ಶಿಕ್ಷಣದ ಜೊತೆಗೆ ವಿನಯ ಕಲಿಯಬೇಕು

ಹರಪನಹಳ್ಳಿ.ಜು.೨೫ : ಪಟ್ಟಣದ ನಟರಾಜ ಕಲಾಭವನದಲ್ಲಿ ತಾಲ್ಲೂಕು ಭೋವಿ ಸಮಾಜದ ಎಸ್.ಎಸ್.ಎಲ್. ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.ದೇಶದ ಭವಿಷ್ಯ ಯುವಕರ ಮೇಲೆ ನಿಂತಿದ್ದು, ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯುವಕರು ಸೋಮಾರಿತನ ರೂಢಿಸಿಕೊಳ್ಳದೆ ಕ್ರಿಯಾಶೀಲರಾಗಿ ಜೀವನ ನಡೆಸಬೇಕು. ಶಿಕ್ಷಣದ ಜೊತೆಗೆ ವಿನಯ ಕಲಿಯಬೇಕು, ತಂದೆ-ತಾಯಿಗೆ ತಕ್ಕ ಮಗನಾಗಬೇಕು ಎಂದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಜಿ, ಕರುಣಾಕರ ರೆಡ್ಡಿ, ಭೋವಿ ಸಮಾಜದ ಬಂಧುಗಳು ಶ್ರಮ ಜೀವಿಗಳಾಗಿದ್ದು, ಮನೆ ಕಟ್ಟುವ, ಸೇತುವೆ ನಿರ್ಮಾಣ ಮಾಡುವ ಕೆಲಸ ಮಾಡುತ್ತಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕಮುಖ್ಯವಾಹಿನಿಗೆ ಬರಬೇಕಿದೆ ಎಂದರು.ತೆಗ್ಗಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕೆಳವರ್ಗದ ಸಮುದಾಯದಲ್ಲಿ ಅನಕ್ಷರತೆಯ ಪ್ರಮಾಣ ಹೆಚ್ಚಿರುವುದರಿಂದ ಅವರಿಗೆ ಶಿಕ್ಷಣದ ಅರಿವು ಮೂಡಿಸುವ ಅಗತ್ಯತೆ ಇದ್ದು, ಶಿಕ್ಷಣದಿಂದ ಸರ್ವಾ0ಗೀಣ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಭೋವಿ ಸಮಾಜದವರು ಮಕ್ಕಳಿಗೆ ಶಿಕ್ಷಣ ನೀಡಬೇಕಿದೆ ಎಂದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಮಾತನಾಡಿ, ಪರಿಶ್ರಮದ ಜೀವನ ನಡೆಸುವ ಭೋವಿ ಸಮಾಜ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಬೇಕು ಎಂದರು.ಭೋವಿ ಸಮಾಜದ ರಾಜ್ಯ ಅಧ್ಯಕ್ಷ ಎಚ್.ಆನಂದಪ್ಪ, ಗಜೇಂದ್ರ ಗಡದ ಅರವಿಂದ್ ವಡ್ಡರ್,ಚುನಾವಣೆ ಉಸ್ತುವಾರಿಗಳಾದ ಕವಿತಾ ರೆಡ್ಡಿ, ಕರ್ನಾಟಕ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್, ಅಂಬೇಡ್ಕರ್ ಸಮಾಜದ ತಾಲ್ಲೂಕು ಅಧ್ಯಕ್ಷ ನಿಚ್ಚವನಹಳ್ಳಿ ಭೀಮಪ್ಪ, ಭೋವಿ ಸಮಾಜದ ತಾಲ್ಲೂಕು ಅಧ್ಯಕ್ಷ ಎಂ.ಬಿ. ಅಂಜಿನಪ್ಪ ಮಾತನಾಡಿದರು.ಈ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಹರಾಳ್ ಅಶೋಕ್, ತಾಲ್ಲೂಕು ಭೋವಿ ಸಮಾಜದ ಮಾಜಿ ಅಧ್ಯಕ್ಷರುಗಳಾದ ಎಂ.ವಿ. ಅಂಜಿನಪ್ಪ, ಚಟ್ನಹಳ್ಳಿ ವಿ.ರಾಜಪ್ಪ, ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಉಚ್ಚೆಂಗಪ್ಪ, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಬಿ. ಗೋಣಿಬಸಪ್ಪ, ಕೊರಚ, ಕೊರಮ ಸಮಾಜದ ತಾಲ್ಲೂಕು ಅಧ್ಯಕ್ಷ ಅಶೋಕ್, ಚಲವಾದಿ ಸಮಾಜದ ತಾಲ್ಲೂಕು – ಅಧ್ಯಕ್ಷ ಪರಶುರಾಮ್, ಬಿಜೆಪಿ ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪ, ಶಿಕ್ಷಕ ವಿ. ಹನುಮಂತಪ್ಪ, ನೀಲಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹನುಮವ್ವ ರಾಮಪ್ಪ, ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕವಿತಾ , ವೀರೇಶ್, ಮುಖಂಡರುಗಳಾದ ಕಣಿವಿಹಳ್ಳಿ ಮಂಜುನಾಥ್, ಮಂಜುನಾಥ್, ವಿ. ಸಂಪತ್, ಎಂ.ವಿ. ಕೃಷ್ಣಕಾಂತ್, ಎಂ.ವಿ. ತಿಪ್ಪೇಶ್, ಮಹಾತೇಂಶ ಸೇರಿದಂತೆ, ಇತರರು ಇದ್ದರು.