
ಮೈಸೂರು: ಏ.10:- ಪಾಲಕರು ತಮ್ಮ ಮಕ್ಕಳು ಎಲ್ಲದರಲ್ಲೂ ಅತ್ಯುತ್ತಮರಾಗಬೇಕೆಂದು ಕನಸು ಕಟ್ಟಿಕೊಂಡಿರುತ್ತಾರೆ. ಅವರ ಕನಸು ನನಸು ಮಾಡಲು ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಉತ್ತಮ ಸಾಧನೆ ಮಾಡಿದರೆ ಉಜ್ವಲ ಭವಿಷ್ಯ ಕಾಣಲು ಸಾಧ್ಯವಾಗುತ್ತದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ಹೇಳಿದರು.
ವಿದ್ಯಾರಣ್ಯಪುರಂನಲ್ಲಿರುವ ವಿದ್ಯಾರಣ್ಯ ಟ್ರಸ್ಟ್ ಹಾಗೂ ವಿದ್ಯಾರಣ್ಯ ಕೋಚಿಂಗ್ ಸೆಂಟರ್ 10ನೇ ವರ್ಷದ ವಾರ್ಷಿಕೋತ್ಸವ ಹಾಗೂ 2023- 24 ನೇ ಸಾಲಿನ ಶೈಕ್ಷಣಿಕ ಪ್ರವಾಸದ ಪ್ರಾರಂಭ ದಲ್ಲಿ ಮಕ್ಕಳಿಗೆ ಟಿ-ಶರ್ಟ್ ಹಾಗೂ ಓದುವ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ
ಅವರು ಆಸ್ತಿ, ಅಧಿಕಾರ ಹಾಗೂ ಅಂತಸ್ತನ್ನು ಕಸಿದುಕೊಳ್ಳ ಬಹುದು, ಆದರೆ ನಾವು ಪಡೆದಿರುವ ವಿದ್ಯೆಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಮಕ್ಕಳಿಗೆ ಆತ್ಮ ವಿಶ್ವಾಸವನ್ನುಂಟು ಮಾಡುವ ಶಿಕ್ಷಣವನ್ನು ನೀಡಿರಿ ಎಂದು ಹೇಳಿದರು
ನಂತರ ಮಾತನಾಡಿದ ಹಿರಿಯ ಸಮಾಜ ಸೇವಕರಾದ ಕೆ ರಘುರಾಮ್ ವಾಜಪೇಯಿ ಮಕ್ಕಳಿಗೆ ಒಳ್ಳೆಯ ವಿದ್ಯೆ ಸಂಸ್ಕಾರ ಕೊಡಿಸುವುದು ಪಾಲಕರ ಆದ್ಯ ಕರ್ತವ್ಯವಾಗಿದ್ದಂತೆ, ಗುರು ಗಳಾದವರು ಮಕ್ಕಳ ಆಜ್ಞಾನವನ್ನು ತಿದ್ದಿ ಸುಜ್ಞಾನಿಗಳನ್ನಾಗಿ ಮಾಡುವ ಜವಾಬ್ದಾರಿಯಾಗಿದೆ. ಅದಕ್ಕಾಗಿ ಸಮಾಜದಲ್ಲಿರುವ ಎಲ್ಲ ವ್ಯಕ್ತಿಗಳು ಮಕ್ಕಳು ತಪ್ಪುಗಳನ್ನು ಮಾಡದಂತೆ ತಿಳುವಳಿಕೆ ನೀಡಬೇಕು. ವಿದ್ಯೆ ಸಂಸ್ಕಾರ ಕೊಡುವುದು ಎಲ್ಲರ ಜವಾ ಬ್ದಾರಿಯಾಗಿದ್ದು, ನೈತಿಕ ಶಿಕ್ಷಣ ಹಾಗೂ ಜವಾಬ್ದಾರಿ ನಿರ್ವಹಿಸುವ ಕಲೆಯನ್ನು ಕಲಿಸಿಕೊಡಬೇಕು. ಇಂದು ಶಿಕ್ಷಣ ಅತಿ ಅವಶ್ಯವಾ ಗಿದ್ದು, ತಾನೂ ತೊಂದರೆಪಡದೇ ಇನ್ನೊಬ್ಬರಿಗೂ ತೊಂದರೆ ಕೊಡದೇ ಬದುಕುವುದೇ ನಿಜವಾದ ಶಿಕ್ಷಣ, ಧರ್ಮ ಮಾರ್ಗದಲ್ಲಿ ಶಿಕ್ಷಣ ನೀಡ ಬೇಕು ಅಂದಾಗ ಆತ್ಮವಿಶ್ವಾಸ ಮೂ ಡಲು ಸಾಧ್ಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್, ಇದೇ ಸಮಾಜ ಸೇವಕರಾದ ಡಾಕ್ಟರ್ ಕೆ ರಘುರಾಮ್ ವಾಜಪೇಯಿ, ನಗರಪಾಲಿಕ ಸದಸ್ಯರಾದ ಮಾ ವಿ ರಾಮ್ ಪ್ರಸಾದ್, ಮನೋರೋಗ ತಜ್ಞರಾದ ಡಾ. ರೇಖಾ ಮನ ಶಾಂತಿ, ಸಮಾಜ ಸೇವಕರಾದ ಡಾಕ್ಟರ್ ಚಕ್ರಪಾಣಿ, ವಿದ್ಯಾರಣ್ಯ ಟ್ರಸ್ಟ್ ಅಧ್ಯಕ್ಷರಾದ ಡಾ. ಜಿ ವಿ ರವಿಶಂಕರ್, ಹಾಗೂ ಇನ್ನಿತರರು ಭಾಗಿಯಾಗಿದ್ದರು