ಶಿಕ್ಷಣದ ಜೂತೆ ಸಂಸ್ಕಾರ ಕಲಿಕೆ ಅಗತ್ಯ


ಚನ್ನಮ್ಮನ ಕಿತ್ತೂರು:11 ಪೆÇೀಷಕರು ತಮ್ಮ ಮಕ್ಕಳನ್ನು ಸರ್ಕಾರಿ ಅಂಗನವಾಡಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಸೋಮವಾರ ಪೇಠೆಯಲ್ಲಿರುವ ಹಳೆಯ ತಹಶೀಲ್ದಾರ ಕಛೇರಿ ಹತ್ತಿರದ ಶಾಲೆ ನಂ. 194 ನೇಯ ಅಂಗನವಾಡಿ ನೂತನ ಕಟ್ಟಡದ ಉದ್ಘಾಟಿಸಿ ಮಾತನಾಡಿದ ಅವರು
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸುವುದರಿಂದ ಮಕ್ಕಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪಗೊಳ್ಳುತ್ತಾರೆ. ಸರ್ಕಾರದಿಂದ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರದ ಜೊತೆ ಉತ್ತಮವಾದ ಶಿಕ್ಷಣ ನೀಡುತ್ತಾರೆಂದರು.
ಸಿಡಿಪಿಓ ಅರುಣಕುಮಾರ ಮಾತನಾಡಿ ಜಗತ್ತಿನಲ್ಲಿ ಎಲ್ಲವೂ ಪಡೆದುಕೊಂಡು ಕಳೆದುಕೊಳ್ಳಬಹುದು ಆದರೆ ಒಮ್ಮೆ ಕಲಿತ ವಿದ್ಯೆಯನ್ನು ಯಾವತ್ತಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಸರ್ಕಾರ ಅಂಗನವಾಡಿ ಮಕ್ಕಳಿಗೆ ವಿವಿಧ ಯೋಜನೆ ಜಾರಿಗೆ ತಂದಿದೆ ಅದರ ಸದುಪಯೋಗ ಎಲ್ಲ ಮಕ್ಕಳಿಗೆ ಮುಟ್ಟಬೇಕೆಂದರು.
ಎಸಿಡಿಪಿಓ ದೀಪಾ ಹೆಬ್ಬಳ್ಳಿ ಮಾತನಾಡಿ ಈಗಿನ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗಿಂತ ಕಮ್ಮಿಯಿಲ್ಲ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ನೋಡಿದರೆ ಗೊತ್ತಾಗುತ್ತದೆ. ಹೀಗಾಗಿ ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿ ಶಾಲೆಗಳಿಗೆ ಸೇರಿಸಿ ಶಾಲೆ ಉಳಿಸಿ ಬೆಳೆಸಬೇಕೆಂದರು.
ಈ ವೇಳೆ ಅಂಗನವಾಡಿ ಮೇಲ್ವಿಚಾರಕಿ ಗೀತಾ ಕಮತಗಿ, ಅಂಗನವಾಡಿ ಶಿಕ್ಷಕಿ ಯಶೋದಾ ಗೋಂದಳಿ, ಸಹಾಯಕಿ ರೂಪಾ ಲಂಗೋಟಿ, ನಾಗರಾಜ ಅಸುಂಡಿ, ಗುತ್ತಿಗೆದಾರ ರಾಜು ಜಾಂಗಟಿ, ಪ್ರವೀಣಗೌಡ ಚಿಕ್ಕನಗೌಡರ, ಅಸ್ಫಾಕ ಹವಾಲ್ದಾರ, ಶಂಕರ ಬಡಿಗೇರ, ಉಮೇಶ ಹುಂಬಿ, ಈರಣ್ಣ ಅಕ್ಕಿ, ಮಂಜುನಾಥ ಗಂಗಪ್ಪನವರ, ಸುರೇಶ ಕಿತ್ತೂರು. ಆಕಾಶ ದಡ್ಡಿ, ಕುತಬುನದೀಮುಲ್ಲಾ, ಪತ್ರಕರ್ತ ಜಗದೀಶ ಕಡೋಲಿ, ಕೃಷ್ಣಾ ಬಾಳೇಕುಂದರಗಿ, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಆರೋಗ್ಯ ಇಲಾಖೆ ಹಾಗೂ ಮಕ್ಕಳು ಸೇರಿದಂತೆ ಇತರರಿದ್ದರು.