ಶಿಕ್ಷಣದ ಜೊತೆಗೆ ವೇದ ಸಂಸ್ಕøತಿ ಪಾಠ ಸೂಕ್ತ :ಗೋಪಾಲ ನಾಯಕ

ವಿಜಯಪುರ, ಆ.1-ಸಮಾಜ ಸುಧಾರಣೆಗಾಗಿ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಧಾರ್ಮಿಕ ಪರಿಕಲ್ಪನೆಯನ್ನು ನೀಡುವದರ ಜೊತೆಗೆ ಪಂಡಿತರಿಂದ ಕನಕದಾಸರ ಹರಿಭಕ್ತಿಸಾರ ಹಾಗೂ ವೇದ ಸಂಸ್ಕøತಿಯ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುತ್ತಿರುವದು £ಜಕ್ಕೂ ಹಿಂದಿನ ಸಂಸ್ಕøತಿ ಬೆಳೆಸುತ್ತಿರುವದು ಮಹಾನ್ ಕಾರ್ಯವಾಗಿದೆ ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಇಂದಿಲ್ಲಿ ಹೇಳಿದರು.
ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯು ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ್ರತಿ ತಿಂಗಳು ಹಮ್ಮಿಕೊಳ್ಳುತ್ತಿರುವ ಋಗ್ವೇದ ಪರಿಚಯ ಕಾರ್ಯಕ್ರಮದಲ್ಲಿ ಕನಕದಾಸರ ಹರಿಭಕ್ತಸಾರ ಪ್ರವಚನ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾನಾಡುತ್ತ, ಹಿಂದಿನ ಸಂಸ್ಕøತಿ ಆಚಾರ-ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಿಳಿಹೇಳಿ ಸ್ವಾಮಿವಿವೇಕಾನಂದರ ತತ್ವ ಮಾರ್ಗದಲ್ಲಿ ಮುನ್ನಡೆದು ಭಾರತ ದೇಶ ಉನ್ನತಮಟ್ಟಕ್ಕೆ ಹೋಗುವಂತೆ ಈ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಣದ ಜೊತೆಯಾಗಿ ಪ್ರತಿ ತಿಂಗಳು ಇಂತಹ ಕಾರ್ಯ ಮಾಡುತ್ತಿರುವದು ಸಂಸ್ಥೆಗೆ ಒಂದು ಹೆಮ್ಮೆ ತರುವಂತಹದ್ದು ಎಂದರು.
ಎಸ್. ಎ .ಜಿದ್ದಿ ಅವರು ಸಚ್ಚಾರಿತ್ರರು, ರಾಜಕೀಯದಲ್ಲಿಯೂ ಉತ್ತಮ ಹೆಸರು ಮಾಡಿದ ಇವರು ಶಿಕ್ಷಣ ರಂಗದಲ್ಲಿಯೂ ಉತ್ತಮ ಸೇವೆ ಮಾಡುತ್ತಿರುವರುವದರಿಂದ ಇವರ ಶಿಕ್ಷಣ ಸಂಸ್ಥೆ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಶ್ರೀ ವೇದವ್ಯಾಸರು ಬರೆದ ಮಹಾಭಾರತ ಹಾಗೂ ಶ್ರೀ ವಾಲ್ಮೀಕಿ ರಚಿಸಿದ ರಾಮಾಯಣದ ಸಾರವನ್ನು ಪ್ರತಿಯೊಬ್ಬರು ಓದಿ ಅಥ್ರ್ಯಿಸಿಕೊಂಡು £ತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವದರ ಮೂಲಕ ಸತ್‍ಪ್ರಜೆಗಳಾಗಬೇಕೆಂದು ಮುತ್ತಗಿಯ ಪಂ. ನರಹರಿ ಆಚಾರ್ಯ ಜೋಶಿ ಅವರು ಕನಕದಾಸರ ಹರಿಭಕ್ತಸಾರ ಪ್ರವಚನವನ್ನು ನಡೆಸಿಕೊಟ್ಟು ಹೇಳಿದರು.
ಎಂಜಲು ಎಂಜಲೆಂಬ ರಾ ನುಡಿ ಎಂಜಲಲ್ಲದೇ ವಾರಿಜತಲ ಎಂಜಲೆಲ್ಲದ ಹಾಲು ಕರುವಿನ ಎಂಜಲೆನಿಸದೇ ಎಂಬ ಈ ಹರಿಭಕ್ತಸಾರದ ಈ ಮಹೋನ್ನತವಾದ ಪದ್ಯವು ಹೇಳುವ ಸಾರ ಮಹಾಭಾರತ ಹಾಗೂ ರಾಮಾಯಣದ ತಳಹದಿಯ ಮೇಲೆ ನಿಂತಿದೆ ಎಂದು ವಿವರಿಸಿದರು.
