ಶಿಕ್ಷಣದಿಂದ ಮನೋವಿಕಾಸ: ಕಲ್ಮಠ


(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜು,19- ಶಿಕ್ಷದಿಂದ ವಿದ್ಯಾರ್ಥಿಗಳ ಮನೋವಿಕಾಸವಾಗಬೇಕೆ ಹೊರತು, ಮನೋವಿಕಾರವಾಗಬಾರದು. ವಿದ್ಯಾರ್ಥಿಗಳು
ಸಿನಿಮಾ ನಾಯಕರ ವೇಷ ಭೂಷಣಗಳನ್ನು ಅನುಕರಿಸದೆ ಚಿತ್ರದ ನೈತಿಕ ಮೌಲ್ಯಗಳನ್ನು ಮಾದರಿಯಾಗಿರಿಸಿಕೊಂಡು ಅನುಸರಿಸಬೇಕು ಎಂದು ನಗರದ ಕಿತ್ತೂರು ಚೆನ್ನಮ್ಮ ಪ್ರೌಡಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಸಿದ್ದರಾಮ ಕಲ್ಮಠ ಹೇಳಿದ್ದಾರೆ
ಅವರು ನಿನ್ನೆ ನಗರದ ವಿ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನ ದ್ವಿತೀಯ ಪಿ ಯು ವಿದ್ಯಾರ್ಥಿಗಳು ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ “ಸ್ವಾಗತ ಕಾರ್ಯಕ್ರಮ”ದಲ್ಲಿ ಮಾತನಾಡುತ್ತಿದ್ದರು.
ಫಾರ್ಮಸಿ ಕಾಲೇಜಿನ ಆಡಳಿತ ಮಂಡಳಿಯ ಅದ್ಯಕ್ಷ ಬೈಲುವದ್ದಿಗೇರಿ ಎರ್ರಿಸ್ವಾಮಿ ಅವರು ಮಾತನಾಡಿ, ವೀ.ವಿ.ಸಂಘವು ಕಳೆದ ಒಂದು ಶತಮಾನದಿಂದ ವಿದ್ಯಾದಾನ ಮಾಡುತ್ತಿರುವ ಸಂಸ್ಥೆಯಾಗಿದ್ದು.ಈ ಸಂಸ್ಥೆಯಲ್ಲಿ ಅಬ್ಯಾಸ ಮಾಡುವ ಎಲ್ಲಾ ವಿದ್ಯಾರ್ಥಿಗಳು ಪುಣ್ಯವಂತರು ಕನಿಷ್ಟ ಹಣದಲ್ಲಿ ಗರಿಷ್ಠ ಶಿಕ್ಷಣ ಕೊಡುವ ಏಕೈಕ ಸಂಸ್ಥೆ ಎಂದರೆ ಅದು ವೀ.ವಿ.ಸಂಘ ಮಾತ್ರ ಎಂದು ಸಂಘದ ಕಾರ್ಯವನ್ನು ಶ್ಲಾಘಿಸಿದರು,
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅದ್ಯಕ್ಷ ಏಳುಬೆಂಚಿ ರಾಜಶೇಖರಗೌಡ ಅವರು, ವಿದ್ಯಾರ್ಥಿಗಳ ಸಂಘಟನಾ ಕಾರ್ಯವನ್ನು ಶ್ಲಾಘಿಸಿದರು.
ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಕಾರಪುಡಿ ಎಂ ಮುದ್ದನಗೌಡ ಪ್ರಾಂಶುಪಾಲ ಡಾ.ಎಸ್ ಮಂಜುನಾಥ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ವೀರೇಶಸ್ವಾಮಿ ಪ್ರಸ್ತಾವಿಕವಾಗಿ ಮಾತನಾಡಿದರೆ‌ ವಿದ್ಯಾರ್ಥಿಗಳಾದ ಶ್ರಾವಣಿ ಮತ್ತು ತಂಡದವರು ಪ್ರಾರ್ಥಸಿದರೆ. ಗಂಗೋತ್ರಿ ಸ್ವಾಗತಿಸಿದರು .ನಿಖಿತಾ. ಸೃಜನಶ್ರೀ.
ಜಾಯ್ಸನ್ ಹಾಗು ಕೀರ್ತನ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು . ರಂಜಿತ . ಗೌತಮಿ ಅತಿಥಿಗಳನ್ನು ಪರಿಚಯಿಸಿದರೆ, ನಂದಿನಿ ವಂದನೆ ಸಲ್ಸಿಲಿದರು ರವಿತೇಜ ಹಾಗು ಮೇಘಮಾಲ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಹರ್ಷಿತಾ ಹಾಗು ನಾಝಿಯಾ ಸಾಂಸೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.