮಾಡಲಾಯಿತು ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ದೇಶಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಸಂತಿ ಬಾಯಿ ಅಕ್ಕಿ ರವರು ವಿದ್ಯಾರ್ಥಿಗಳ ಕುರಿತು ಮಾತನಾಡಿದರು ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಯು ನಿಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು ಪ್ರತಿ ಯೊಬ್ಬ ವಿದ್ಯಾರ್ಥಿಯು ತಮ್ಮ ಜೀವನದಲ್ಲಿ ಕಷ್ಟ ಪಡಬೇಕು ಕಷ್ಟಪಟ್ಟರೆ ನಿಮ್ಮ ಜೀವನದಲ್ಲಿ ಏನಾದರೂ ಸಾಧನೆ ಮಾಡಲು ಸಾಧ್ಯ ಹಾಗೆ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರತಿಯೊಬ್ಬರು ದೇಶದ್ಯಾಂತ ಭಾರತ ಸ್ವಾತಂತ್ರ??ದ 75ರ ಸಂಭ್ರಮದ ಭಾಗವಾಗಿ ಕೇಂದ್ರ ಸರ್ಕಾರವು ಹರ್ ಘರ್ ತಿರಂಗಾ ಎಂಬ ಘೋಷ ವಾಕ್ಯದೊಂದಿಗೆ ಅಸಂಖ್ಯಾತ ಹೋರಾಟ, ತ್ಯಾಗ ಬಲಿದಾನಗಳ ಕಾರಣದಿಂದ ದಾಸ್ಯದ ಸಂಕೋಲೆಯಿಂದ ಬಿಡುಗಡೆಯಾದ ಭಾರತಾಂಬೆಗೆ ಪ್ರಾಪ್ತಿಯಾದ ಸ್ವಾತಂತ್ರ??ಕ್ಕೆ ಈಗ ಅಮೃತ ಮಹೋತ್ಸವದ ಸಂಭ್ರಮ, ಎಲ್ಲರನ್ನು ಸದಾ ಸ್ಮರಿಸುವುದು ಹಾಗೂ ಗೌರವಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿ ಆಗಸ್ಟ್ 11 ರಿಂದ 17 ರವರೆಗೆ ದೇಶದ ಪ್ರತಿ ಮನೆಯಲ್ಲಿ,ಶಾಲೆ ಕಾಲೇಜು ಗಳಲ್ಲಿ ಪ್ರತಿಯೊಂದು ಕಚೇರಿ ಯಲ್ಲಿ ರಾಷ್ಟ್ರಧ್ವಜ ಹಾರಿಸಿ ದೇಶಭಕ್ತಿ ಬಿಂಬಿಸಬೇಕೆಂದು ಹೇಳಿದರು.ಕ್ಷೇತ್ರ ಸಮನ್ವಯಾಧಿಕಾರಿಗಳಾದ ವಿಜಯಕುಮಾರ್ ಬೆಳಮಗಿ ರವರು ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ನಿಮ್ಮ ಪ್ರದರ್ಶನ ತೊರಿಸಿ ಹೊಬಳಿ ಮಟ್ಟದಿಂದ ಜಿಲ್ಲಾ ಮಟ್ಟ ಜಿಲ್ಲಾ ಮಟ್ಟ ದಿಂದ ವಿಭಾಗ ಮಟ್ಟ ವಿಭಾಗ ಮಟ್ಟದಿಂದ ರಾಜ್ಯಮಟ್ಟಕ್ಕೆ ನಿಮ್ಮ ಶಕ್ತಿ ಪ್ರದರ್ಶನ ಮಾಡಬಹುದು ಪ್ರತಿಯೊಬ್ಬರು ಕಷ್ಟ ಪಡಲೇಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಶ್ರೀಮತಿ ಗೀತಾ ಗಡ್ಡಿ ರವರು ವಿದ್ಯಾರ್ಥಿಗಳು ಪ್ರತಿಯೊಬ್ಬರ ನಿಮ್ಮ ಜೀವನದಲ್ಲಿ ಪಾಠದ ಜೊತೆಗೆ ಆಟವು ಜೊಡಿಸಿಕೊಳ್ಳಬೇಕು.ನಮ್ಮ ಜೀವನದಲ್ಲಿ ನಾವು ಏನಾದರು ಮಾಡಬೇಕಾದರೆ ನಮ್ಮ ಜೀವನದಲ್ಲಿ ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು.ನಾವು ನಮ್ಮ ಗುರಿಯ ಮೆಲೆ ಇದನ್ನು ಸಾದಿಸಲೇ ಬೇಕು ಎಂಬ ಛಲ ತೊಟ್ಟು ಕಷ್ಟಪಟ್ಟು ಗುರಿಯ ಕಡೆಗೆ ಸಾಧಿಸಬೇಕು.ಕ.ರಾ.ಪ್ರಾ.ಶಾ.ಶಿ.