ಶಿಕ್ಷಣದೊಂದಿಗೆ ಸಂಸ್ಕಾರ ನೀಡುವ ಕಾರ್ಯವಾಗಲಿ: ನಾಗಪ್ಪಾ

ಆಳಂದ:ಮಾ.2: ಮಕ್ಕಳಿಗೆ ಶಾಲೆಯಲ್ಲಿ ಮತ್ತು ಮನೆಗಳಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ ಕೊಡಿಸುವ ಕಾರ್ಯವಾಗಲಿ ಎಂದು ನರೋಣಾ ಭೀಮಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ನಾಗಪ್ಪ ಎಸ್. ದೇವಂತಗಿ ಅವರು ಹೇಳಿದರು.

ತಾಲೂಕಿನ ನರೋಣಾ ಗ್ರಾಮದಲ್ಲಿನ ಭೀಮ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ 7ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದ ಅವರು ಮಾತನಾಡಿದರು.

ಕನ್ನಡ ಶಾಲೆ ಉಳಿವಿಗಾಗಿ ಎಲ್ಲರೂ ಶ್ರಮಿಸೋಣ ಶಾಲೆಗಳು ಜೀವಂತ ದೇವಾಲಯ ತಂದೆ, ತಾಯಿ ಮೊದಲು ದೇವರಾಗಿದ್ದಾರೆ ಒಳ್ಳೆಯ ಸಂಸ್ಕಾರ ಉನ್ನತ ಶಿಕ್ಷಣ ಪಡೆದು ಗ್ರಾಮದ ತಾಲೂಕಿನ ಕೀರ್ತಿ ಹೆಚ್ಚಿಸಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆ ಎಸ್‍ಡಿಎಂಸಿ ಉಪಾಧ್ಯಕ್ಷ ಚಂದ್ರಕಾಂತ್ ಹಾದಿಮನಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಂಸ್ಥೆಯ ಸಹ ಕಾರ್ಯದರ್ಶಿ ಪ್ರಭು ಶಿರೂರಕರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಮನೇಶ ಸುತಾರ, ಸೈಯದ್‍ಸಾಬ, ಜ್ಞಾನಜೋತಿ ಪ್ರೌಢಶಾಲೆ ಮುಖ್ಯರುಗಳು ಶಿವಲಿಂಗಪ್ಪ ಚನಗೊಂಡ, ರವಿ ಎಸ್. ರಾಗಿ, ಸುಲ್ತಾನ ಇನಾಮದಾರ ಸೇರಿದಂತೆ ಪಾಲಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಕ್ಷಕ ಶಿವರಾಜ ಯವತೆ ಸ್ವಾಗತಿಸಿದರು. ಶಿಕ್ಷಕಿ ಭಾಗ್ಯಶ್ರೀ ಇಟಿಕರ್ ನಿರೂಪಿಸಿದರು. ಅರುಣ್‍ಕುಮಾರ್ ಬೈರಗೊಂಡ ವಂದಿಸಿದರು. ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.