
ಬೀದರ:ಫೆ.27:ಅಶ್ವಿನಿ ಕುದರೆ ಪಬ್ಲಿಕ್ ಶಾಲೆಯ 13 ನೇ ವರ್ಷದ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಬೆಳಮಗಿ ರವರು ಇಂದಿನ ಮಕ್ಕಳು ಎಷ್ಟೇ ಪ್ರತಿಭೆಗಳು ಹೊಂದಿದರು ಸಹ ಶಿಕ್ಷಣದಿಂದ ಮಾತ್ರ ಅವರ ಭವಿಷ್ಯ ಉಜ್ವಲ ಆಗಲು ಸಾಧ್ಯ
ಇಂದು ಅಶ್ವಿನಿ ಕುದರೆ ಪಬ್ಲಿಕ್ ಶಾಲೆಯ ಅಧ್ಯಕ್ಷ ಶಂಬುಲಿಂಗ ಕುದರೆ ರವರ ಬಡ ಮಕ್ಕಳಿಗೆ, ಸುಸಜ್ಜಿತವಾದ ಶಾಲಾ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳನ್ನು ನೀಡಿ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಶಾಲೆಯ ಬೆಳವಣಿಗೆಗೆ ಇಲಾಖೆ ಕಡೆಯಿಂದ ಸಹಾಯ ಸಹಕಾರ ನೀಡುವುದಾಗಿ ತಿಳಿಸಿದರು.
ನಗರ ಸಭೆಯ ಪೌರಾಯುಕ್ತರಾದ ಶಿವರಾಜ ರಾಠೋಡ ರವರು ದ್ವೀಪ ಬೆಳೆಗಿಸಿ ಸಮಾರಂಭಕ್ಕೆ ಚಾಲನೆ ನೀಡಿದರು
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಗಾಂಧಿಗಂಜ್ ಪೆÇೀಲಿಸ್ ಠಾಣೆಯ ಪೆÇೀಲಿಸ ಇನ್ಸ್ಪೆಕ್ಟರ್ ಹಣಮರೇಡ್ಡಿ ರವರು ಮಾತನಾಡಿ ಶಂಭುಲಿಂಗ ಕುದರೆ ರವರು ಅವರ ತಂದೆ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಹುಟ್ಟು ಹಾಕಿ ಇಂದು ಬಡವರ ಶೋಷಿತರ ವಿಶೇಷವಾಗಿ ಇರಾನಿ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು ಮತ್ತು ಇರಾನಿ ಸಮೂದಾಯದ ಮಕ್ಕಳು ಶಿಕ್ಷಣ ಪಡೆದು ಉನ್ನತ ಅಧಿಕಾರಿಗಳು ಆಗಲು ಕಿವಿಮಾತು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಶಂಬುಲಿಂಗ ಕುದರೆ ವಹಿಸಿದರು
ವೇದಿಕೆಯಲ್ಲಿ ನಗರ ಸಭೆ ಎಇಇ ರಾಜಶೇಖರ ಮಠ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಶಿವರಾಜ ಕುದರೆ, ಬಿ.ಆರ್.ಪಿ ತಾನಾಜಿ ಸರ್,ನಗರ ಸಭೆಯ ವಸತಿ ಯೋಜನೆಯ ಅಧಿಕಾರಿ ರವಿ ಸುಕುಮಾರ , ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜೈಶ್ರೀ ಕುದರೆ ಬುಧ್ದ ಬೆಳಕು ಟ್ರಸ್ಟ್ ಅಧ್ಯಕ್ಷ ಮಹೇಶ ಗೋರನಾಳಕರ್ ಉಪಸ್ಥಿತರಿದ್ದರು
ಅಶ್ವಿನಿ ಕುದರೆ ಪಬ್ಲಿಕ್ ಶಾಲೆಯ ಖಜಾಂಚಿ ಅಶ್ವಿನಿ ಕುದರೆ ಕಾರ್ಯಕ್ರಮ ನಿರೂಪಿಸಿದರು, ಶಾಲೆಯ ಮುಖ್ಯ ಆಡಳಿತಾಧಿಕಾರಿ ಪ್ರಸಾದ ಸಾಳೂಂಕೆ ಸ್ವಾಗತಿಸಿದರು,