ಶಿಕ್ಷಣದ ಜೊತೆಗೆ ಸಂಸ್ಕಾರ ಮುಖ್ಯ


ಚನ್ನಮ್ನ ಕಿತ್ತೂರ,ಮಾ.24: ಮರ್ಯಾದಾ ಪುರುಷೋತ್ತಮ ರಘುಕುಲ ರಾಮ ಪ್ರಾಣ ಹೋದರು ಸರಿ ಕೊಟ್ಟ ವಚನ ತಪ್ಪಿಲ್ಲ. ಆದ್ದರಿಂದ ಎಲ್ಲರಿಗೂ ಆತ ಆದರ್ಶವಾಗಿದ್ದಾನೆ. ಎಂದು ಆಚಾರ್ಯಶ್ರೀ 108 ಪ್ರಸನ್ನ ಸಾಗರ ಮಹಾರಾಜ ಹೇಳಿದರು.
ಕುಂಚವನ ಮಹಾರಾಷ್ಟ್ರದ ಉದ್ಗಾಂವದಿಂದ ಕರ್ನಾಟಕ ಪ್ರವೇಶಿಸಿ ಬೆಳಗಾವ ಮಾರ್ಗವಾಗಿ ಶ್ರವಣಬೆಳಗೋಳ ಕಡೆಗೆ ವಿಹಾರ ಮಾಡುವ ಸಮಯದಲ್ಲಿ ಕಿತ್ತೂರ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ವಿಶ್ರಾಂತಿ ಪಡೆದು ಪ್ರವಚನ ನೀಡಿ ಮಾತನಾಡಿದ ಅವರು. ರಾಮ ಮರ್ಯಾದಾ ಪಾಲನೆ ಮಾಡಿದ, ಆವಾಗ ಆತ ಮರ್ಯಾದೆ ಪುರೂಷತ್ತಮ ಎಂದೆನಿಸಿಕೊಂಡ. ಮನುಷ್ಯರಾದ ನಾವು ಮರ್ಯಾದೆಯನ್ನು ಉಲ್ಲಂಘನೆ ಮಾಡಿದರೆ ರಾವಣನಂತೆ ಪಾಪದ ಮನೆಗೆ ಹೋಗುತ್ತೇವೆ ಎಂದರು.
ಇವರನ್ನು ವರೂರು ನವಗ್ರಹ ಕ್ಷೇತ್ರಕ್ಕೆ ಆಹ್ವಾನಿಸಲು ಕ್ಷೇತ್ರದ ಧರ್ಮಾಧಿಕಾರಿ ಧರ್ಮಸೇನ ಭಟ್ಟಾರಕ. ಜೈನ ಬೋರ್ಡಿಂಗ್ ಅಧ್ಯಕ್ಷ ನ್ಯಾಯವಾದಿ ವಿದ್ಯಾಧರ ಪಾಟೀಲ ಸಹಕಾರ್ಯದರ್ಶಿ ದೇವೇಂದ್ರಪ್ಪ ಕಾಗೆನ್ನವರ, ಹುಬ್ಬಳ್ಳಿ ಜೈನಧರ್ಮದ ಅಧ್ಯಕ್ಷ ರಾಜೇಂದ್ರ ಬೀಳಗಿ, ವಿಮಲ ತಾಳಿಕೋಟಿ, ಶಾಂತಿನಾಥ ಹೋತಪೇಟೆ, ಬಾಹುಬಲಿ ಬಸ್ತಿ, ಸಂತೋಷ ಮುರಗಿಪಾಟೀಲ, ಸೇರಿದಂತೆ ಕಿತ್ತೂರ ಜೈನ ಸಮಾಜದವರಿದ್ದರು.
ಈ ವೇಳೆ 108 ನಿರಿಯಾಪ ಸಾಗರಜೀ, 108 ನವಪದ್ಮ ಸಾಗರಜೀ, 108 ಮುನಿಶ್ರೀ ಪರಿಮಲ ಸಾಗರಜೀ, 108 ಮುನಿಶ್ರೀ ವರಮಿಲ್ ಸಾಗರಜೀ, ಕ್ಷುಲಕ 105 ನೇಗಂ ಮಹಾರಾಜ, 105 ಅರಗ ಸಾಗರ ಮಹಾರಾಜ, ಮತಾಜಿಗಳಾದ ಆರ್ಯಿಕಾರತ್ನ 105 ಗ್ಯಾನಪ್ರಭಾ, 105 ಚಾರಿತ್ರ್ಯಶಭಾ, 105 ಪುಣ್ಯಪ್ರಭಾ, ಇನ್ನೂ ಹಲವು ಮಾತಾಜೀಗಳು ಸೇರಿದಂತೆ ಛತ್ತೀಸಗಡ, ಆಸಾಂ, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ ಕಡೆಯಿಂದ ಜೈನ ಶ್ರಾವಕ-ಶ್ರಾವಕೀಯರು, ಸಾರ್ವಜನಿಕರು ಆಗಮಿಸಿದ್ದರು.