ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ: ಪುಟ್ಟರಂಗಶೆಟ್ಟಿ

ಚಾಮರಾಜನಗರ, ಜೂ.25:- ಯಾವುದೇ ದೇಶವು ಮುಂದುವರಿಯಲು ಶಿಕ್ಷಣವು ಪ್ರಮುಖ ಪಾತ್ರ ವಹಿಸುತ್ತದೆ. ಮೌಲ್ಯಯುತ ಶಿಕ್ಷಣದಿಂದ ಮಾತ್ರದೇಶದ ಪ್ರಗತಿ ಸಾಧ್ಯ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ತಿಳಿಸಿದರು.
ನೆಹರುಯುವ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಾಷ್ಟ್ರೀಯ ಸೇವಾ ಯೋಜನೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲಾಡಳಿತ ಭವನದ ಆವರಣದಲ್ಲಿರುವ ಡಾ. ರಾಜ್‍ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಇಂದು ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವ ಉತ್ಸವವು ಯುವ ಜನರಿಗೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಹಕಾರಿಯಾಗುತ್ತದೆ. ಯುವ ಜನರು ತಮ್ಮಲಿರುವ ಕಲೆ, ಸಾಹಿತ್ಯ ಪ್ರತಿಭೆಯನ್ನು ಅನಾವರಣಗೊಳಿಸಿ ಮುಖ್ಯವಾಹಿನಿಯಲ್ಲಿ ಬರುವಂತಾಗಬೇಕು. ಈ ನಿಟ್ಟಿನಲ್ಲಿ ಯುವಜನರು ಹೆಜ್ಜೆ ಹಾಕಿದಾಗ ಮಾತ್ರ ಜಿಲ್ಲೆಯ ಕೀರ್ತಿಯು ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಪ್ರಸ್ತುತ ದಿನಗಳಲ್ಲಿ ಶಿಕ್ಷಣಕ್ಕೆ ತುಂಬಾ ಮಹತ್ವ ನೀಡಲಾಗಿದೆ. ಎಲ್ಲಾ ಹುದ್ದೆಗಳಿಗೂ ಅದರದೇ ಮಹತ್ವವುಕೂಡ ಹೆಚ್ಚಾಗಿದೆ. ವಿದ್ಯಾರ್ಥಿಗಳು ಇದನ್ನುಅರ್ಥ ಮಾಡಿಕೊಂಡು ವಿದ್ಯಾಭ್ಯಾಸ ಮಾಡಬೇಕು. ಸ್ಪರ್ಧಾತ್ಮಕ ಪ್ರಪಂಚದಲ್ಲಿ ಗಟ್ಟಿಯಾಗಿ ನಿಲ್ಲಲುಚೆನ್ನಾಗಿ ಓದಬೇಕು. ಯುವಜನರು ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಶೈಕ್ಷಣಿಕವಾಗಿ ಆರ್ಥಿಕವಾಗಿ ಬೆಳೆದು ದೇಶದ ಬೆಳವಣಿಗೆಯಲ್ಲಿ ಭಾಗಿಯಾಗಿಬೇಕು ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಹೇಳಿದರು.
ರಾಷ್ಟ್ರೀಯಯುವ ಪ್ರಶಸ್ತಿ ಪುರಸ್ಕøತ ಸುರೇಶ್ ಎನ್. ಋಗ್ವೇದಿ ಅವರು ಮಾತನಾಡಿ ಯುವಜನತೆಯು ನಾಡಿನ ಬಹು ದೊಡ್ಡ ಶಕ್ತಿಯಾಗಿದೆ. ಯುವಜನರು ತಮ್ಮ ಆಸಕ್ತಿಯನ್ನು ದೇಶದ ಅಭಿವೃದ್ಧಿಯಲ್ಲಿ ತೋರಿಸಿದಾಗ ಮಾತ್ರದೇಶವು ಮುಂದಿವರಿದÀ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಲೂ ಸಾಧ್ಯವಾಗುತ್ತದೆ. ಜಿಲ್ಲೆಯು ಜಾನಪದ, ಪವಾಡ ಪುರುಷರಿಂದ ಹೆಸುರುವಾಸಿಯಾಗಿದೆ ಎಂದರು.
ನೆಹರು ಯುವ ಕೇಂದ್ರ ಜಿಲ್ಲಾ ಯುವ ಜನ ಅಧಿಕಾರಿಅಭಿμÉೀಕ್ ಚವರೆ ಅವರು ಮಾತನಾಡಿದೇಶವು ಸ್ವಾತಂತ್ರ ಬಂದು 75 ವರ್ಷದಅಮೃತ ಮಹೋತ್ಸವವನ್ನ ಆಚರಿಸಿ ಮುಂದೆ ಸಾಗುತ್ತಿದೆ. ಭಾರತದೇಶವು 29 ವರ್ಷದೊಳಗಿನ ಹೆಚ್ಚು ಯುವಶಕ್ತಿ ಹೊಂದಿರುವಜಗತ್ತಿನ ಮೊದಲ ರಾಷ್ಟ್ರವಾಗಿದೆ. ಜಿಲ್ಲಾ ಮಟ್ಟದ ಯುವ ಉತ್ಸವವು ಜಿಲ್ಲೆಯಯುವ ಪ್ರತಿಭೆಗಳಿಗೆ ಒಂದು ಒಳ್ಳೇಯ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಚರಣ್ ಬಿಳಿಗಿರಿಗೆ ದ್ವಿತೀಯ ಸ್ಥಾನ:
ಜಿಲ್ಲಾಮಟ್ಟದಯುವಉತ್ಸವ 2023ರಲ್ಲಿ ಮೊಬೈಲ್ ಫೆÇೀಟೋಗ್ರಫಿ ಸ್ಪರ್ಧೆಯಲ್ಲಿ ಎಸ್ ಚರಣ್ ಬಿಳಿಗಿರಿ ದ್ವಿತೀಯ ಸ್ಥಾನ ತನ್ನದಾಗಿಸಿಕೊಂಡಿದ್ದಾರೆ
ರಾಷ್ಟ್ರೀಯ ಸೇವಾ ಯೋಜನೆಯ ಜಿಲ್ಲಾ ಸಂಯೋಜನಾಧಿಕಾರಿ ಡಾ. ಎಂ.ಬಿ. ಮಹೇಶ್, ಜಾನಪದ ಕಲಾವಿದ ಸಿ.ಎಂ. ನರಸಿಂಹಮೂರ್ತಿ, ಬಾಲಕಾರ್ಮಿಕ ಸೊಸೈಟಿ ಯೋಜನಾಧಿಕಾರಿ ಎಂ. ಮಹೇಶ್, ಜೈ ಭುವನೇಶ್ವರಿ ಕನ್ನಡ ಯುವ ವೇದಿಕೆ ಅಧ್ಯಕ್ಷ ಜಿ. ಬಂಗಾರು, ಲೆಕ್ಕಾಧಿಕಾರಿ ಸತೀಶ್, ಸಹನಾ ಹಾಗೂ ಇತರರು ಉಪಸ್ಥಿತರಿದ್ದರು.