ಸಂಘ ಬೀದರ್ ಅಧ್ಯಕ್ಷರಾದ ಶ್ರೀ ರಾಜು ಸಾಗರ್ ರವರು ವಿದ್ಯಾರ್ಥಿಗಳು ನಮ್ಮ ದೇಶದ ಶಕ್ತಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಚೆನ್ನಾಗಿ ಓದಬೇಕು ಓದುವುದರ ಜೊತೆಗೆ ಆಟವು ಆಡಬೇಕು ನಿಮ್ಮ ಜೀವನದಲ್ಲಿ ನಿಮ್ಮ ಗುರಿಯ ಕಡೆಗೆ ಕಷ್ಟಪಡಬೇಕು.ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಮತಾ ಅನಂತರಾವ ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು ನಿಮ್ಮ ತಂದೆ ತಾಯಿಯ ಗೌರವ ಎತ್ತರಕ್ಕೆ ಬೆಳೆಸಬೇಕು.ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಗೆ ಕ್ರೀಡೆಯು ನಿಮ್ಮ ಜೀವನದಲ್ಲಿ ರೂಪಿಸಿಕೊಳ್ಳಬೇಕು ಎಂದು ಹೇಳಿದರು ಹಾಗೂ ವಿವಿಧ ಶಾಲೆಗಳಿಂದ ಬಂದಿರುವ ಶಾಲೆಗಳ ಗುಂಪಿನ ಪರಿಚಯ ಕೆಳಿದರು ಹಾಗೂ ವಿದ್ಯಾರ್ಥಿಗಳಿಗೆ ಚೆನ್ನಾಗಿ ಆಟವಾಡಿ ನಿಮ್ಮ ಶಾಲೆಯ ಹಾಗೂ ನಿಮ್ಮ ಶಕ್ತಿ ಪ್ರದರ್ಶನ ಈ ಕ್ರೀಡೆಯಲ್ಲಿ ತೊರಿಸಿ ಬೇಕು ಎಂದೂ ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಮತಾ ಅನಂತರಾವ ,ಶ್ರೀ ಮೋಹನ್ ಚೊಂಡಿ ಅಧ್ಯಕ್ಷರು ಎಸ್.ಡಿ.ಎಮ.ಸಿ , ಶ್ರೀಮತಿ ಬಸಂತಿ ಬಾಯಿ ಅಕ್ಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬೀದರ್,ಶ್ರೀ ವಿಜಯಕುಮಾರ್ ಬೆಳಮಗಿ ಕ್ಷೇತ್ರ ಸಮನ್ವಯಾಧಿಕಾರಿಗಳು ಬೀದರ್, ಶ್ರೀಮತಿ ಗೀತಾ ಗಡ್ಡಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ಬೀದರ್,ಶ್ರೀ ಎ.ಕೆ .ಜೋಶಿ ದೈಹಿಕ ಪರಿವಿಕ್ಷಕರು ಕ್ಷೇ.ಶಿ ಅಧಿಕಾರಿಗಳ ಕಚೇರಿ ಬೀದರ್, ಶ್ರೀ ರಾಜು ಸಾಗರ ಅಧ್ಯಕ್ಷರು ಕ.ರಾ.ಪ್ರಾ.ಶಾ.ಶಿ.ಸಂಘ ಬೀದರ್, ಶ್ರೀ ಬಾಬುರಾವ್ ಬಿರಾದಾರ ರಾಜ್ಯ ಉಪಾಧ್ಯಕ್ಷರು ಕ.ರಾ.ಪ್ರಾ.ಶಾ.ಶಿ.ಸಂಘ ಬೆಂಗಳೂರು,ಶ್ರೀ ಬಾಬುಕುಮಾರ ಕಾರ್ಯದರ್ಶಿ ಕ.ರಾ.ಪ್ರಾ.ಶಾ.ಸಿ ಸಂಘ ಬೀದರ್,ಶ್ರೀ ಸಚ್ಚಿದಾನಂದ ಶಿಕ್ಷಣ ಸಂಯೋಜಕರು ಕ್ಷೇ.ಶಿ.ಅಧಿಕಾರಿಗಳ ಕಚೇರಿ ಬೀದರ್, ಶಿವಶಂಕರ್ ಪಾಟೀಲ್,ಸಿ.ಆರ್.ಪಿ ಕಾಡವಾದ, ಶ್ರೀ ಅನಂತರಾವ ಯುವ ಮುಖಂಡರು ಬೀದರ್ ದಕ್ಷಿಣ ಕ್ಷೇತ್ರ, ಶ್ರೀ ಅಶೋಕ್ ದಂಡಿ ಹಿರಿಯ ಮುಖಂಡರು ಬೀದರ್, ಶ್ರೀ ದೇವೆಂದ್ರ ಠಾಕೂರ್ ಯುವ ನಾಯಕರು ಕಾಡವಾದ, ಶ್ರೀ ಮಹೇಶ ಶಿವ ಶಕ್ತಿ ಟೆಂಟ್ ಹೌಸ್ ಯುವ ನಾಯಕರು ಕಾಡವಾದ ಹಾಗೂ ಸ್ವಾಮಿ ವಿವೇಕಾನಂದ ಯುವ ಸೇವಾ ಸೋಸೈಟಿಯ ಅಧ್ಯಕ್ಷರಾದ ಶ್ರೀ ರಮೇಶ್ ಮರ್ಜಾಪೂರ ಹಾಗೂ ವಿವಿಧ ಶಾಲೆಯ ಶಿಕ್ಷಕರು ಹಾಗೂ ಅಧಿಕಾರಿಗಳು ಹಾಗೂ ಶಾಲೆಯ ಶಿಕ್ಷಕರು, ಸಿಬಂದಿ ವರ್ಗದವರು ಹಾಗೂ ವಿವಿಧ ಶಾಲೆಗಳಿಂದ ಬಂದಿರುವ ವಿದ್ಯಾರ್ಥಿಗಳು ಉಪಸ್ಥಿತರಿದ್ದರು