ಶಿಕ್ಷಣದ ಜೊತೆಗೆ ಸಂಸ್ಕøತಿ ಪರಂಪರೆಯ ಪರಿಚಯ ಅತ್ಯವಶ್ಯಕ

ಸೈದಾಪುರ:ಜು.23:ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಶಿಕ್ಷಣದ ಜತೆಗೆ ಭಾರತೀಯ ಸಂಸ್ಕøತಿ ಹಾಗೂ ಪರಂಪರೆಯ ಪರಿಚಯ ಅತ್ಯವಶ್ಯವಾಗಿದೆ. ಜ್ಞಾನದೇವತೆ ಹಾಗೂ ವಿದ್ಯಾದೇವತೆಯಾದ ಸರಸ್ವತಿಯನ್ನು ಆರಾಧಿಸುವದರಿಂದ ಶಾಂತಿ ಲಭಿಸುವದಲ್ಲದೇ ನಮ್ಮ ಮನಸ್ಸಿನ ಭಾರ ಕಡಿಮೆಯಾಗಿ ಮನಃ ಪರಿಶುದ್ದಿಯಾಗುತ್ತದೆ ಎಂದು ಶಿಕ್ಷಕಿ ರಾಚಮ್ಮ ಅಭಿಪ್ರಾಯ ಪಟ್ಟರು.
ಸಮೀಪದ ಬದ್ದೇಪಲ್ಲಿ ಗ್ರಾಮದ ನೋಬಲ್ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯಾದೇವತೆ ಸರಸ್ವತಿ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೇವಲ ಪಠ್ಯ ವಿಷಯಗಳಿಗೆ ಮಾತ್ರ ಒತ್ತು ಕೊಡದೇ ಮಗುವಿನ ಸರ್ವತೋಮುಖ ಅಭಿವೃದ್ದಿಯ ಹಿತ ದೃಷ್ಠಿಯಿಂದ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಸಾಕಷ್ಟು ಪ್ರಾತಿನಿದ್ಯ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಸರಸ್ವತಿದೇವಿಯ ಪೂಜಾ ಕಾರ್ಯಕ್ರಮ ಸೇರಿದಂತೆ ಇನ್ನಿತರ ಆದರ್ಶ ವ್ಯಕ್ತಿಗಳ ಜಯಂತಿ ಹಾಗೂ ಅವರ ಆದರ್ಶಗಳನ್ನು ಮಕ್ಕಳಿಗೆ ತಲುಪಿಸಲಾಗುತ್ತಿದೆ ಎಂದು ತಿಳಿಸಿದರು.
ಶಾರದಾ ಮಾತೆಯ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯಗುರು ನರಸಪ್ಪ ನಾರಾಯಣೋರ, ಶಿಕ್ಷಕರಾದ ಜೊಸೇಫ್ ಜಾರ್ಜ್, ಕವಿತಾ, ಅಶ್ವಿನಿ, ಸೇರಿದಂತೆ ಮುಸ್ತಾಫ್ ಸೇರಿದಂತೆ ಮುಂತಾದವರಿದ್ದರು.