ವಿದ್ಯಾರ್ಥಿಗಳು ವೇದ-£ೀತಿಶಾಸû್ರಗಳನ್ನು ಅಧ್ಯಯನ ಮಾಡಿ ಸುಶಿಕ್ಷಿತರಾಗುವ ಮೂಲಕ ಜ್ಞಾನದಿಂದ ತಮ್ಮಲ್ಲಿರುವ ದರಿದ್ರನಾರಾಯಣ ಹೊಗಲಾಡಿಸಿ ಸನ್ಮಾರ್ಗದಲ್ಲಿ ಸಾಧನೆ ಮಾಡುವಂತೆ ಸರ್ವಜ್ಞ ವಿಹಾರ ವಿದ್ಯಾಪೀಠದ ಕುಲಪತಿಗಳಾದ ಪಂ. ಮಧ್ವಾಚಾರ್ಯ ಮೋಕಾಶಿ ಅವರು ವಿದ್ಯಾರ್ಥಿಗಳಲ್ಲಿ ಕರೆ £ೀಡಿದರು. ವಿದ್ಯಾರ್ಥಿಗಳು ವಿದ್ಯಾವಂತರಲ್ಲಿ ಹೋಗಿ ಉತ್ತಮ ಶಿಕ್ಷಣ ಪಡೆಯುವ ಮೂಲಕ ತಮ್ಮ ಜ್ಞಾನಾರ್ಜನೆ ಶಕ್ತಿಯನ್ನು ವಿಸ್ತರಿಸಿಕೊಳ್ಳಬೇಕೆಂದರು. ನಮ್ಮಲ್ಲಿ ಸತತ ಪ್ರಯತ್ನ, ಗಟ್ಟಿ ಮನಸ್ಸು ಛಲ ಬೇಕು, ಆದಾಗಲೇ ಸಾಧನೆ ಮಾಡಲು ಸಾಧ್ಯ ಎಂದು ವಿವರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿ.ಡಿ.ವಸ್ತ್ರದ ಅವರು ಭಾರತೀಯ ಸಂಸ್ಕøತಿಯ ಅವಲೋಕನ ಮಾಡುವದರಿಂದ ನಮ್ಮ ಹಿಂದಿನ ಸಾಹಿತ್ಯ, ಆಚಾರ-ವಿಚಾರ ಸಂಸ್ಕಾರ ಅರಿಯಲು ಸಾಧ್ಯ, ಆದುದರಿಂದಲೇ ನಮ್ಮ ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯು ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಪ್ರತಿ ತಿಂಗಳು ಹಮ್ಮಿಕೊಳ್ಳುತ್ತಿರುವ ಋಗ್ವೇದ ಪರಿಚಯ ಹಾಗೂ ಕನಕದಾಸರ ಹರಿಭಕ್ತಿಸಾರ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ ಎಂದು ವಿವರಿಸಿದರು.
ಶ್ರೀ ಸಿದ್ದೇಶ್ವರ ಶ್ರೀಗಳ ಹಾಗೂ ಪಂ.ಮದ್ವಾಚಾರ್ಯ ಮೊಕಾಶಿ ಅವರ ಪ್ರೇರಣೆಯಿಂದಲೇ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಎಂ.ಎಲ್.ಸಿ ಎಸ್.ಎ.ಜಿದ್ದಿ ಹೇಳಿ ಇನ್ನು ಮುಂದೆಯು ಆಯೋಜಿಸುವಂತ ಕಾರ್ಯಕ್ರಮಗಳಿಗೆ ತಮ್ಮ ಸಹಕಾರ ಅತ್ಯಮೂಲ್ಯವೆಂದರು. ಸಾಂಸ್ಕøತೀಕ ಜ್ಞಾನಾರ್ಜನೆ ಹಾಗೂ ಆಧ್ಯಾತ್ಮೀಕ ಪವಿತ್ರವಾದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಇದು ನಿರಂತರವಾಗಿ ನಡೆಯಲಿ ನಿಮ್ಮೆಲ್ಲರ ಕರುಣೆ ನಮ್ಮ ಮೀಲಿರಲಿ ಎಂದು ಜಿದ್ದಿ ಬಯಸಿದರು.
ಸಂಸ್ಥೆಯ £ರ್ದೇಶಕರುಗಳಾದ ಡಾ|| ಕಂಠೀರವ ಕುಲ್ಲೋಳ್ಳಿ, ಬಿ.ಆರ್.ಬನಸೋಡೆ ಎಸ್.ಆರ್.ಬಿರಾದಾರ, ಶ್ರೀಮತಿ ರಾಜಶ್ರೀ ಜಿದ್ದಿ, ಹಾಗೂ ಅಶೋಕ ಜಿದ್ದಿ, ssಸುಭಾಷ ಜಿದ್ದಿ, ಎ.ಎಸ್.ಹುನ್ನೂರ, ಎಸ್.ಐ.ಕೋಟ್ಯಾಳ, ವಿ.ಎಸ್.ಶಿರೋಳ, ಎಸ್.ಎಸ್.ಗೌಡಪ್ಪಗೋಳ, ಎಸ್.ಎನ್.ಪ್ಯಾಟಿಗೌಡರ, ಕಲ್ಲಪ್ಪ ಯಕ್ಕುಂಡಿ, ಎಸ್.ಎಚ್.ಮ್ಯಾಗೋಟಿ, ಎಸ್.ಡಿ.ದುರಗಣ್ಣವರ ಶಿಕ್ಷಕ ಶಿಬ್ಬಂದಿ ಮತ್ತು ಹಿರಿಯ ಗಣ್ಯರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಆರ್.ಸಿ.ವಾಡೇದ ಅವರು ಸರ್ವರನ್ನು ಸ್ವಾಗತಿಸಿದರು. ಪ್ರಾಚಾರ್ಯ ಕೆ. ಆರ್. ಜಾಧವ ಅವರು ಕೊನೆಯಲ್ಲಿ ವಂದಿಸಿದರು. ಜಿ.ಎಚ್. ಮರನೂರ ಶಿಕ್ಷಕರು ಕಾರ್ಯಕ್ರಮ ನಿರೂಪಿಸಿದರು ವಿದ್ಯಾರ್ಥಿಗಳು ಕನಕದಾಸರ ಹರಿಭಕ್ತಸಾರ ಪ್ರವಚನ ತದೇಕಚಿತ್ತದಿಂದ ಆಲಿಸಿದ್ದು ಒಂದು ವಿಶೇಷವಾಗಿತ್ತು.