ಶಿಕ್ಷಣದ ಜೊತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳಿ:ಸಿದ್ದಲಿಂಗ ಶ್ರೀ

ಯಡ್ರಾಮಿ:ಫೆ.17:ಶಿಕ್ಷಣದ ಜೋತೆಗೆ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಕದಂಬ ಪದವಿ ಪೂರ್ವ ಕಾಲೇಜು ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ದ್ವಿತೀಯ ವರ್ಷದ ಬೀಳ್ಕೊಡುಗೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ ಶ್ರೀಗಳು.

ಶಿಕ್ಷಣದಲ್ಲಿ ನೂರಕ್ಕೆ ನೂರು ಅಂಕ ಪಡೆಯುವದು ಮುಖ್ಯ ಅಲ್ಲ ಅದರ ಜೋತೆಗೆ ಉತ್ತಮ ವ್ಯಕ್ತಿತ್ವ ರೂಪಿಸುವ ಗುರಿ ಹೊಂದಿರಬೇಕು ಆಗ ಮಾತ್ರ ಸಂಪೂರ್ಣ ವಿದ್ಯಾರ್ಥಿಗಳ ಜೀವನಕ್ಕೆ ಮಹತ್ವ ಬರುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳು ತಮ್ಮ ಜೀವನದ ಸಾಧನೆ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಧನೆ ಮಾಡುವ ಮೂಲಕ ತಾವೂ ವಿದ್ಯಾಭ್ಯಾಸ ಮಾಡಿದ ಕಾಲೇಜು ಹಾಗೂ ತಂದೆ-ತಾಯಿಗಳಿಗೆ ಗೌರವ ತರುವ ಕೆಲಸಾ ಮಾಡಬೇಕು ಎಂದು ಹೇಳಿದರು.

ಶ್ರೀಶೈಲ ಖಣದಾಳ ಕದಂಬ ಕಾಲೇಜು ಅಧ್ಯಕ್ಷರು ಪ್ರಾಸ್ಥಾವಿಕವಾಗಿ ಮಾತನಾಡುತ್ತ.ಈ ಕಾಲೇಜು ಸ್ಥಾಪನೆ ಮಾಡುವದಕ್ಕೆ ಯಡ್ರಾಮಿ ಪಟ್ಟಣದ ಪೂಜ್ಯ ಸಿದ್ದಲಿಂಗ ಶ್ರೀಗಳು ಮತ್ತು ಭೂ ಧಾನಿಗಳಾದ ಅಣ್ಣಯ್ಯ ಹಿರೇಮಠ ಅವರ ಕೊಡುಗೆಯಾಗಿದೆ.

ಕದಂಬ ಕಾಲೇಜು ಪ್ರಥಮವಾಗಿ ಪ್ರಾರಂಭ ಮಾಡಿದರು ನಮ್ಮ ಸಂಸ್ಥೆಯ ಮೇಲೆ ಯಡ್ರಾಮಿ ತಾಲೂಕಿನ ಮುಖಂಡರು ಹಾಗೂ ಸರ್ವ ಜನರು ಸೇರಿಕೊಂಡು ದೂರದಲ್ಲಿ ಇರುವ ಸಂಸ್ಥೆ ತಮ್ಮ ಮಕ್ಕಳಿಗೆ ದಾಖಲಾತಿ ಮಾಡಿದ್ದು.

ತಮ್ಮ ಈ ಸಹಕಾರಕ್ಕೆ ಹಾಗೂ ವಿಶ್ವಾಸಕ್ಕೆ ಯಾವತ್ತೂ ಕೂಡ ಮೋಸ ಮಾಡದ ರೀತಿಯಲ್ಲಿ ಉತ್ತಮ ಪಲಿತಾಶ ನೀಡುವ ಮೂಲಕ ತಮ್ಮ ವಿಶ್ವಾಸಕ್ಕೆ ಪಾತ್ರರಾಗುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಎರಡೂ ವರ್ಷದ ಕಾಲೇಜು ಅನುಭವಗಳನ್ನು ಅನಿಸಿಕೆ ರೀತಿಯಲ್ಲಿ ಹಂಚಿಕೊಂಡು ತಮ್ಮ ಉಪನ್ಯಾಸಕರಿಗೆ ಅಭಿನಂದನೆಗಳು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಪೂಜ್ಯ ಸತ್ಯಾನಂದ ಪೂಜಾರಿ ಬ್ರಹ್ಮ ವಿದ್ಯಾಶ್ರಮ ಮಠ ಅಣಜಗಿ, ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ವಿರಕ್ತಮಠ ಯಡ್ರಾಮಿ,ಮಲ್ಲಿಕಾರ್ಜುನ ಮ್ಯಾಳಗಿ ಕದಂಬ ಕಾಲೇಜು ಅಧ್ಯಕ್ಷರು ಜೇವರ್ಗಿ,ಚಂದ್ರಶೇಖರ ಪುರಾಣಿಕ ಕಾಂಗ್ರೆಸ್ ಮುಖಂಡರು ಯಡ್ರಾಮಿ, ಸಂಜುಕುಮಾರ ಪವಾರ್ ಎಸ್.ಆರ್.ವಿ.ಪದವಿ ಪೂರ್ವ ಕಾಲೇಜು ಜೇವರ್ಗಿ,ಅಣ್ಣಯ್ಯ ಹಿರೇಮಠ ಉದ್ದಿಮೇದಾರರು ಯಡ್ರಾಮಿ,ಎಸ್.ಎಸ್.ಬಿರಾದರ ಬಾಲಕಿಯರ ಪ್ರೌಡ ಶಾಲೆ ಯಡ್ರಾಮಿ,ಮಲ್ಕಪ್ಪ ಭಜಂತ್ರಿ ಸರಕಾರಿ ಪ್ರೌಡ ಶಾಲೆ ಯಡ್ರಾಮಿ, ಮರಲಿಂಗಮ್ಮ ಮೌಲಾನ ಆಜಾದ್ ಪ್ರೌಡ ಶಾಲೆ ಯಡ್ರಾಮಿ,ವಿಶ್ವನಾಥ ಪಾಟೀಲ ಮಾಗಣಗೇರಿ ಕರವೇ ಅಧ್ಯಕ್ಷರು ಯಡ್ರಾಮಿ,ಹಲವಾರು ಪಾಲಕರು ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.