ಶಿಕ್ಷಣದ ಜೊತೆಗೆ ಸಾಮಾಜಿಕ ಸುಧಾರಣೆಗೆ ಶ್ರಮಿಸಿದವರು ಫುಲೆ

ರಾಮದುರ್ಗ,ಜ5: ದೀನ-ದಲಿತರು, ಹಿಂದುಳಿದವರು ಹಾಗೂ ಮಹಿಳೆಯರಿಗೆ ಶಿಕ್ಷಣ ನೀಡುವುದರಲ್ಲಿ ಎಷ್ಟೇ ನೋವು ಅನುಭವಿಸಿದರೂ ದೃತಿಗೆಡದೇ ಅಕ್ಷರ ಕ್ರಾಂತಿಯನ್ನು ಮಾಡಿದ ಸಾವಿತ್ರಿಬಾಯಿ ಫುಲೆ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಎನಿಸಿಕೊಂಡು ಶಿಕ್ಷಣದ ಜೊತೆಗೆ ಸಾಮಾಜಿಕ ಸುಧಾರಣೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಅವರು ಹೇಳಿದರು.
ತಾಲೂಕಿನ ತುರನೂರ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದ ಆವರನದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಹಮ್ಮಿಕೊಂಡ ಸಾವಿತ್ರಿಬಾಯಿ ಫುಲೆ ದಿನಾಚರಣೆ ಮತ್ತು ಶಿಕ್ಷಕ ಸಂಘದ ನೂತನ ಸದಸ್ಯರ ಅಭಿನಂದನೆ ಹಾಗೂ ಪ್ರಶಸ್ತಿ ಪುರಸ್ಕøತ ಶಿಕ್ಷಕಿಯರ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋವಿಡ್-19ರ ಸಂದರ್ಭದಲ್ಲಿ ಶಾಲೆಗಳು ಮುಚ್ಚಿರುವುದರಿಂದ ಮಕ್ಕಳ ಮತ್ತು ಶಿಕ್ಷಕರ ಸಂಪರ್ಕ ಕಡಿತಗೊಂಡಿದ್ದು ಈಗ ಶಾಲೆಗಳು ಪುನರಾರಂಭಗೊಂಡಿದ್ದು ಕೋವಿಡ್ ಮುಂಜಾಗೃತ ಕ್ರಮದೊಂದಿಗೆ ಶಾಲೆಗಳನ್ನು ತೆರೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದರು.
ಶಿಕ್ಷಕರ ಕಡ್ಡಾಯ ವರ್ಗಾವಣೆ, ನೂತನ ಪಿಂಚಣಿ ಯೋಜನೆ ರದ್ದತಿ, ಸಿ.ಮತ್ತು ಆರ್ ನಿಯಮಾವಳಿಗಳ ತಿದ್ದುಪಡಿ ಇತ್ಯಾದಿ ಸಮಸ್ಯೆಗಳನ್ನು ಪರಿಹರಿಸಲು ಶಿಕ್ಷಕರ ಸಂಘಟನೆ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಜಿಲ್ಲಾಧ್ಯಕ್ಷ ಜಯಕುಮಾರ ಹೆಬಳಿ ತಿಳಿಸಿದರು.
ಶಿಕ್ಷಕರ ಯಾವುದೇ ಕೆಲಸ ಕಾರ್ಯಗಳನ್ನು ನಮ್ಮ ಕಚೇರಿ ಸಿಬ್ಬಂದಿ ಪ್ರಾಮಾಣಿಕವಾಗಿ ಮಾಡುತ್ತಿದ್ದು ಶಿಕ್ಷಕರು ವಿನಾಕಾರಣ ಬರುವ ಅಗತ್ಯವಿಲ್ಲ. ಕೋವಿಡ್ ಕಾರಣದಿಂದ ನಿಂತುಹೋದ ಶೈಕ್ಷಣಿಕ ಚಟುವಟಿಕೆಗಳನ್ನು ಪುನರಾರಂಭಿಸಬೇಕೆಂದು ಕ್ಷೇತ್ರಶಿಕ್ಷಣಾಧಿಕಾರಿ ಎಂ.ಆರ್.ಅಲಾಸೆ ತಿಳಿಸಿದರು.
ಶಿಕ್ಷಕ ಸಂಘದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಗೋಣಿ, ನಿಕಟಪೂರ್ವ ಅಧ್ಯಕ್ಷ ಎ.ವಿ.ಪಾಟೀಲ ಮಾನಾಡಿದರು.
ತಾಲೂಕು ಶಿಕ್ಷಕರ ಸಂಘದ ನೂತನ ಅಧ್ಯಕ್ಷ ಮಾಹಾಂತೇಶ ನಿಜಗುಲಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಸ್.ವಿ.ಪಾಟೀಲ, ಎಸ್.ಎಸ್.ಹುಚ್ಚನ್ನವರ, ಎಸ್.ಎಚ್.ಅಣ್ಣಿಗೇರಿ, ಸುರೇಶ ಏಣಿ, ಜಿಲ್ಲಾ ಉಪಾಧ್ಯಕೆ ಎಸ್.ಎಸ್. ಹುಗ್ಗಿ, ರಮೇಶ ಅಣ್ಣಿಗೇರಿ, ಎಂ.ಎನ್ ಗವನ್ನವರ ವೇದಿಕೆ ಮೇಲಿದ್ದರು.ತಾಲೂಕಿನ 18 ಜನ ಶಿಕ್ಷಕಿಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಶಿಕ್ಷಕ ಅಶೋಕ ಬೂದಿ ನಿರೂಪಿಸಿದರು. ಬಿ.ಎಂ.ಕಡಕೋಳ ಸ್ವಾಗತಿಸಿದರು. ಎನ್.ಎ.ಶೇಖ ವಂದಿಸಿದರು.